ಬೆಂಗಳೂರು: ಕೆಲವು ತಿಂಗಳ ಹಿಂದೆ ಬೆಂಗಳೂರು ನಗರದ ಕೆಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು. ಇದೀಗ ಮತ್ತೆ ದುಷ್ಕರ್ಮಿಗಳು ಇಮೇಲ್ ಮೂಲಕ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಹಾಕಿರುವುದಾಗಿ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಬೆಳಗ್ಗೆ 6.57ರ ಸುಮಾರಿಗೆ ಬಂದಿರುವ ಇಮೇಲ್ ನಲ್ಲಿ ಶಾಲೆ ಆವರಣದಲ್ಲಿ ಐದು ಪೈಪ್ ಲೈನ್ ಬಾಂಬ್ ಗಳನ್ನು ಇಡಲಾಗಿದೆ ಎಂದು ದುಷ್ಕರ್ಮಿಗಳು ಹೇಳಿದ್ದಾರೆ.
Father Kodachi ಹೆಸರಿನ coldghost456@gmail.com askbirnorth@tipsglobal.net ಎಂಬ ಐಡಿಯಿಂದ ಇಮೇಲ್ ಬೆದರಿಕೆ ಬಂದಿದ್ದು, ಮಧ್ಯಾಹ್ನ 1.30ಕ್ಕೆ ಬ್ಲಾಸ್ಟ್ ಆಗ ಆಗಲಿದೆ ಎಂದು ಮೇಲ್ ನಲ್ಲಿ ತಿಳಿಸಲಾಗಿದೆ.
ಮಾಹಿತಿ ಬಂದ ಕೂಡಲೇ ಶಾಲೆಗೆ ಹೋಗಿ ಗೋವಿಂದಪುರ ಪೊಲೀಸರು, ಬಾಂಬ್ ಸ್ಕ್ವಾಡ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಆತಂಕಕಾರಿ ವಿಚಾರ ಪತ್ತೆಯಾಗಿಲ್ಲ.
ಸದ್ಯ ಘಟನೆ ಸಂಬಂಧ ಶಾಲೆಯ ಆಡಳಿತಾಧಿಕಾರಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.