ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ “ಒನ್ 8 ಕಮ್ಯೂನ್” ಮತ್ತೆ ನ್ಯೂಸ್ ಶಿರೋನಾಮೆಗೇರಿದೆ. ಈ ಬಾರಿಗೆ ದೂರು ಧೂಮಪಾನದ ನಿಯಮ ಉಲ್ಲಂಘನೆ ಹಾಗೂ ಅದರ ಹಿಂದಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾಗಿದೆ.
ಬೆಂಗಳೂರು ನಗರದ ಕಸ್ತೂರ್ಬಾ ರಸ್ತೆಯಲ್ಲಿರುವ ಈ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಪ್ರತ್ಯೇಕ ಸ್ಥಳ ಮೀಸಲಿಡದೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನಕ್ಕೆ ಅವಕಾಶ ನೀಡಲಾಗಿರುವುದಾಗಿ ಪೊಲೀಸ್ ವರದಿಯಾಗಿದೆ. ಮೇ 29ರಂದು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಪಬ್ ಮೇಲೆ ದಾಳಿ ನಡೆಸಿದ್ದು, ಸ್ಥಳದಲ್ಲಿಯೇ ನಿಷೇಧಿತ ರೀತಿಯ ಧೂಮಪಾನ ನಡೆಯುತ್ತಿರುವುದನ್ನು ದೃಢಪಡಿಸಿದ್ದಾರೆ.
ದಾಳಿ ಬಳಿಕ ಸ್ವಯಂಪ್ರೇರಿತವಾಗಿ ಎನ್ಸಿಆರ್ ದಾಖಲಿಸಲಾಯಿತು. ಇದೀಗ ನ್ಯಾಯಾಲಯದ ಅನುಮತಿ ಪಡೆದು, ಕೊಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೂ ಮುನ್ನ, 2024ರ ಜುಲೈ ತಿಂಗಳಲ್ಲಿ ಇದೇ ಪಬ್ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿತ್ತು. ಆಗ ಜುಲೈ 6ರಂದು ರಾತ್ರಿ 1:20ರ ಸಮಯದಲ್ಲಿ ಪಬ್ ಓಪನ್ ಇತ್ತು ಎಂದು ಪೊಲೀಸರು ದೃಢಪಡಿಸಿದ್ದರು. ನಿಯಮಿತವಾಗಿ ಬಾರ್ಗಳು ರಾತ್ರಿ 1 ಗಂಟೆಗೆ ಮುಚ್ಚಬೇಕು ಎಂಬ ನಿಯಮವಿದ್ದರೂ, ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವಧಿ ಮುಗಿದಿದ್ದರೂ ಗ್ರಾಹಕರು ಇದ್ದರು. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.














