ಮನೆ ಮನರಂಜನೆ ಭೈರಾದೇವಿ ಸಿನಿಮಾ ವಿಮರ್ಶೆ

ಭೈರಾದೇವಿ ಸಿನಿಮಾ ವಿಮರ್ಶೆ

0

ದೈವಶಕ್ತಿ, ದುಷ್ಟಶಕ್ತಿ, ದೆವ್ವ, ಭೂತ, ಅಗೋಚರ, ವಾಮಾಚಾರ… ಇತ್ಯಾದಿಗಳ ನಿಗೂಢ ಲೋಕದ ಪಯಣ ಒಮ್ಮೆ ಭಯಂಕರ, ಮತ್ತೂಮ್ಮೆ ವಿಸ್ಮಯ..! ಆದರೆ ದೆವ್ವ-ದೈವಗಳನ್ನು ನಂಬದೇ ಇರುವ ಡಿಸಿಪಿ ಅರವಿಂದ್‌ ಗೆ ನಿಜವಾಗಿಯೂ ದೆವ್ವದ ಕಾಟ ಶುರುವಾದಾಗ ಆತ ಏನು ಮಾಡುತ್ತಾನೆ ಎಂಬುದೇ ಮುಂದಿನ ಕೌತುಕ.

Join Our Whatsapp Group

ಆರಂಭದಲ್ಲಿ ಇದು ಕೌಟುಂಬಿಕ ಸಿನಿಮಾ ಎನಿಸುತ್ತದೆ. ಮುಂದೆ ಸಾಗುತ್ತಾ… ಸಸ್ಪೆನ್ಸ್, ಥ್ರಿಲ್ಲರ್‌, ಕ್ರೈಂ… ಹೀಗೆ ನಾನಾ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಹಲವಾರು ಕಥೆಗಳನ್ನು ಹೇಳಲು ಹೊರಡುವ ನಿರ್ದೇಶಕ ಶ್ರೀಜೈ, ಅಘೋರಿಗಳ ಕಥೆಯನ್ನು ತುಸು ಹೆಚ್ಚಾಗಿಯೇ ಹೇಳಿದ್ದಾರೆ. ಹೀಗಾಗಿ ಸಾಮಾನ್ಯ ಜಗತ್ತಿನ ಚಿತ್ರಣಕ್ಕಿಂತ ಅಘೋರಿಗಳ ಆಚರಣೆ, ನೀತಿ-ನಿಯಮಗಳು ತೆರೆಯ ಮೇಲೆ ಒಂದಷ್ಟು ಕಾಣಬಹುದು. ಆದರೆ ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿರಿಸುವಲ್ಲಿ ನಿರ್ದೇಶಕರ ಕಾರ್ಯ ಸಫ‌ಲವಾಗಿದೆ. ‌

ಇಂಥ ಸಿನಿಮಾಗಳಲ್ಲಿ ತಾರಾಗಣದ ಜತೆಜತೆಗೆ ತಾಂತ್ರಿಕವಾಗಿಯೂ ಅಷ್ಟೇ ಗಟ್ಟಿಯಾಗಿರಬೇಕು. ಆ ತಂಡವನ್ನೂ ಸಮರ್ಥವಾಗಿ ಕಟ್ಟಿಕೊಂಡಿರುವುದು ಸಿನಿಮಾದ ಆರಂಭದಲ್ಲೇ ಕುರುಹು ಸಿಗುತ್ತದೆ.

ಮುಖ್ಯವಾಗಿ ರಮೇಶ್‌ ಅರವಿಂದ್‌ ಎರಡೂ ಶೇಡ್‌ ನ‌ಲ್ಲಿ ಗಮನ ಸೆಳೆಯುತ್ತಾರೆ. ರಾಧಿಕಾ ಕುಮಾರಸ್ವಾಮಿ ಗೆಟಪ್‌, ನಟನೆ ಚಿತ್ರದ ಪ್ಲಸ್‌ ಪಾಯಿಂಟ್‌. ಹಾಗೆಯೇ ಅವರ ಪಾತ್ರಕ್ಕೆ ಡಬ್‌ ಮಾಡಿರುವ ಕಲಾವಿದೆಗೂ ಬಹುಪಾಲು ಕ್ರೆಡಿಟ್‌ ಸಲ್ಲಬೇಕು. ಅನು ಪ್ರಭಾಕರ್‌, ರಂಗಾಯಣ ರಘು ಮುಂತಾದವರು ತಮಗೆ ಸಿಕ್ಕ ಅವಕಾಶವನ್ನು ನೀಟಾಗಿ ನಿಭಾಯಿಸಿದ್ದಾರೆ. ಸೆಂದಿಲ್‌ ಪ್ರಶಾಂತ್‌ ಸಂಗೀತ ಸಂಯೋಜನೆ ಚಿತ್ರವನ್ನು ಮತ್ತಷ್ಟು ಹಿಡಿದಿಟ್ಟು ಕೂರುವಂತೆ ಮಾಡುತ್ತದೆ. ರವಿಚಂದ್ರನ್‌ ಸಂಕಲನ ಚಿತ್ರಕ್ಕೆ ಪೂರಕವಾಗಿದೆ.