ಬೆಂಗಳೂರು: ಬೆಂಗಳೂರು ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಮೂವರನ್ನು ಬಂಧಿಸುವ ಮೂಲಕ ಮೂಲಕ ಅಂತರರಾಜ್ಯ ನಕಲಿ ನೋಟು ಜಾಲವನ್ನು ಭೇದಿಸಿದ್ದಾರೆ.
ಬಂಧಿತರಿಂದ 6.53 ಲಕ್ಷ ಮೌಲ್ಯದ 500 ರೂಪಾಯಿ ಮುಖಬೆಲೆಯ 1,307 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ರಹಸ್ಯ ಮಾಹಿತಿ ಪಡೆದ ಕಾಟನ್‌ಪೇಟೆ ಪೊಲೀಸರು, ಅವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ಬಂಧಿತ ಆರೋಪಿಗಳ ಪೈಕಿ ಇಬ್ಬರು ಕೇರಳ ಮೂಲದವರಾಗಿದ್ದು, ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದ ಬಳಿ ಅವರು ಮೆಜೆಸ್ಟಿಕ್ ನ ಜನನಿಬಿಡ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ಸರಬರಾಜು ಮಾಡುತ್ತಿರುವುದು ಪತ್ತೆಯಾಗಿದೆ.
ಬಂಧಿತ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ, ತಮಿಳುನಾಡು ಮೂಲದ ಮೂರನೇ ಸಹಚರನನ್ನು ಹೊಸೂರಿನಲ್ಲಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಹೊಸೂರಿನಿಂದ ಬಂಧಿಸಲ್ಪಟ್ಟ ಮೂರನೇ ಸಹಚರನು ಬಿಹಾರದ ಪಾಟ್ನಾ ಮೂಲದ ವ್ಯಕ್ತಿಯಿಂದ ನಕಲಿ ನೋಟುಗಳನ್ನು ಪಡೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.