ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ ಹಿನ್ನೆಲೆ ಚುನಾವಣಾಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರ, ಟಿಫಿನ್ ಬಾಕ್ಸ್’ಗಳನ್ನು ಜಪ್ತಿ ಮಾಡಿದ್ದಾರೆ.
ಸವದತ್ತಿಯ ಸಂಭವ ಟಿಂಬರ್ ಯಾರ್ಡ್ ಗೋದಾಮು ಮೇಲೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು 23,84,272 ರೂ. ಮೌಲ್ಯದ 1,012 ಹೊಲಿಗೆ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
11,27,840 ರೂ. ಮೌಲ್ಯದ 1,060 ಐರನ್ ಸ್ಟ್ಯಾಂಡ್ಗಳು. ಜೆಡಿಎಸ್ ಅಭ್ಯರ್ಥಿ ಸೌರವ್ ಚೋಪ್ರಾ ಭಾವಚಿತ್ರವಿರುವ 3.24 ಲಕ್ಷ ಮೌಲ್ಯದ 2,160 ಟಿಫಿನ್ ಬಾಕ್ಸ್ಗಳನ್ನು ಜಪ್ತಿ ಮಾಡಲಾಗಿದೆ. ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.