ಮನೆ ಆರೋಗ್ಯ ಹಾಲಿನ ಜೊತೆ ಗೋಡಂಬಿ ಮಿಕ್ಸ್‌ ಮಾಡಿ ಸೇವಿಸುವುದರಿಂದ ಸಿಗುವ ಪ್ರಯೋಜನಗಳು

ಹಾಲಿನ ಜೊತೆ ಗೋಡಂಬಿ ಮಿಕ್ಸ್‌ ಮಾಡಿ ಸೇವಿಸುವುದರಿಂದ ಸಿಗುವ ಪ್ರಯೋಜನಗಳು

0

ಗೋಡಂಬಿ ಬೀಜಗಳಲ್ಲಿ ನೈಸರ್ಗಿಕವಾದ ಸಿಹಿ ಅಂಶ ಇರುತ್ತದೆ. ಇದರ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಅದರಲ್ಲೂ ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಇದರ ಸೇವನೆಯಿಂದ ಅನುಕೂಲವಿದೆ. ಗೋಡಂಬಿ ಬೀಜಗಳಿಗೆ ನಿದ್ರೆ ತರಿಸುವ ಶಕ್ತಿ ಇದೆ. ಹಾಗಾಗಿ ರಾತ್ರಿಯ ಸಮಯದಲ್ಲಿ ಹಾಲಿನ ಜೊತೆ ಗೋಡಂಬಿ ಬೀಜಗಳನ್ನು ಅಥವಾ ಅವುಗಳ ಪೌಡರ್ ಮಿಶ್ರಣ ಮಾಡಿ ಸೇವಿಸಬೇಕು.

ಗೋಡಂಬಿ ಬೀಜಗಳ ಆರೋಗ್ಯ ಲಕ್ಷಣಗಳು

ಗೋಡಂಬಿ ಬೀಜಗಳನ್ನು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತೆ ಎನ್ನುತ್ತಾರೆ. ಆದರೆ ನಿಜ ಹೇಳಬೇಕು ಎಂದರೆ ಗೋಡಂಬಿ ಬೀಜಗಳಲ್ಲಿ ಕೊಲೆಸ್ಟ್ರಾಲ್ ಶೂನ್ಯ ಪ್ರಮಾಣದಲ್ಲಿದೆ. ಅದರ ಬದಲಾಗಿ ನಿಮಗೆ ಪ್ರೋಟೀನ್ ಆಂಟಿಆಕ್ಸಿಡೆಂಟ್ ಮತ್ತು ಆರೋಗ್ಯಕರ ಕೊಬ್ಬಿನ ಅಂಶಗಳು ಸಿಗುತ್ತವೆ. ನಮಗೆ ಬಹುತೇಕ ರಾತ್ರಿಯ ಸಮಯದಲ್ಲಿ ನಾವು ಅಂದುಕೊಂಡ ಮಟ್ಟದಲ್ಲಿ ನಿದ್ರೆ ಮಾಡಲು ಸಾಧ್ಯವಾಗಿರುವುದಿಲ್ಲ. ಅದಕ್ಕೆ ಕಾರಣ ಮಾನಸಿಕ ಒತ್ತಡ ಅಥವಾ ಬೇರೆ ಇನ್ನೇನಾದರೂ ಇರಬಹುದು. ಆದರೆ ಒಂದು ಲೋಟ ಹಾಲಿಗೆ ಸ್ವಲ್ಪ ಗೋಡಂಬಿ ಪೌಡರ್ ಮಿಶ್ರಣ ಮಾಡಿ ಕುಡಿಯುವುದರಿಂದ ಕರುಳು ಸ್ವಚ್ಛವಾಗುತ್ತದೆ ಮತ್ತು ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ರಾತ್ರಿಯ ಸಮಯದಲ್ಲಿ ನೆಮ್ಮದಿಯಾಗಿ ಮಗುವಿನಂತೆ ಮಲಗಿ ನಿದ್ರಿಸಬಹುದು. ಚರ್ಮದ ಹೊಳಪು ಕೂಡ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಹೃದಯದ ತೊಂದರೆ ಇರುವವರಿಗೆ ತುಂಬಾ ಒಳ್ಳೆಯದು. ಏಕೆಂದರೆ ಇದರಲ್ಲಿ ನಿಮ್ಮ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ದೂರ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅಂಶವನ್ನು ಹೆಚ್ಚು ಮಾಡುವ ಗುಣವಿದೆ. ಜೊತೆಗೆ ಮೂಳೆಗಳ ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು. ಮಕ್ಕಳಿಗೆ ಗೋಡಂಬಿ ಹಾಲನ್ನು ಕುಡಿಯುವ ಅಭ್ಯಾಸ ಮಾಡಿಸುವುದರಿಂದ ವಯಸ್ಸಾದ ನಂತರದಲ್ಲಿ ಮೂಳೆಗಳಿಗೆ ಸಂಬಂಧ ಪಟ್ಟಂತೆ ಯಾವುದೇ ಸಮಸ್ಯೆ ಅಥವಾ ಆಸ್ಟಿಯೋಪೋರೋಸಿಸ್ ಬರುವುದಿಲ್ಲ.

ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು

ಮೆದುಳಿನ ಆರೋಗ್ಯಕ್ಕೆ ಕೂಡ ಗೋಡಂಬಿ ಹಾಲು ತುಂಬಾ ಒಳ್ಳೆಯದು. ನೈಸರ್ಗಿಕವಾಗಿ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಮನಸ್ಸಿಗೆ ಒತ್ತಡಕ್ಕೆ ಸಂಬಂಧಪಟ್ಟಂತೆ ಇರುವ ಕಾರ್ಟಿಸೋಲ್ ಹಾರ್ಮೋನನ್ನು ನಿಯಂತ್ರಣ ಮಾಡುತ್ತದೆ. ಮನಸ್ಸಿಗೆ ಸಾಕಷ್ಟು ನೆಮ್ಮದಿ ಮತ್ತು ವಿಶ್ರಾಂತಿಯನ್ನು ಕೊಡುತ್ತದೆ. ನಿಮಗೆ ಒಂದು ವೇಳೆ ಹಾಲಿನಲ್ಲಿ ಗೋಡಂಬಿ ಬೀಜಗಳನ್ನು ಹಾಕಿ ಕುಡಿಯಲು ಆಗಲಿಲ್ಲ ಎಂದರೆ ಸಂಜೆಯ ಸ್ನಾಕ್ಸ್ ಸಮಯದಲ್ಲಿ ಗೋಡಂಬಿ ಬೀಜಗಳನ್ನು ಹಾಗೆ ತಿನ್ನಬಹುದು ಅಥವಾ ಹುರಿದು ತಿನ್ನಬಹುದು.

ಹಿಂದಿನ ಲೇಖನದತ್ತಾತ್ರೇಯ ಪೀಠ ಪೂಜಾ ವಿಧಿ ವಿಧಾನ: ಅರ್ಜಿದಾರರಿಗೆ ಮೆಮೊ ಒದಗಿಸಲು ಸರ್ಕಾರಕ್ಕೆ ಆದೇಶ; ಮಧ್ಯಂತರ ಆದೇಶ ಮುಂದುವರಿಕೆ
ಮುಂದಿನ ಲೇಖನನಾಗವಾಲ ಗ್ರಾಮ ಪಂಚಾಯತಿಯನ್ನು ತ್ಯಾಜ್ಯ ಮುಕ್ತ ಮಾಡಲು ಎಲ್ಲರು ಕೈ ಜೋಡಿಸಿ