ಮನೆ ರಾಜ್ಯ ಬೆಳಗಾವಿ: ಬೃಹತ್‌ ರೋಡ್‌ ಶೋ ನಡೆಸಿದ ಬಿ.ಎಸ್.ಯಡಿಯೂರಪ್ಪ

ಬೆಳಗಾವಿ: ಬೃಹತ್‌ ರೋಡ್‌ ಶೋ ನಡೆಸಿದ ಬಿ.ಎಸ್.ಯಡಿಯೂರಪ್ಪ

0

ಬೆಳಗಾವಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ, ಶಾಸಕ ಬಿ.ಎಸ್. ಯಡಿಯೂರ‍ಪ್ಪ ಅವರು ಪಟ್ಟಣದಲ್ಲಿ ಶನಿವಾರ ಬೃಹತ್‌ ರೋಡ್‌ ಶೋ ನಡೆಸಿದರು.

ಗೋ ಪೂಜೆ ಮಾಡಿ ಚನ್ನಮ್ಮನ ಪ್ರತಿಮೆಗೆ ಗೌರವ ಸಮರ್ಪಿಸಿದ ಯಡಿಯೂರಪ್ಪ ಯಾತ್ರೆಗೆ ಚಾಲನೆ ನೀಡಿದರು.

ರಾಣಿ ಚನ್ನಮ್ಮ ವೃತ್ತದಿಂದ ಆರಂಭವಾದ ರೋಡ್ ಶೋ ರಾಯಣ್ಣ ವೃತ್ತದ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತ ತಲುಪಿತು. ಮಾರ್ಗದುದ್ದಕ್ಕೂ ವಿವಿಧ ವಾದ್ಯಮೇಳಗಳು ಕಳೆತಂದವು. ಅಪಾರ ಸಂಖ್ಯೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ನಿರಂತರ ಜೈಕಾರ ಮೊಳಗಿಸಿದರು.

ಬಿಜೆಪಿ ಬಾವುಟ ಹಿಡಿದು, ಕೇಸರಿ ರುಮಾಲು, ಟೊಪ್ಪಿಗೆ ಹಾಕಿಕೊಂಡು ಕಾರ್ಯಕರ್ತರು ಮೆರವಣಿಗೆ ಮುಂದೆ ಕುಣಿದು ಕುಪ್ಪಳಿಸಿದರು.  ಬಡ್ಲಿ ಗ್ರಾಮದ ಲಂಬಾಣಿ ಮಹಿಳಾ ತಂಡದ ಲಂಬಾಣಿ ಕುಣಿತದ ಮೂಲಕ ಗಮನ ಸೆಳೆದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವರಾದ ಮುರಗೇಶ ನಿರಾಣಿ, ಸಿ.ಸಿ.ಪಾಟೀಲ, ಶಾಸಕರಾದ ರಮೇಶ ಜಾರಕಿಹೊಳಿ, ಮಹಾಂತೇಶ ದೊಡಗೌಡ್ಡರ, ಸಂಸದರಾದ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮುಖಂಡರಾದ ಮಹಾಂತೇಶ ಕವಟಗಿಮಠ, ಜಗದೀಶ ಮೆಟಗುಡ್ಡ ಯಾತ್ರೆಯಲ್ಲಿ ಇದ್ದರು.