ಮನೆ ಅಪರಾಧ ಪ್ರಿಯತಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪ್ರಿಯತಮೆ

ಪ್ರಿಯತಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪ್ರಿಯತಮೆ

0

ಬೆಂಗಳೂರು: ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರಿನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಅಮಾನವೀಯ ಘಟನೆ ನಗರದ ಪುಟ್ಟೇನಹಳ್ಳಿ ಬಳಿ ನಡೆದಿದೆ. ಪೊಲೀಸ್ ಪೇದೆ ಸಂಜಯ್ ಮೃತ ದುರ್ದೈವಿ ಎನ್ನಲಾಗಿದೆ. ಸಂಜಯ್ ಗೆ ಹೋಮ್ ಗಾರ್ಡ್ ರಾಣಿ ಎಂಬಾಕೆ ಬೆಂಕಿ ಹಚ್ಚಿ ಹತೈಗೈದಿದ್ದಾಳೆ.

ಅಂದಹಾಗೆ ಸಂಜಯ್ ಹಾಗೂ ರಾಣಿ ಇಬ್ಬರೂ ಬಸವನಗುಡಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ವಿವಾಹವಾಗಿದ್ದರೂ ಸಂಜಯ್ ನನ್ನು ರಾಣಿ ಪ್ರೀತಿ ಮಾಡುತ್ತಿದ್ದಳು. ಇತ್ತೀಚಿಗೆ ಸಂಜಯ್ ನಿಂದ ದೂರವಾಗಲು ಆಕೆ ಬಯಸಿದ್ದಾಳೆ. ಇದರಿಂದ ಹತಾಶೆಗೊಂಡ ಸಂಜಯ್ ಆಕೆಯ ಮನೆಗೆ ಹೋಗಿದ್ದು, ಬೇರೊಬ್ಬನ ಜೊತೆಗಿನ ಸಂಪರ್ಕದ ಬಗ್ಗೆ ಪ್ರಶ್ನಿಸಿದ್ದಾನೆ ಎನ್ನಲಾಗಿದೆ.

ಇದರಿಂದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ಯುದ್ಧ ನಡೆದಿದ್ದು, ಸಂಜಯ್ ಮೇಲೆ ಪೆಟ್ರೋಲ್ ಸುರಿದ ರಾಣಿ ಬೆಂಕಿ ಹಚ್ಚಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.