ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕ ಸುರೇಶ್ ಎಂಬಾತನನ್ನು ಹತ್ಯೆ ಮಾಡಿರುವ ಘಟನೆ ಬಳೇಪೇಟೆ ರಸ್ತೆಯ ರಾಜ್ ಕುಮಾರ್ ಪ್ರತಿಮೆ ಬಳಿ ಬುಧವಾರ ರಾತ್ರಿ ನಡೆದಿದೆ.
ಆಟೋ ಚಾಲಕ ಸುರೇಶ್ ತುಮಕೂರು ಜಿಲ್ಲೆ ಹುಲಿಯೂರುದುರ್ಗ ಮೂಲದವರು. ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ನಿನ್ನೆ ಗೆಳೆಯರ ಜೊತೆ ಕುಳಿತು ಎಣ್ಣೆ ಪಾರ್ಟಿ ಮಾಡುತಿದ್ದ. ಈ ವೇಳೆ ಶುರುವಾದ ಗಲಾಟೆಯಲ್ಲಿ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ ೮ ಗಂಟೆ ಸುಮಾರಿಗೆ ಕೃತ್ಯ ಬಯಲಾಗಿದೆ.
ಸ್ಥಳಕ್ಕೆ ಉಪ್ಪಾರಪೇಟೆ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.
Saval TV on YouTube