ಬೆಂಗಳೂರು/ಬೀದರ್ : ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಹಬ್ಬದ ಸಂದರ್ಭದಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆಯು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಗಳ ಅವಧಿಯನ್ನು ವಿಸ್ತರಿಸಿದೆ.
ರೈಲು ಸಂಖ್ಯೆ 06539 : ಇದೇ ಅಕ್ಟೋಬರ್ 31ರವರೆಗೆ ಬೆಂಗಳೂರಿನಿಂದ ಬೀದರ್‌ಗೆ ಸಂಚರಿಸಲು ನಿಗದಿಯಾಗಿದ್ದ ರೈಲನ್ನು ಇದೇ ನವೆಂಬರ್ 2ರಿಂದ ಡಿಸೆಂಬರ್ 28ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 06540 : ಅದೇ ರೀತಿ ಇದೇ ನವೆಂಬರ್ 1ರವರೆಗೆ ಬೀದರ್‌ನಿಂದ ಎಸ್‌ಎಂವಿಟಿ ಬೆಂಗಳೂರಿಗೆ ಪ್ರತಿ ಶನಿವಾರ ಮತ್ತು ಸೋಮವಾರ ಸಂಚರಿಸಲು ನಿಗದಿಯಾಗಿದ್ದ ರೈಲನ್ನು ಇದೇ ನವೆಂಬರ್ 3ರಿಂದ ಡಿಸೆಂಬರ್ 29ರವರೆಗೆ ವಿಸ್ತರಿಸಲಾಗಿದೆ.
ಈ ವಿಸ್ತೃತ ಅವಧಿಯಲ್ಲಿ ಎರಡೂ ದಿಕ್ಕುಗಳಲ್ಲಿ ತಲಾ 17 ಟ್ರಿಪ್‌ಗಳು ಕಾರ್ಯಾಚರಣೆ ಮಾಡಲಾಗುತ್ತದೆ. ಈ ವಿಶೇಷ ರೈಲುಗಳು ಈಗಿರುವ ನಿಲುಗಡೆಗಳು, ವೇಳಾಪಟ್ಟಿ ಮತ್ತು ಬೋಗಿಗಳ ಸಂಯೋಜನೆಯಲ್ಲಿಯೇ ಸಂಚಾರ ಮುಂದುವರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.















