ಬೆಂಗಳೂರು(Bengaluru): ಮಣಿಪಾಲ್ ಸಮೂಹ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆಸ್ಪತ್ರೆ ಮತ್ತು ಕಚೇರಿ ಸೇರಿದಂತೆ ಹಲವೆಡೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆ ಪತ್ರ ಪರಿಶೀಲಿಸಿದ್ದಾರೆ.
ಇಂದು ಬೆಳಗ್ಗೆ 6.30ಕ್ಕೆ ನಾಲ್ಕು ಇನ್ನೋವಾ ವಾಹನಗಳಲ್ಲಿ ಆಗಮಿಸಿದ 16 ಮಂದಿ ಐಟಿ ಅಧಿಕಾರಿಗಳು ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಸಮೀಪದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದಾರೆ.
ಇತ್ತೀಚೆಗೆ ಮಣಿಪಾಲ್ ಸಮೂಹ ಸಂಸ್ಥೆಯು ವಿಕ್ರಮ್ ಆಸ್ಪತ್ರೆ ಹಾಗು ಹೆಬ್ಬಾಳದ ಬಳಿಯಿರುವ ಕೊಲಂಬಿಯಾ ಏಷಿಯಾ ಆಸ್ಪತ್ರೆಗಳನ್ನು ಟೇಕ್‌ಓವರ್ ಮಾಡಿಕೊಂಡಿತ್ತು.