ಬೆಂಗಳೂರು: ಅನೈತಿಕ ಸಂಬಂಧಕ್ಕೆ ಬಿದ್ದು ವಿವಾಹಿತ ಮಹಿಳೆಯೊಬ್ಬಳು ಭೀಕರ ಹತ್ಯೆಗೀಡಾಗಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆ ಆರೋಪಿ ಸಹ ಬಂಧನವಾಗಿದ್ದು, ಪೊಲೀಸ್ ತನಿಖೆ ವೇಳೆ ಆರೋಪಿಯ ವಿಕೃತಿ, ಕ್ರೌರ್ಯ ಬಯಲಾಗಿದೆ.
ಮೃತಪಟ್ಟ ಮಹಿಳೆ ಹರಿಣಿ (36) ಕೊಲೆ ಆರೋಪಿ ಟೆಕ್ಕಿ ಯಶಸ್ (25) ಎಂದು ತಿಳಿದು ಬಂದಿದೆ. ಮಹಿಳೆಯನ್ನು ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ಒಯೋ ರೂಮ್‌ಗೆ ಕರೆದುಕೊಂಡು ಹೋಗಿ, ಹರಿಣಿಯನ್ನು ಬೆತ್ತಲೆಗೊಳಿಸಿ ಹೊಟ್ಟೆ, ಎದೆ, ಕತ್ತು ಸೇರಿ ದೇಹದ ಹಲವೆಡೆ ಬರ್ಬರವಾಗಿ 17 ಬಾರಿ ಚಾಕು ಇರಿದಿದ್ದಾನೆ. ಆಕೆಯ ಮರಣದ ನಂತರ ಆತ ಮನೆಯತ್ತ ಹೊರಟು ಕೈಯನ್ನು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ನಂತರ ತಾನೇ ಕೆಂಗೇರಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಕೆಂಗೇರಿಯ ದಾಸೇಗೌಡನ ಪತ್ನಿ ಹರಿಣಿ, ಜಾತ್ರೆಯೊಂದರಲ್ಲಿ ಯಶಸ್ ಎಂಬ 25 ವರ್ಷದ ಟೆಕ್ಕಿ ಯುವಕನೊಂದಿಗೆ ಪರಿಚಯವಾಗಿ, ಸ್ನೇಹದಿಂದ ಪ್ರೇಮಕ್ಕೆ, ಬಳಿಕ ಅನೈತಿಕ ಸಂಬಂಧಕ್ಕೆ ಇಳಿದಿದ್ದರು. ಆದರೆ ಹರಿಣಿಯ ಗಂಡನಿಗೆ ಸಂಬಂಧದ ಬಗ್ಗೆ ಸಂಶಯವಾಗಿದ್ದ ಕಾರಣ, ಆಕೆಯನ್ನು ಕೆಲಕಾಲ ಮನೆಯಲ್ಲೇ ಬಂಧಿಸಿಟ್ಟಿದ್ದನು.
ಕೆಲ ತಿಂಗಳ ಬಳಿಕ ಮತ್ತೆ ಹೊರ ಬಂದಿದ್ದ ಹರಿಣಿ, ತನ್ನ ಬಾಯ್ ಫ್ರೆಂಡ್ ಯಶಸ್‌ನ ಸಂಪರ್ಕಿಸಿದ್ದಳು. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಂತೆ ಆಗಿದ್ದ ಯಶಸ್, ಸಿಕ್ಕ ಕೂಡಲೇ ಮುಗಿಸಿಬಿಡಬೇಕೆಂದು ನಿರ್ಧಾರ ಮಾಡಿಕೊಂಡಿದ್ದ. ಹೀಗಾಗಿ ಚಾಕು ಕೂಡ ಖರೀದಿಸಿ ಇಟ್ಟಿದ್ದ. ಮತ್ತೆ ಹರಿಣಿಯನ್ನು ಮೀಟ್ ಮಾಡಿ ಮಾತುಕತೆ ಮಾಡಿಕೊಂಡು ಓಯೋ ರೂಮ್‌ಗೆ ಕರೆದೊಯ್ದ ಯಶಸ್, ಅವಳು ಬೇರೆ ಯಾರಿಗೂ ಸಿಗಬಾರ್ದು ಅಂತ ಇರಿದು ಕೊಂದಿದ್ದಾನೆ.
ಹತ್ಯೆಗೂಡಿ ಪರಾರಿಯಾದ ಯಶಸ್ ನಂತ್ರ ತಾನೇ ಶರಣಾದ ಬಳಿಕ, ಸುಬ್ರಹ್ಮಣ್ಯಪುರ ಪೊಲೀಸ್ ಇನ್‌ಸ್ಪೆಕ್ಟರ್ ರಾಜು ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಎಫ್‌ಎಸ್‌ಎಲ್ ತಂಡದ ಮೂಲಕ ಸಾಕ್ಷ್ಯ ಸಂಗ್ರಹಿಸಲಾಯಿತು. ಯಶಸ್ ವಿಚಾರಣೆ ವೇಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದು, “ಅವಳು ನನ್ನನ್ನು ಅವಾಯ್ಡ್ ಮಾಡ್ತಾ ಇದ್ಲು, ಹೀಗಾಗಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.














