ಮನೆ ರಾಜ್ಯ ಬೆಂಗಳೂರು ಮೆಟ್ರೋ ನೂತನ ದಾಖಲೆ: ನಿನ್ನೆ ಒಂದೇ ದಿನ 9.66 ಲಕ್ಷ ಜನ ಪ್ರಯಾಣ

ಬೆಂಗಳೂರು ಮೆಟ್ರೋ ನೂತನ ದಾಖಲೆ: ನಿನ್ನೆ ಒಂದೇ ದಿನ 9.66 ಲಕ್ಷ ಜನ ಪ್ರಯಾಣ

0

ಬೆಂಗಳೂರು: ಬೆಂಗಳೂರು ಮೆಟ್ರೋ ತನ್ನ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಜೂನ್ 4, 2025 ರಂದು ಒಟ್ಟು 9,66,732 ಪ್ರಯಾಣಿಕರು ಮೆಟ್ರೋ ಬಳಸಿದ್ದು, ಇದುವರೆಗೆ ದಾಖಲಾಗಿರುವ ಅತ್ಯಧಿಕ ದಿನದ ಪ್ರಯಾಣಿಕರ ಸಂಖ್ಯೆ ಆಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದೆ.

ಪ್ರಮುಖ ವಿವರಗಳು:

  • ಮಾರ್ಗ 1 : 4,78,334 ಪ್ರಯಾಣಿಕರು
  • ಮಾರ್ಗ 2 : 2,84,674 ಪ್ರಯಾಣಿಕರು
  • ಕೆಂಪೇಗೌಡ ಇಂಟರ್‌ಚೇಂಜ್ : 2,03,724 ಪ್ರಯಾಣಿಕರು

ಈ ದಾಖಲೆಯ ಪ್ರಮುಖ ಕಾರಣವೆಂದರೆ ಕಬ್ಬನ್ ಪಾರ್ಕ್, ವಿಧಾನಸೌಧ, ಎಂಜಿ ರಸ್ತೆ, ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣಗಳು ಇತ್ಯಾದಿ ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (ಸಿಬಿಡಿ) ಪ್ರದೇಶಗಳಲ್ಲಿ ಪ್ರಯಾಣಿಕರ ಭಾರೀ ಓಡಾಟ. ಉದ್ಯೋಗಸ್ಥರು, ವಿದ್ಯಾರ್ಥಿಗಳು ಮತ್ತು ಆರ್‌ಸಿಬಿ ಸಂಭ್ರಮಾಚರಣೆಗಾಗಿ ನೆರೆದ ಅಭಿಮಾನಿಗಳ ಪ್ರಯಾಣದಿಂದ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.