ಬೆಂಗಳೂರು ಜೋನಲ್ ಆರ್ಮಿ ನೇಮಕಾತಿ ಕೇಂದ್ರ ಕಛೇರಿಯು ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಹುದ್ದೆಗಳ ವಿವರಗಳನ್ನು ಕೆಳಗಿನಂತೆ ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ಲೈನ್ ಪರೀಕ್ಷೆ ಹಾಗೂ ನೇಮಕಾತಿ ರ್ಯಾಲಿ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ಹೆಸರು
ಸಿಪಾಯಿ ಫಾರ್ಮಾ
ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟಂಟ್ / ನರ್ಸಿಂಗ್ ಅಸಿಸ್ಟಂಟ್ (ವೆಟರಿನರಿ)
ಮಹಿಳಾ ಅಗ್ನಿವೀರ್ ಹುದ್ದೆ (ಮಹಿಳಾ ಮಿಲಿಟರಿ ಪೊಲೀಸ್)
ವಿಶೇಷ ದಿನಾಂಕಗಳು
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 15-03-2023
ಬೆಂಗಳೂರು ಆರ್ಮಿ ಕೇಂದ್ರದಿಂದ ಆನ್ಲೈನ್ ಪರೀಕ್ಷೆ ನಡೆಸುವ ದಿನಾಂಕ : 17-04-2023
ಸಿಪಾಯಿ ಫಾರ್ಮಾ: ಫಾರ್ಮಸಿ ಡಿಪ್ಲೊಮ / ಡಿಗ್ರಿ ಪಾಸ್. 19-25 ವರ್ಷದವರಾಗಿರಬೇಕು.
ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಅಸಿಸ್ಟಂಟ್ / ನರ್ಸಿಂಗ್ ಅಸಿಸ್ಟಂಟ್ (ವೆಟರಿನರಿ) : ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಪಾಸ್. ಕನಿಷ್ಠ 17 ವರ್ಷ 06 ತಿಂಗಳಿಂದ 23 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಮಹಿಳಾ ಅಗ್ನಿವೀರ್ ಹುದ್ದೆ (ಮಹಿಳಾ ಮಿಲಿಟರಿ ಪೊಲೀಸ್): 10th ಪಾಸಾಗಿರಬೇಕು. ಕನಿಷ್ಠ 17 ವರ್ಷ 06 ತಿಂಗಳಿಂದ 21 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಕರ್ನಾಟಕ, ಕೇರಳ ರಾಜ್ಯಗಳು ಅಭ್ಯರ್ಥಿಗಳು ಹಾಗೂ ಲಕ್ಷ್ಯದ್ವೀಪ ಕೇಂದ್ರಾಡಳಿತ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನೇಮಕಾತಿ ಹಂತಗಳು
ಹಂತ-1: ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ.
ಹಂತ-2: ನೇಮಕಾತಿ ರ್ಯಾಲಿ.
ಮಹಿಳಾ ಅಗ್ನಿವೀರರಿಗೆ ಮಾಸಿಕ ವೇತನ
ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆಗಳು.
ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆಗಳು.
ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆಗಳು.
ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆಗಳು.
ಅರ್ಜಿ ಸಲ್ಲಿಸಲು ಮಿಲಿಟರಿಯ ಅಧಿಕೃತ ವೆಬ್ ಸೈಟ್ ವಿಳಾಸ http://www.joinindianarmy.nic.in/ ಕ್ಕೆ ಭೇಟಿ ನೀಡಿ. ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.