ಮನೆ ಅಪರಾಧ ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯನ​ ಅಪಹರಣ ಪ್ರಕರಣ: 7 ಮಂದಿ ಬಂಧನ, ಓರ್ವನಿಗೆ ಗುಂಡೇಟು

ಬಳ್ಳಾರಿ ಜಿಲ್ಲಾಸ್ಪತ್ರೆ ವೈದ್ಯನ​ ಅಪಹರಣ ಪ್ರಕರಣ: 7 ಮಂದಿ ಬಂಧನ, ಓರ್ವನಿಗೆ ಗುಂಡೇಟು

0

ಬಳ್ಳಾರಿ: ಇತ್ತೀಚೆಗೆ ನಡೆದ ಬಳ್ಳಾರಿ ಜಿಲ್ಲಾಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಕುಮಾರ್​ ಅಪಹರಣ ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಓರ್ವನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Join Our Whatsapp Group

ಜನವರಿ 25ರಂದು ಬೆಳಗಿನ ಜಾವ ಜಾಗಿಂಗ್​​ ಮಾಡುತ್ತಿದ್ದಾಗ ಸುನೀಲ್‌ ಅವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಲಾಗಿತ್ತು. ಬಳಿಕ ಅದೇ ದಿನ ರಾತ್ರಿ ಬಳ್ಳಾರಿ ನಗರದ ವಲಯದಲ್ಲಿ ವಾಪಸ್​ ತಂದು ಬಿಡಲಾಗಿತ್ತು. ಹಣಕ್ಕಾಗಿ ಕಿಡ್ನಾಪ್​ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಶ್ರೀಕಾಂತ್ ಮತ್ತು ರಾಕೇಶ್, ತರುಣ್, ಅರುಣ್, ಭೋಜರಾಜ್, ಸಾಯಿಕುಮಾರ್ ಹಾಗೂ ಇನ್ನೊಬ್ಬ ಆಂಧ್ರ ಪ್ರದೇಶ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿಸಲು ತೆರಳಿದ್ದಾಗ ಆರೋಪಿ ಶ್ರೀಕಾಂತ್​​ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದು, ಆತನ ಬಲಗಾಲಿಗೆ ಫೈರಿಂಗ್​ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಶ್ರೀಕಾಂತ್​ ಮೇಲೆ ಈ ಹಿಂದೆಯೂ ಕೂಡ ಪ್ರಕರಣಗಳು ದಾಖಲಾಗಿವೆ. ಆರೋಪಿಗಳೆಲ್ಲರನ್ನೂ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲೇ ಬಂಧಿಸಲಾಗಿದೆ. ಆರೋಪಿಗಳು ಸ್ಥಳೀಯರೇ ಎಂಬ ಶಂಕೆ ಮೇಲೆ ತನಿಖೆ ಕೈಗೊಳ್ಳಲಾಗಿತ್ತು. ಸಿಸಿಟಿವಿಯಲ್ಲಿ ಕಾರಿನ ದೃಶ್ಯ ಸೆರೆಯಾಗಿತ್ತು. ಅದರ ಆಧಾರದ ಮೇಲೆ ತನಿಖೆ ಕೈಗೊಂಡಾಗ ವಾಹನವು ಶ್ರೀಕಾಂತ್‌ನದ್ದು ಎಂಬುದು ಗೊತ್ತಾಗಿತ್ತು ಎಂದು ಎಸ್​​ಪಿ ಶೋಭಾ ರಾಣಿ ಮಾಹಿತಿ ನೀಡಿದ್ದಾರೆ.

ಗುಂಡೇಟಿನಿಂದ ಗಾಯಗೊಂಡ ಶ್ರೀಕಾಂತ್​​ಗೆ ಬಳ್ಳಾರಿಯ ಟ್ರಾಮಾ ಕೇರ್​​ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೊಳಗಾದ ಪೊಲೀಸ್ ಕಾನ್ಸ್​ಟೇಬಲ್​ ಕಾಳಿಂಗ ಅವರಿಗೆ ವಿಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಮುಖವಾಗಿ ಬಂಧಿತ ಶ್ರೀಕಾಂತ್​, ರಾಕೇಶ್​ ಹಾಗೂ ಮತ್ತೋರ್ವ ಆರೋಪಿ ಸೇರಿ ಕೃತ್ಯ ಎಸಗಿದ್ದರು ಎಂದು ಎಸ್ ​ಪಿ ತಿಳಿಸಿದ್ದಾರೆ.