ಮನೆ ಕಾನೂನು ಬೆಂಗಳೂರು: ಫುಟ್​ ಪಾತ್​ ಮೇಲೆ ವಾಹನ ಚಲಾಯಿಸಿದ್ರೆ ಲೈಸೆನ್ಸ್​ ರದ್ದು

ಬೆಂಗಳೂರು: ಫುಟ್​ ಪಾತ್​ ಮೇಲೆ ವಾಹನ ಚಲಾಯಿಸಿದ್ರೆ ಲೈಸೆನ್ಸ್​ ರದ್ದು

0

ಬೆಂಗಳೂರು: ಫುಟಪಾತ್​​ ಮೇಲೆ ಗಾಡಿ ಓಡಿಸಿದರೆ ವಾಹನ ಸವಾರರ ಡ್ರೈವಿಂಗ್​ ಲೈಸೆನ್ಸ್​ ಅಮಾನತು ಮಾಡಲು ತೀರ್ಮಾನಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ.

Join Our Whatsapp Group

ಬೆಂಗಳೂರು ಸಂಚಾರಿ ಪೊಲೀಸ್​ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಡ್ರೈವಿಂಗ್​ ಲೈಸೆನ್ಸ್​​ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೊದಲ ಬಾರಿಗೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಸಿಕ್ಕಿಬಿದ್ದರೇ, ಆತನ ಲೈಸೆನ್ಸ್​ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಪಾರಸ್ಸು ಮಾಡುತ್ತಾರೆ. ಹೀಗಾಗಿ, ಇನ್ಮುಂದೆ ಫುಟ್​ಪಾತ್​​ ಮೇಲೆ ಗಾಡಿ ಓಡಿಸುವ ಮುನ್ನ ಯೋಚಿಸಿ ಎಂದು ಸಂಚಾರಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

80 ಲಕ್ಷ ರೂ. ದಂಡ ಸಂಗ್ರಹ

ಡ್ರಂಕ್ & ಡ್ರೈವ್ ವಿರುದ್ಧ ಸಂಚಾರಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಜನವರಿ 27ರಿಂದ ಫೆ.2ರವರೆಗೆ ತಪಾಸಣೆಯಲ್ಲಿ 80 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಬೆಂಗಳೂರಿನ 50 ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆದಿದೆ. ಕಳೆದ 1 ವಾರದಲ್ಲಿ 800 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್​​ ಮಾಹಿತಿ ನೀಡಿದರು.