ಮನೆ ಆರೋಗ್ಯ ಚೂರ್ಣಗಳ ಸೇವನೆಯಿಂದ ಆರೋಗ್ಯಕ್ಕೆ ಅನುಕೂಲ

ಚೂರ್ಣಗಳ ಸೇವನೆಯಿಂದ ಆರೋಗ್ಯಕ್ಕೆ ಅನುಕೂಲ

0

ನಮ್ಮ ಸುತ್ತಲಿನ ನೂರಾರು ಗಿಡಮರಗಳಿಂದ ಮಾಡಬಹುದಾದ ಚೂರ್ಣಗಳು ಅಪೂರ್ವ ಔಷಧೀಯ ಗುಣವನ್ನು ಹೊಂದಿದೆ ಅವುಗಳನ್ನು ಬಳಸುವುದು ಬಹಳ ಸುಲಭ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ಅಥವಾ ಹಾಲಿನಲ್ಲಿ ಅಥವಾ ಜೇನುತುಪ್ಪದಲ್ಲಿ ಬೆರೆಸಿ ಅವನು ಬಳಸಬಹುದು ಕೆಲವು ಮುಖ್ಯ ಚೂರ್ಣಗಳ ಪರಿಚಯ ಇಲ್ಲಿದೆ.

ಅಂಬೆಹಳದಿ ಚೂರ್ಣ : ಪ್ರಬಲ ಜೀವಿರೋಧಕ ಗುಣವಿರುವ ಮೂಲಿಕೆ ಇದು ಆಹಾರದೊಂದಿಗೆ ನಾವು ಸೇವಿಸಿರುವ ಕೊಬ್ಬನ್ನು ವಿಭಜಿಸಿ ಜೀರ್ಣಕ್ರಿಯೆಯಲ್ಲಿ ಭಾಗಿಯಾಗಲು ಅಗತ್ಯವಿರುವ ಜೀರ್ಣರಸದ ಸ್ರಾವಕ್ಕೆ ಇದು ಪ್ರೇರಿಸುತ್ತದೆ, ಊತ ನಿವಾರಕ ಗುಣವಿದೆ ದೇಹದಲ್ಲಿರುವ ನಂಜು ಹೊರಹಾಕುತ್ತದೆ

ಬೆಟ್ಟದ ನೆಲ್ಲಿ ಚೂರ್ಣ : ದೇಹದ ಪುನರುಜ್ಜೀವನಕ್ಕೆ ನೆರವಾಗುವ ನೆಲ್ಲಿಯೂ ವೃದ್ಧಾಪ್ಯದ ಲಕ್ಷಣಗಳನ್ನು ತಡೆಗಟ್ಟುತ್ತದೆ. ತಾರುಣ್ಯದ ಮುಂದುವರಿಕೆಗೆ ಸಹಾಯವಾಗಿದೆ. ಸಿ ಜೀವ ಸತ್ವ ಹಾಗೂ ಕಬ್ಬಿನಾಂಶದಿಂದ ಸಮೃದ್ಧವಾಗಿದೆ. ದೇಹದಲ್ಲಿ ಹೊಸ ಅಂಗಾಂಶಗಳ ಹುಟ್ಟಿಗೆ ನೆರವೇರುತ್ತದೆ. ಚರ್ಮ, ಕಣ್ಣು, ಮತ್ತು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು ಜೀರ್ಣಾಂಗ ವ್ಯೂಹದ ಶುದ್ಧೀಕರಣ ಮಾಡುತ್ತದೆ..

ನೆಲ್ಲಿ ಚೂರಣ 11 ಬೇರಿನ ಪುಡಿ ಹಾಗೂ ಸೊಗದೆ ಬೇರಿನ ಪುಡಿ ಇದನ್ನು ಒಂದೊಂದು ಚಮಚ ತೆಗೆದುಕೊಂಡು ಎರಡು ಲೋಟ ನೀರಿಗೆ ಸೇರಿಸಿ ಕುದಿಸಬೇಕು ಅರ್ಧ ಲೋಟ ಆದಾಗ ಕುಡಿಯಬೇಕು ಇದನ್ನು 3 ವಾರಗಳ ಕಾಲ ಮಾಡಬೇಕು

ತಲೆ ಕೂದಲಿನ ಸಮಸ್ಯೆಗಳು : ಬೃಂಗರಾಜ ಚೂರ್ಣ, ಅಮೃತಬಳ್ಳಿ ಚೂರ್ಣ, ಬೆಟ್ಟದ ನೆಲ್ಲಿ ಚೂರ್ಣ, ಈ ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಬೇರೆ ಬೇರೆಯಾಗಿ ಜಜ್ಜಿ ರಸವನ್ನು ತೆಗೆದು ಇದರಲ್ಲಿ ಕಾಲು ಪ್ರಮಾಣದಷ್ಟು ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯನ್ನು ಈ ರಸಗಳ ಜೊತೆ ಸೇರಿಸಿ ಬೇಯಿಸಬೇಕು ನೀರಿನ ಅಂಶವೆಲ್ಲ ಇಂಗಿ ಹೋದ ನಂತರ ಎಣ್ಣೆಯನ್ನು ಶೋಧಿಸಿ ಸಂಗ್ರಹಿಸಬೇಕು ಇದು ಒಳ್ಳೆಯ ಕೇಶವರ್ಧಕ ತೈಲವಾಗಿದ್ದು, ಇದರ ಬಳಕೆಯಿಂದ ತಲೆ ಕೂದಲು ಉದುರುವುದು ನಿಲ್ಲುತ್ತದೆ ತಲೆ ಹೊಟ್ಟು ನಿವಾರಣೆ ಆಗುತ್ತದೆ ಮತ್ತು ಕೂದಲು ಸೊಂಪಾಗಿ ಬೆಳೆಯುತ್ತದೆ.

ನೆಲ್ಲಿ ಮತ್ತು ತುಳಸಿಯನ್ನು ಬೆಳೆಸಿ ಅತ್ಯುತ್ತಮವಾದ ಶಾಂಪೂ ಮಾಡಬಹುದು ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಶಾಂಪೂಗಳು ರಾಸಾಯನಿಕ ಮಿಶ್ರಣವಾಗಿ ಉಂಟು ಮಾಡಬಲ್ಲದು ಇವುಗಳ ಬದಲಿಗೆ ತಲೆ ಕೂದಲಿನ ಅತ್ಯಂತ ಹಿತಕರವಾದ ತುಳಸಿ ನಿಲ್ಲಿ ಶಾಂಪೂ ಬಳಸಬಹುದು ಅರ್ಧ ಬಟ್ಟಲು ನೀರಿನಲ್ಲಿ ಅರ್ಧ ಹಿಡಿಯಷ್ಟು ತುಳಸಿ ಚೂರ್ಣವನ್ನು ಮತ್ತು ಎರಡು ಚಮಚದಷ್ಟು ನೆಲ್ಲಿಕಾಯಿ ಚೂರ್ಣವನ್ನು ಹಾಕಿ ರಾತ್ರಿ ಮಿಶ್ರಣ ಮಿಶ್ರಣವನ್ನು ನೆನೆಸಿದ ನೀರನ್ನು ಬಳಸಿ ಚೆನ್ನಾಗಿಕಲಸಬೇಕು. ಇದನ್ನು ಶೋಧಿಸಿದಾಗ ಸಿಗುವ ಅಂಟದ ದ್ರವಣವೇ ಅತ್ಯುತ್ತಮವಾದ ನೈಸರ್ಗಿಕ ಶಾಂಪೂ ಇದನ್ನು ತಲೆಕೂದಲಿಗೆ ಚೆನ್ನಾಗಿ ಹಚ್ಚಿ 20 ನಿಮಿಷಗಳ ನಂತರ ಸ್ನಾನ ಮಾಡಬೇಕು. ತಲೆಕೂದಲಿಗೆ ಯಾವುದೇ ಸಾಬೂನನ್ನು ಬಳಸಬಾರದು.