ಮನೆ ಕಾನೂನು ಬೆಳಗಾವಿ: ನಕಲಿ ವೈದ್ಯನಿಗೆ ಜೈಲು

ಬೆಳಗಾವಿ: ನಕಲಿ ವೈದ್ಯನಿಗೆ ಜೈಲು

0

ಬೆಳಗಾವಿ: ಪಿಯುಸಿ ಅಧ್ಯಯನ ಮಾಡಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯನೊಬ್ಬನಿಗೆ ಒಂದು ವಾರ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪರಿಹಾರ ಪ್ರಾಧಿ ಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ಆದೇಶಿದ್ದಾರೆ.

Join Our Whatsapp Group

ಕೆರೂರಿನಲ್ಲಿ ಮುಲ್ಲಾ ಕ್ಲಿನಿಕ್ ನಡೆಸುತ್ತಿದ್ದ ರಿಯಾಜ್ ಅಬ್ಬಾಸ್ ಮುಲ್ಲಾ ಶಿಕ್ಷೆಗೊಳಗಾದ ನಕಲಿ ವೈದ್ಯ. ಚಿಕ್ಕೋಡಿ ತಾಲೂಕು ವೈದ್ಯಾಧಿಕಾರಿ ಕ್ಲಿನಿಕ್ ಪರಿಶೀಲನೆ ನಡೆಸಿದ ಮೇಳೆ ರಿಯಾಜ್ ಮುಲ್ಲಾ ವೈದ್ಯ ಪದವಿ ಅಧ್ಯಯನ ಮಾಡದೇ ಇರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಜಿಲ್ಲಾ ಕೆಪಿಎಂಇ ನೋಂದಣಿ ಮತ್ತು ಪರಿಹಾರ ಪ್ರಾಧಿಕಾರದ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ಸಲ್ಲಿಸಿದ್ದರು.