ಮನೆ ಕಾನೂನು ಬೆಳಗಾವಿ: ದಾಖಲೆ‌ ಇಲ್ಲದೇ ಸಾಗಿಸುತ್ತಿದ್ದ 6.65 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ‌ ಇಲ್ಲದೇ ಸಾಗಿಸುತ್ತಿದ್ದ 6.65 ಲಕ್ಷ ರೂ. ನಗದು ವಶ

0

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಇರುವ ಬಾಚಿ ಚೆಕ್ ಪೋಸ್ಟ್ ನಲ್ಲಿ ದಾಖಲೆ‌ ಇಲ್ಲದೇ ಸಾಗಿಸುತ್ತಿದ್ದ 6.65 ಲಕ್ಷ ರೂ. ನಗದು ಹಣವನ್ನು ಸೋಮವಾರ ಮಧ್ಯರಾತ್ರಿ ವಶಪಡಿಸಿಕೊಳ್ಳಲಾಗಿದೆ.

Join Our Whatsapp Group

ಅಮೂಲ್ ವಿದ್ಯಾಧರ ಬೆಳಗಾವಿ ಎಂಬಾತ ಕಾರಿನಲ್ಲಿ ಸಾಗಿಸುತ್ತಿದ್ದ 6.65 ಲಕ್ಷ ರೂ.‌ಹಣಕ್ಕೆ ಸೂಕ್ತ ದಾಖಲೆಗಳು ಇಲ್ಲದ ಕಾರಣಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ.

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್‌ ನಲ್ಲಿ ಇದ್ದ ಅಧಿಕಾರಿ‌ ಪ್ರಶಾಂತ ದಿಕ್ಷೀತ್ ಹಾಗೂ ಎಸ್ ಎಸ್ ಟಿ ತಂಡ ಈ ಕಾರ್ಯಾಚರಣೆ ನಡೆಸಿದೆ.