ಮನೆ ರಾಜ್ಯ ಕಾವೇರಿ ಮತ್ತು ಕಾಸಿನ ನಡುವೆ ಕಾಸಿಗೆ ಕಾಂಗ್ರೆಸ್ ಸರ್ಕಾರ ಮಹತ್ವ ಕೊಡ್ತಿದೆ: ಸಿ ಟಿ ರವಿ

ಕಾವೇರಿ ಮತ್ತು ಕಾಸಿನ ನಡುವೆ ಕಾಸಿಗೆ ಕಾಂಗ್ರೆಸ್ ಸರ್ಕಾರ ಮಹತ್ವ ಕೊಡ್ತಿದೆ: ಸಿ ಟಿ ರವಿ

0

ಮಂಡ್ಯ: ಕಾವೇರಿ ಮತ್ತು ಕಾಸಿನ ನಡುವೆ ಕಾಸಿಗೆ ಈ ಸರ್ಕಾರ ಮಹತ್ವ ಕೊಡ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ  ಕಿಡಿಕಾರಿದ್ದಾರೆ.

ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿಯಿಂದ ನಡೆಯುತ್ತಿರುವ ನಡೆಯುತ್ತಿರುವ ಕಾವೇರಿ ಹೋರಾಟದಲ್ಲಿ ಭಾಗಿಯಾದ ಸಿಟಿ ರವಿ ರಾಜ್ಯ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ನೀರು ನಮ್ಮ ಹಕ್ಕು ಅಂತ ಕಾಂಗ್ರೆಸ್ ನಾಯಕರ ಪಾದಯಾತ್ರೆ ಮಾಡಿದ್ರು. ಈಗ ಹಕ್ಕು ಹಾಗೂ ನೀರನ್ನ ಬಿಟ್ಟು ಕೊಟ್ಟಿದ್ದಾರೆ.  ಹಕ್ಕು ಕೂಡ ತಮಿಳುನಾಡಿಗೆ ನೀರು ಕೂಡ ಅವರಿಗೆ. ನಮ್ಮ ರೈತರ ಗತಿ ಏನು? ಗಾಯದ ಮೇಲೆ ಬರೆ ಹಾಕಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಗಾಲದ ಸಂದರ್ಭದಲ್ಲಿ ನೀರು ಬಿಟ್ಟಿರೋದು ಏನು? ನಿಮ್ಮ ಪಾದಯಾತ್ರೆ ಉದ್ದೇಶ ತಮಿಳುನಾಡಿಗೆ ಬಿಡುವ ಉದ್ದೇಶ ನಾ? ಅವರು ಕೇಳುವುದಕ್ಕು ಮುಂಚೆ ನೀರು ಬಿಟ್ಟಿದ್ದಿರಿ. ಕೆಆರ್ ಎಸ್ ನಲ್ಲಿ 20 ಟಿಎಂಸಿ ಇದೆ. ಕುಡಿಯುವ ನೀರಿಗೆ ಎನು ಮಾಡ್ತಾರೆ ಇವರು ಎಂದು ಪ್ರಶ್ನೆ ಮಾಡಿದರು.

ಕಾವೇರಿ ವಿಚಾರದಲ್ಲಿ ಸೋನಿಯಾ ಗಾಂಧಿ ಮಧ್ಯೆ ಪ್ರವೇಶ ಮಾಡಲಿ ತಮಿಳುನಾಡಿನಲ್ಲಿರೋ ಇಂಡಿಯಾ ಇಲಯನ್ಸ್ ಇದೆ. ಸೋನಿಯ ಗಾಂಧಿ ಅವರ ಮಾತನ್ನ ಸ್ಟಾಲಿನ್ ಕೇಳ್ತಾರೆ. ಡಿ ಕೆ ಶಿವಕುಮಾರ್ ಸಿದ್ದರಾಮಯ್ಯ ಅವರು ಡಿಎಂಕೆ ಪರ ಪ್ರಚಾರಕ್ಕೆ ಹೋಗಿದ್ರು. ಇವರು ಯಾಕೆ ಮಾತನಾಡ್ತಿಲ್ಲ.? ಕೆಪಿಸಿಸಿ ಅಧ್ಯಕ್ಷರು ಬ್ಯುಸಿಯಾಗಿದ್ದಾರೆ. ಸೆಟ್ಲ್ ಮೆಂಟ್ ರಾಜಕಾರಣದಲ್ಲಿ ಬಿಸಿ ಇದ್ದಾರೆ.  ಸೋನಿಯಾ ಗಾಂಧಿ ಮದ್ಯೆ ಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು.

ಅಧಿಕಾರಕ್ಕೆ ಪಾದಯಾತ್ರೆ ಮಾಡಿ ರೈತರಿಗೆ ಚಿಪ್ಪು ಕೊಟ್ಟಿದ್ದಾರೆ. ಜನ ನಂಬಿ ವೋಟ್ ಹಾಕಿದವರಿಗೆ ಅನ್ಯಾಯ ಮಾಡಿದ್ದಾರೆ. ಕುಡಿಯುವ ನೀರಿಲ್ಲ ಅಂತ ಹೇಳಿ, ನೀರು ಬಿಟ್ಟು ಸರ್ವಪಕ್ಷ ಸಭೆ ಕರೆಯುತ್ತಿರಿ. ಹಾಗದ್ರೆ ಯಾವ ಉದ್ದೇಶಕ್ಕೆ ಪಾದಯಾತ್ರೆ ಮಾಡಿದ್ರಿ ಎಂದು ಪ್ರಶ್ನಿಸಿದರು.

ಆಡಳಿತ ನಡೆಸುವ ಪಕ್ಷಗಳು ಬದಲಾಗಿವೆ. ಆದರೆ ರೈತ ಹಿತರಕ್ಷಣಾ ಸಮಿತಿ ನಿಲುವುಗಳು ಎಂದಿಗೂ ಬದಲಾಗಿಲ್ಲ. ಕಾವೇರಿ ಉಪನದಿ ಹೇಮಾವತಿ ಉಗಮವಾಗುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ನನ್ನ ಸಾರ್ವಜನಿಕ ಜೀವನ ಪ್ರಾರಂಭವಾಗಿದ್ದು ರೈತ ಚಳವಳಿ ಮೂಲಕ.  ನನಗೂ ರೈತ ಕುಟುಂಬದ ಹಿನ್ನೆಲೆ ಇದೆ. ರೈತನ ನೋವು-ನಲಿವು ನನಗೆ ಗೊತ್ತಿದೆ. ಇವತ್ತು ನಡೆಯುತ್ತಿರುವ ಅನ್ಯಾಯ ವಿರುದ್ಧ ಧ್ವನಿ ಎತ್ತದೆ ಇದ್ರೆ ಬದುಕಿದ್ದು ಸತ್ತಂತೆ. ಆ‌ ಕಾರಣಕ್ಕೆ ಪ್ರತಿಭಟನೆಗೆ ಬಂದಿದ್ದೇನೆ ಎಂದು ಹೇಳಿದರು.

ಹೋರಾಟ ಮಂಡ್ಯದವರು ಮಾತ್ರ ಅಲ್ಲ ಬೆಂಗಳೂರಿನವರು ಮಾಡಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಎಲ್ಲಿಂದ ತರ್ತೀರಿ. ಕಬಿನಿ, ಕೆಆರ್‌ಎಸ್ ಕಟ್ಟಿದ್ದು ತಮಿಳುನಾಡಿಗೆ ಬೇಕಾದಾಗ ನೀರು ಬಿಡೋದಕ್ಕಾ? ಮಳೆ ಆದಾಗ ನಾವ್ಯಾರು ನೀರು ಯಾಕೆ ಬಿಟ್ರಿ ಎಂದು ಕೇಳಿಲ್ಲ. ಆದರೆ ಸಂಕಷ್ಟ ಇದ್ದ ಕಾಲದಲ್ಲಿ ನೀರು ಬಿಡಬಾರದು. ನಮ್ಮ ನೀರು ನಮ್ಮ ಹಕ್ಕು ಎಂದು ಹೋರಾಟ ಮಾಡಿದವರು ಈಗ ಎಲ್ಲಿಗೋಯ್ತು ಹಕ್ಕು. ರಾಜ್ಯದ ಹಿತ ಮುಖ್ಯವಾ ಇಲ್ಲಾ ನಿಮಗೆ ರಾಜಕೀಯ ಸಂಬಂಧ ಮುಖ್ಯವಾ? ಎಂದು  ಪ್ರಶ್ನಿಸಿದರು.

ಅಧಿಕಾರದಲ್ಲಿದ್ದಾಗ ಗುಂಡಾ ರೀತಿ ದುರಹಂಕಾರದಿಂದ ವರ್ತಿಸಬೇಡಿ. ನಿಮ್ಮ ದುರಹಂಕಾರಕ್ಕೆ ಈ ಜನ ಮದ್ದು ಅರೆಯುತ್ತಾರೆ. ಏನು ಬೇಕಾದರೂ ಆಗಲಿ ರಾಜ್ಯದ ಹಿತ ಮುಖ್ಯ ಎಂದಿದ್ದರೆ ಅದು ಸದ್ಗುಣ. ನೀರು ಉಳಿಸಿಕೊಳ್ಳುವ ಕೆಲಸ ನಿಮ್ಮಿಂದ ಆಗಿಲ್ಲ. ಹಂಚಿ ತಿನ್ನೋದು, ಕುಡಿ ಬಾಳೋದು ಈ ನೆಲಸ ಗುಣ. ಈಗ ನಾವೇ ಒಣಗಿ ಹೋಗುವಾಗ ಕುಡಿಯುವ ನೀರು ಕೇಳಿದ್ರೆ ದುರಹಂಕಾರ ಮಾತು ಆಡ್ತೀರಾ? ರಾಜ್ಯ ಸರ್ಕಾರ ನೀರು ಬಿಡಲ್ಲ ಎಂದು ನಿಲುವು ತಾಳಲಿ. ನಾವು ಅವರೊಂದಿಗೆ ನಿಲ್ಲುತ್ತೇವೆ. ತಮಿಳುನಾಡು ಕೇಳುವ ಮುನ್ನ ನೀರು ಬಿಟ್ಟಿದ್ದು ಕಾಂಗ್ರೆಸ್ ಸರ್ಕಾರಪಕ್ಷಾತೀತವಾಗಿ ನಿಮ್ಮ ಪರ ನಿಲ್ತೀವಿ ನೀರು ಬಿಡದಿರುವ ನಿಲುವು ತೆಗೆದುಕೊಳ್ಳಿ. ಸುಪ್ರೀಂ ನಿಮ್ಮನ್ನು ಜೈಲಿಗೆ ಹಾಕಲು ಮುಂದಾದರೆ. ನಿಮ್ಮ ಜೊತೆ 7 ಕೋಟಿ ಕನ್ನಡಿಗರು ಬರ್ತಾರೆ. 7 ಕೋಟಿ ಜನರನ್ನು ಕೂಡಿಡುವ ಜೈಲು ಪ್ರಪಂಚದಲ್ಲೇ ಇಲ್ಲ ಎಂದರು.

ಹಿಂದಿನ ಲೇಖನಬೆಂಗಳೂರು: ಹಿಟ್ ಆ್ಯಂಡ್ ರನ್ ​​ಗೆ ಓರ್ವ ಬೈಕ್ ಸವಾರ ಸಾವು
ಮುಂದಿನ ಲೇಖನಕೋಳಿ ಸಾಕಾಣಿಕೆ ಕೃಷಿ ಚಟುವಟಿಕೆ ಎಂದ ಹೈಕೋರ್ಟ್‌; ತೆರಿಗೆ ವಾಪಸ್‌ ಮಾಡಲು ಗ್ರಾಮ ಪಂಚಾಯಿತಿಗೆ ನಿರ್ದೇಶನ