ಮನೆ ರಾಜ್ಯ ಬೆಂಗಳೂರು: ಒಳ ಮೀಸಲಾತಿ ಸಮೀಕ್ಷೆಗೆ ಸಹಕರಿಸದಿದ್ರೆ ನೀರು, ಕರೆಂಟ್ ಕಟ್?

ಬೆಂಗಳೂರು: ಒಳ ಮೀಸಲಾತಿ ಸಮೀಕ್ಷೆಗೆ ಸಹಕರಿಸದಿದ್ರೆ ನೀರು, ಕರೆಂಟ್ ಕಟ್?

0

ಬೆಂಗಳೂರು: ನಗರದಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಸಹಕರಿಸದಿದ್ರೆ ನೀರು, ಕರೆಂಟ್ ಯಾಕೆ ಕಟ್ ಮಾಡ್ಬಾರದು ಎಂದು ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾ. ಹೆಚ್.ಎನ್.ನಾಗಮೋಹನ್ ದಾಸ್ ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಒಳ ಮೀಸಲಾತಿ ಜಾರಿ ವಿಚಾರವಾಗಿ ದತ್ತಾಂಶ ಸಂಗ್ರಹ ನಡೆಯುತ್ತಿದೆ. ಎಸ್‌ಸಿ ಸಮುದಾಯದ ಮನೆ ಮನೆ ಸಮೀಕ್ಷಾ ಅವಧಿ ವಿಸ್ತರಣೆ ಮಾಡಲಾಗಿದೆ.‌ ಎಸ್‌ಸಿ ಸಮುದಾಯದ ಮನೆ ಮನೆ ಸಮೀಕ್ಷೆ ಮೇ 25ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು. ವಿಶೇಷ ಶಿಬಿರದ ದಿನಾಂಕ ಮರು ನಿಗದಿ ಮಾಡಿದ್ದು, ಮೇ 26ರಿಂದ ಮೇ 28ರ ತನಕ ನಡೆಯಲಿದೆ. ಅನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ದಿನಾಂಕ ಮೇ 19ರಿಂದ ಮೇ 28ರ ತನಕ ನಿಗದಿ ಮಾಡಿದ್ದು, ಇಲ್ಲಿ ತನಕ 73.72% ಮನೆ ಮನೆ ಸಮೀಕ್ಷೆ ಪೂರ್ಣ ಆಗಿದೆ.

ಬೆಂಗಳೂರಿನಲ್ಲಿ ಕೇವಲ 36% ಮಾತ್ರ ಸಮೀಕ್ಷೆ ಆಗಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಸಹಕರಿಸುತ್ತಿಲ್ಲ. ಅವರು ಮಾಹಿತಿಯನ್ನೇ ನೀಡಲ್ಲ, ಸಮೀಕ್ಷೆಯಲ್ಲಿ ಭಾಗವಹಿಸಲ್ಲ‌ ಅಂದ್ರೆ ನೀರು, ಕರೆಂಟ್ ಏಕೆ ಬೇಕು? ಈಗಾಗಲೇ ಬಿಬಿಎಂಪಿಗೆ ಸೂಚನೆ ಕೊಟ್ಟಿದ್ದೇವೆ. ಸಮೀಕ್ಷೆಗೆ ಸಹಕರಿಸಲು ಎಚ್ಚರಿಕೆ ಕೊಡುವಂತೆ ಲಿಖಿತವಾಗಿ ಬಿಬಿಎಂಪಿಗೆ ಸೂಚಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟ್ರೋಲ್‌ ರೂಂ ತೆರೆಯಲು‌ ಸಹ ಸೂಚಿಸಿದ್ದೇವೆ. ಖಾಸಗಿ ಶಾಲೆಯ ಶಿಕ್ಷಕರನ್ನ ಸಮೀಕ್ಷೆಗೆ ನೇಮಿಸಲು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.