ಮನೆ ರಾಜ್ಯ ಬೆಂಗಳೂರು : ಆಟೋಗೆ ಕಾರು ಡಿಕ್ಕಿ- ಇಬ್ಬರು ಸಾವು

ಬೆಂಗಳೂರು : ಆಟೋಗೆ ಕಾರು ಡಿಕ್ಕಿ- ಇಬ್ಬರು ಸಾವು

0

ಬೆಂಗಳೂರು(Bengaluru) : ಅತಿವೇಗದಲ್ಲಿ ಬಂದ ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಡರಾತ್ರಿ ಕೆ.ಆರ್.ಪುರಂನ ಆರ್.ಟಿ.ಒ ಕಚೇರಿ ಮುಂಭಾಗದಲ್ಲಿ ನಡೆದಿದೆ.

ಫಾಝಿಲಾ ಹಾಗೂ ತಸೀನಾ ಮೃತರು.

ಕೆ.ಆರ್ ಪುರಂ ಮಾರ್ಗವಾಗಿ ಸಾಗುತ್ತಿದ್ದ ಆಟೋದಲ್ಲಿ ಚಾಲಕ ಖಾಲೀದ್, ಆತನ ಪತ್ನಿ ತಾಸೀನಾ, ಫಾಝಿಲಾ ಹಾಗೂ ಇಬ್ಬರು ಮಕ್ಕಳು ತೆರಳುತ್ತಿದ್ದರು.

ರಾತ್ರಿ 9:20ರ ಸುಮಾರಿಗೆ ಅತೀ ವೇಗದಲ್ಲಿ ಬಂದ ಕಪ್ಪು ಬಣ್ಣದ ಇನ್ನೋವಾ ಕಾರೊಂದು ಏಕಾಏಕಿ ಆಟೋಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಎರಡು ವರ್ಷದ ಒಂದು ಮಗುವಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಚಾಲಕ ಅಪಘಾತವೆಸಗಿ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಸೈಫ್ ಎಂಬುವರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೆ.ಆರ್ ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಕಾರು ಚಾಲಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಹಿಂದಿನ ಲೇಖನಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನ
ಮುಂದಿನ ಲೇಖನಅಪ್ರಾಪ್ತೆಗೆ ಢಿಕ್ಕಿ ಹೊಡೆದು ಸುಮಾರು ದೂರ ಎಳೆದೊಯ್ದ ಕಾರು ಚಾಲಕ