ಮನೆ ಸುದ್ದಿ ಜಾಲ ಬಳ್ಳಾರಿ : ಕೃಷಿಹೊಂಡದಲ್ಲಿ ಬಿದ್ದು 13 ವರ್ಷದ ಬಾಲಕ ಸಾವು!

ಬಳ್ಳಾರಿ : ಕೃಷಿಹೊಂಡದಲ್ಲಿ ಬಿದ್ದು 13 ವರ್ಷದ ಬಾಲಕ ಸಾವು!

0

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮದಲ್ಲಿ ವಿಷಾದಕರ ಘಟನೆ ನಡೆದಿದೆ. ವೀರೇಶ್ (13) ಎಂಬ ಬಾಲಕನೊಬ್ಬ ಕೃಷಿಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಮೃತ ವೀರೇಶ್ ಕುರಿ ಮೇಯಿಸಲು ಹೊರ ಹೋಗಿದ್ದಾಗ, ಮಧ್ಯದಲ್ಲಿ ನೀರು ಕುಡಿಯಲು ಹೋಗಿ ಆಯತಪ್ಪಿ ಕೃಷಿಹೊಂಡದಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ತಡವಾಗಿ ತಿಳಿದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ನಡೆಸಿದ್ದು, ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ.

ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಸ್ಥಳೀಯರ ಪ್ರಕಾರ, ಹೊಂಡದ ಸುತ್ತು ಕಟ್ಟೆಯಾಗದ ಕಾರಣ ಇಂತಹ ದುರಂತ ಸಂಭವಿಸಿದೆ.