ಬಳ್ಳಾರಿ: ಮಾದರಿ ನೀತಿ ಸಂಹಿತೆ ಜಾರಿ ಹಿನ್ನಲೆ ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 26 ಕೆಜಿ ಬೆಳ್ಳಿ, 3.55 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡ ಘಟನೆ ಬಳ್ಳಾರಿ ತಾಲೂಕು ಮೋಕಾ ಬಳಿ ನಡೆದಿದೆ.
ಬಳ್ಳಾರಿಯಿಂದ ಆಂಧ್ರದ ಆದೋನಿಗೆ ತೆಗೆದುಕೊಂಡು ಹೋಗುವಾಗ ಪರಿಶೀಲಿಸಿದ ಪೊಲೀಸರು ಕಚ್ಚಾ ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿದ್ದು, ವಶಪಡಿಸಿಕೊಂಡಿದ್ದಾರೆ.
ಸಣ್ಣಪುಟ್ಟ ಬೆಳ್ಳಿ ಕರಗಿಸಿ ಅಚ್ಚು ಮಾಡಿಸಿಕೊಂಡು ಕೊಂಡೊಯ್ಯುತ್ತಿದ್ದರು ಎನ್ನಲಾಗಿದ್ದು. ಬೆಳ್ಳಿ ಮತ್ತು ಹಣಕ್ಕೆ ದಾಖಲೆ ಇಲ್ಲದ ಕಾರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.