ಬೆಂಗಳೂರು: ಗೃಹ ಬಳಕೆ ವಸ್ತುಗಳ ತಯಾರು ಮಾಡುವ ಗಿಲ್ಮಾ ಎ ಕಂಪನಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬನ್ನೇರುಘಟ್ಟ ರಸ್ತೆ , ಹೆಚ್ ಎಸ್ ಆರ್ ಲೇಔಟ್, ಜಯನಗರ , ಪೀಣ್ಯಾ ಸೇರಿದಂತೆ ಹತ್ತಕ್ಕೂ ಹೆಚ್ಚು ಕಡೆ ಗಿಲ್ಮ ಕಂಪನಿಗೆ ಸಂಬಂಧಿಸಿದ ಪ್ರಾಂಚೈಸಿಗಳ ಮೇಲೂ ಸಹ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಗಿಲ್ಮಾ ಗ್ಯಾಸ್ ಸ್ಟವ್, ಓವನ್ ಸೇರಿದಂತೆ ಗೃಹ ಬಳಕೆ ವಸ್ತುಗಳನ್ನ ಸರಬರಾಜು ಮಾಡುವ ಕಂಪನಿಯಾಗಿದೆ. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಗಿಲ್ಮ ಕಂಪನಿಗೆ ಸಂಬಂಧಿಸಿದ ಪ್ರಾಂಚೈಸಿಗಳು ಇದ್ದು, ಅವುಗಳ ಮೇಲೂ ಐಟಿ ದಾಳಿಯಾಗಿದೆ. ತೆರಿಗೆ ವಂಚನೆ ಸಂಬಂಧ ಐಟಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
Saval TV on YouTube