ಮೈಸೂರು, ಸೆಪ್ಟೆಂಬರ್ 05: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿಜಿ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಹಿಜಾಬ್ ಪರರ ವಿರೋಧ ವ್ಯಕ್ತ ಬೆನ್ನಲ್ಲೇ ಸರ್ಕಾರ ಪ್ರಶಸ್ತಿ ತಡೆಹಿಡಿದಿತ್ತು. ಸದ್ಯ ಈ ವಿಚಾರವಾಗಿ ಕೃಷ್ಣರಾಜ ಬಿಜೆಪಿ ಶಾಸಕ ಶ್ರೀವತ್ಸ ಪ್ರಕ್ರಿಯಿಸಿದ್ದು, ಇದು ಹಿಂದೂ ವಿರೋಧಿ, ಕೋಮುವಾದಿ ನಿರ್ಧಾರ ಎಂದು ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೂಡಲೇ ನಿರ್ಧಾರ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುತ್ತೇವೆ. ಪಕ್ಷದ ಹಿರಿಯರ ಜತೆ ಚರ್ಚೆ ನಡೆಸಿ ಪ್ರತಿಭಟನೆ ಮಾಡುತ್ತೇವೆ. ಸರ್ಕಾರದ ನಿರ್ಧಾರಗಳು ಮುಖ್ಯಮಂತ್ರಿ ಗಮನಕ್ಕೆ ಬರುತ್ತಿಲ್ಲ. ಪ್ರಶಸ್ತಿ ಘೋಷಣೆ ಮಾಡುವ ಮುನ್ನ ಏಕೆ ಈ ಬಗ್ಗೆ ಯೋಚಿಸಿಲ್ಲ. ಘೋಷಣೆ ಮಾಡಿದ ನಂತರ ತಡೆ ಹಿಡಿದಿರುವುದು ಯಾಕೆ? ದಿನೇಶ್ ಕುಮಾರ್ ವರ್ಗಾವಣೆ ವಿಚಾರದಲ್ಲೂ ಇದೇ ರೀತಿ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
Saval TV on YouTube