ದೆಹಲಿ: ಆನ್ಲೈನ್ ಬೆಟ್ಟಿಂಗ್ ನಿಲ್ಲಿಸಬೇಕೆಂಬ ಬೇಡಿಕೆಯ ಮೇರೆಗೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಐಪಿಎಲ್ ಪಂದ್ಯಾವಳಿಯ ಹಬ್ಬದ ನಡುವೆ, ಈ ಹೆಸರಿನಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಬೆಟ್ಟಿಂಗ್ ಚಟುವಟಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಅರ್ಜಿದಾರರಾದ ಕೆ.ಎ. ಪಾಲ್ ಅವರು, ಆನ್ಲೈನ್ ಬೆಟ್ಟಿಂಗ್ ದೇಶದ ಯುವಕರನ್ನು ದಾರಿ ತಪ್ಪಿಸುತ್ತಿದ್ದು, ಇದು ‘ಜೂಜಾಟ’ವಾಗಿದೆ ಎಂದು ನ್ಯಾಯಾಲಯದ ಮುಂದೆ ವಾದಿಸಿದರು. ಅವರು ಈ ಅಪ್ಲಿಕೇಶನ್ಗಳನ್ನು ನಿಷೇಧಿಸಲು ಮತ್ತು ಪ್ಲೇಸ್ಟೋರ್ ಹಾಗೂ ಆಪ್ಸ್ಟೋರ್ನಿಂದ ತೆಗೆದುಹಾಕಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಪಾಲ್ ನೇತೃತ್ವದ ಪೀಠ, ಆನ್ಲೈನ್ ಬೆಟ್ಟಿಂಗ್ ಸಾಮಾಜಿಕ ಶಾಪವಾಗಿದೆ ಎಂದು ಶಬ್ದ ಎತ್ತಿತು. ಅವರು, “ತೆಲಂಗಾಣದಂತಹ ರಾಜ್ಯಗಳಲ್ಲಿ ಸಾವಿರಾರು ಮಂದಿ ಹಣ ಕಳೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಗರೇಟ್ ಪ್ಯಾಕೆಟ್ಗಳ ಮೇಲೆ ಎಚ್ಚರಿಕೆ ಇರುವಂತೆಯೇ, ಈ ಅಪ್ಲಿಕೇಶನ್ಗಳ ಮೇಲೂ ತೀವ್ರ ಎಚ್ಚರಿಕೆ ಬೇಕು” ಎಂದು ಹೇಳಿದರು.
ಈ ವಿಷಯವನ್ನು ಈ ಹಿಂದೆಯೂ ನ್ಯಾಯಾಲಯದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಇದನ್ನು ನಿಲ್ಲಿಸಬೇಕು ಎಂಬುದನ್ನು ನಾವು ಬೆಂಬಲಿಸುತ್ತೇವೆ, ಆದರೆ ಜನರು ತಮ್ಮ ಸ್ವಂತ ಇಚ್ಛೆಯಿಂದ ಪಣತೊಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಕಾನೂನುಗಳನ್ನು ರೂಪಿಸುವುದರಿಂದ ಕೊಲೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲದಂತೆಯೇ, ಈ ಸಮಸ್ಯೆಯನ್ನು ಸಹ ಕಾನೂನುಗಳಿಂದ ಪರಿಹರಿಸಲು ಸಾಧ್ಯವಿಲ್ಲ.
25 ಕ್ಕೂ ಹೆಚ್ಚು ಬಾಲಿವುಡ್ ಮತ್ತು ಟಾಲಿವುಡ್ ನಟರು ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ ಎಂದು ಹೇಳಿದರು. ‘ಐಪಿಎಲ್ ನೋಡುವ ಹೆಸರಿನಲ್ಲಿ ಸಾವಿರಾರು ಜನರು ಬೆಟ್ಟಿಂಗ್ ನಡೆಸುತ್ತಿದ್ದಾರೆಂದು ಹೇಳಿದರು.
ನ್ಯಾಯಾಲಯ, ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಅಗತ್ಯವಿದ್ದರೆ ರಾಜ್ಯಗಳಿಗೂ ನೋಟಿಸ್ ಜಾರಿ ಮಾಡಲಾಗುವುದು. ಆನ್ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ಗಳು ಜನರ ಆರೋಗ್ಯ, ಹಣಕಾಸು ಭದ್ರತೆ ಮತ್ತು ಕುಟುಂಬದ ನೆಮ್ಮದಿಗೆ ಧಕ್ಕೆಯನ್ನುಂಟುಮಾಡುತ್ತಿವೆ ಎಂಬ ಮಾತುಗಳು ನ್ಯಾಯಾಲಯದ ಸಭಾಂಗಣದಲ್ಲಿ ಕೇಳಿಬಂದವು.














