ಚರಣದ ಸ್ವಾಮಿ ಫಲ :
★ಭರಣಿ ನಕ್ಷತ್ರದ ಪ್ರಥಮ ಚರಣದ ಸ್ವಾಮಿ ಸೂರ್ಯ ಶುಕ್ರ ಜಾತಕರನ್ನು ಅಹಂಕಾರಿ ಮತ್ತು ಪ್ರಶಂಸಾಪ್ರಿಯರನ್ನಾಗಿಸುವರು.
★ದ್ವಿತಿಯ ಚರಣದ ಸ್ವಾಮಿ ಶುಕ್ರ ಬುಧ ಭೌದ್ಧಿಕ ಕಾರ್ಯಗಳತ್ತ ಅಭಿರುಚಿಯುಂಟು ಮಾಡುವರು.
★ತೃತೀಯ ಚರಣದ ಸ್ವಾಮಿ ಶುಕ್ರ ಶುಕ್ರಾ ಆಧಿಕ ಸಮತೋಲನ ಅಥವಾ ದ್ವಿಗುಣಿತ ವ್ಯವಹಾರದ ಪ್ರವೃತ್ತಿ ನೀಡುವರು.
★ಚತುರ್ಥ ಚರಣದ ಸ್ವಾಮಿ ಶುಕ್ರ ಮಂಗಳ ಉಗ್ರತೆಯೊಡನೆ ಮನಸ್ಸಿನ ಭಾವನೆಗಳನ್ನು ಪ್ರಕಟಿಸದಿರುವ ಗುಣವನ್ನು ಪ್ರಧಾನಿಸುವರು.
*ಭರಣಿ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಹಂಸಗಳು :
ಪ್ರಮಾಣ ಮಾಡಿದರೆ ಕಷ್ಟಪರವಾಗುತ್ತದೆ.ಕ್ಷೌರ ಮಾಡಿಸಿಕೊಂಡರೆ ತಲೆನೋವು ಭಾಧಿಸುತ್ತದೆ. ಮೈಥುನದಿಂದ ಮೇಹವ್ಯಾಧಿ ಪೀಡಿಸುತ್ತದೆ. ಹೆಣ್ಣು ಋತುಮತಿಯಾದರೆ ಜನಿಸುವ ಸಂತಾನಕ್ಕೆ ಹಾನಿ.ಆದ್ದರಿಂದ ಆರು ತಿಂಗಳಿನವರೆಗೆ ನಿಷೇಕ ಪ್ರಸ್ತಾ ಮಾಡಬಾರದು. ಅಪಶಕುನ ಭೂಕಂಪವಾದರೆ ಜ್ವರ, ರೋಗಾದಿಗಳು ಪೀಡಿಸುತ್ತವೆ. ಈ ನಕ್ಷತ್ರ ಯಾವ ಶುಭಕಾರ್ಯಕ್ಕೂ ಯೋಗ್ಯವಾದದ್ದಲ್ಲ.ಪ್ರಯಾಣದ ಅನಿವಾರ್ಯತೆಯಿದ್ದರೆ ತಿಲಾನ್ನ ವನ್ನು ಸೇವಿಸಿ ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪಯಾಣ ಮಾಡಬಾರದು.ಈ ನಕ್ಷತ್ರದಲ್ಲಿ ಅನ್ಯರಿಂದ ಪ್ರಹಾರ, ಬಂಧನ, ವಿಷಯ ಪ್ರಯೋಗ,ಅಗ್ನಿ ಪ್ರಯೋಗ, ಆಯುಧ ಪ್ರಯೋಗ, ಮಿತ್ರ ಭೇದ,ಚಾಟಿ ದೂರು ಹೇಳುವುದು, ವ್ಯಭಿಚಾರ,ದಬ್ಬಾಳಿಕೆ, ಜೂಜು, ಮಾಟ,ಮಂತ್ರ,ತಂತ್ರ, ಮಳೆಮಾಡಿ ಮದ್ದಿಡುವುದು,ಶಾಪ ಹಾಕುವುದು, ಅಸತ್ಯ,ಅಪಸಾಕ್ಷ್ಯ,ಚೌರ್ಯ, ಆಟಾಟೋಪ, ಹಕ್ಕಿ ಪಿಕ್ಕಿ ವಿದ್ಯೆ, ಪಿತೃ ಕರ್ಮ, ಶ್ರದ್ಧ ಇಂಥ ಕಾರ್ಮಗಳು ನಡೆಯುತ್ತವೆ.
ಈ ನಕ್ಷತ್ರದಲ್ಲಿ 24 ಗಳಿಗೆಯಿಂದ 28ರ ವರೆಗೆ ನಾಲ್ಕು ಗಳಿಗೆ ವಿಷಯಗಳಿಗೆಗಳು. ಇದರಲ್ಲಿ ಜನಿಸುವವನು ಕುಲಕ್ಷಯ ಮಾಡುತ್ತಾನೆ. 48ರಿಂದ 52ರ ವರೆಗೆ 4 ಗಳಿಗೆ ಅಮೃತಕಾಲ!; ಇದರಲ್ಲಿ ಹುಟ್ಟುವನು ಧರ್ಮಪರನಾಗಿ ಯೋಗ್ಯನೆನಿಸಿಕೊಳ್ಳುತ್ತಾನೆ.ಇದು ಮಧ್ಯನಾಡಿ ನಕ್ಷತ್ರ, ಜಾನುರಜ್ಜು, ಇದರಲ್ಲಿ ಜನಿಸಿದವರಿಗೆ ಮೃಗಶಿರಾ, ಪುಷ್ಪ, ಪೂರ್ವ ಪಾಲ್ಗುಣಿ, ಚಿತ್ತಾ. ಅನುರಾಧಾ, ಪೂರ್ವಷಾಢ, ಧನಿಷ್ಠಾ, ಉತ್ತರಾಭಾದ್ರಪದಾ, ಈ 8 ನಕ್ಷತ್ರಗಳ ವರನೊಡನೆ ವಿವಾಹಕ್ಕೆ ಘಟಿಕಾರ್ಥ ಮಧ್ಯೇಕ ನಾಡಿ ಆಗುವುದರಿಂದ ವೈಧವ್ಯದೋಷವಾಗುತ್ತದೆ. ಅದಿ ಭಾಗದಲ್ಲಿ ಏಳು ಗಳಿಗೆ ಅಭುಕ್ತ ಭರಣಿ ದೋಷ,ಆಗ ಜನಿಸಿದವರು ನಿಚ್ಚರಾಗುತ್ತಾರೆ. ಉಳಿದ ನಕ್ಷತ್ರ ಗಳಿಗೆಯಲ್ಲಿ ಜನಿಸಿದವರು ಮಿಶ್ರಿತ💋 ಗುಣದವರಾಗಿ ದುಷ್ಟರಿಗೆ ದುಷ್ಟರು ಮತ್ತು ಉತ್ತಮರಿಗೆ ಉತ್ತಮರಾಗಿ ಕಲಿಕಾಲಕ್ಕೆ ತಕ್ಕವರಾಗಿರುತ್ತಾರೆ.
ಈ ನಕ್ಷತ್ರದಲ್ಲಿ ಮರಣವಾರ್ತೆ ಬಂದರೆ ತಪ್ಪುವುದಿಲ್ಲ.ಪ್ರಶ್ನೆ ಕೇಳಿದರೆ ವಿಳಂಬವಾಗುತ್ತದೆ. ಕಷ್ಟ ಸಾಧ್ಯ ರೋಗ ಉಂಟಾದರೆ 10 ದಿನ ಕ್ರೂರ ಮಹಾಗಂಡವಾಗುತ್ತದೆ ಈ ನಕ್ಷತ್ರವು ಪಾಲ್ಗುಣ ಮಾಸದಲ್ಲಿ ಶೂನ್ಯವಾಗುತ್ತದೆ. ಯೋಗ ಕುಡಿದರೆ ಹೆಸರಿಗೆ ತಕ್ಕಂತೆ ಬಲವಾಗುತ್ತದೆ.ಭರಣಿ ನಕ್ಷತ್ರದಲ್ಲಿ ಮನೆಯಲ್ಲಿ ಮೃತ್ಯು ಸಂಭವಿಸಿದರೆ, ಅದೇ ವರ್ಷದೊಳಗೆ ಮತ್ತೊಂದು ಮೃತ್ಯು ಸಂಭವಿಸುತ್ತದೆ.ಯಾವ ದೋಷವಿದ್ದರೂ ಶಾಂತಿ ಮಾಡಿಸಿದರೆ ಪರಿಹಾರ ಪ್ರಾಪ್ತಿಯಾಗುತ್ತದೆ.
ಚಂದ್ರಗರ್ಭಚಕ್ರದಲ್ಲಿ, ಭರಣಿಯು ಶೂಲದಲ್ಲಿ ಹತ್ತಿದಾಗ ಚಂದ್ರನು ಭರಣಿಗೆ ಬಂದಾಗ, ಭರಣಿ ನಕ್ಷತ್ರದವರಿಗೆ ಜ್ವರಾದಿ ಮಹಾರೋಗಗಳು ಉಂಟಾದರೆ ಆ ಗಂಡತಪ್ಪುವುದು, ಕಷ್ಟಕರ ಜೇಷ್ಠಾದಲ್ಲಿ ಸೂರ್ಯ, ರೇವತಿಯಲ್ಲಿ ಮಂಗಳ, ಶತಾಭಿಷಾದಲ್ಲಿ ಗುರು, ಶ್ರಾವಣದಲ್ಲಿ ಶನಿ, ಪುಷ್ಪದಲ್ಲಿ ಬುಧ, ಮಘಾದಲ್ಲಿ ರಾಹು, ಆರಿದ್ರಾದಲ್ಲಿ ಶುಕ್ರ, ಧನಿಷ್ಠಾದಲ್ಲಿ ಬಲಿಷ್ಠ ಚಂದ್ರನು ಭ್ರಮಣಿಸುವ ಕಾಲಾವಧಿಯಲ್ಲಿ ಆಯಾ ಗ್ರಹಗಳು ಜಾತಕದಲ್ಲಿ ಹಿಡಿಸುತ್ತವೆ.
ಬರಣಿ ನಕ್ಷತ್ರದಲ್ಲಿ ಚಂದ್ರನಿರುವಾಗ ಜನಿಸಿದ ಜಾತಕನು ಚಂಚಲ, ಅಲ್ಪ ಆಚಾರದವ, ಮೋಹಕಾರಕ ಶತ್ರು ವೃದ್ಧಿ, ಆಯಸ್ಸು ವೃದ್ಧಿ, ದಿಟವನ್ನು ಹೇಲುವವ, ಗುಟ್ಟು ರಕ್ಷಿಸುವವ, ಅಹಂಕಾರಿ, ಬುದ್ಧಿವಂತ ಪುತ್ರನಾಗುವವನು. ಕಷ್ಟ ಸುಖಗಳನ್ನು ವಿಪುಲವಾಗಿ ಅನುಭವಿಸುವವ ಕಾಮಿ, ದಾತ, ಅಲಸಿ, ಮಂದಗಾವಮಿ, ಮರೆಗುಳಿ, ಈರ್ಷೆಯುಕ್ತನೂ ಆಗುತ್ತಾನೆ.ಅನ್ಯರಿಗೆ ಉಪಕಾರಿ, ಹಠಮಾರಿ,ಕೆಂಪುನೇತ್ರದವ ಗುಂಗುರು ಕೂದಲಿನವ, ಹೊಕ್ಕಳು ಬಳ್ಳಿಯಲ್ಲಿ ಮೃತ್ಯು ರೇಖೆ ಸೂಕ್ಷ್ಮ ರೇಖೆ,ತೊಡೆಗಳಿಗೆ ತೊಂದರೆ ಈ ಫಲಗಳನ್ನು ಛಾಯಾಮಾತ್ರವಾಗಿ ಅನುಭವಿಸುತ್ತಾನೆ.
ಒಂದನೇ ಚರಣಕ್ಕೆ ಸೂರ್ಯ, ರಾಜೌಂಶ, ಗುಣವಂತ ಎರಡನೇ ಚರಣಕ್ಕೆ ಬುಧ,ಷಡಾಂಶ ಲೋಬಿ, ಮೋಸಗಾರ ಮೂರನೇ ಚರಣಕ್ಕೆ ಶುಕ್ರ, ವಿಜಯಾಂಶ, ಶೂರ, ಉತ್ಸಾಹಿ,ಅಧಿಕ ಕೇಶಗಳುಳ್ಳವ, ನಿರ್ವಯಿ, ನಾಲ್ಕನೇ ಚರಣಕ್ಕೆ ಮಂಗಳ, ದಾರಿದ್ರಾಂಶ ಮತ್ತು ಕ್ರೂರ ಅಧಿಕ ಸಂತಾನ ಕಷ್ಟಕಾರ್ಯ ನಿರ್ವಹಿಸಿ ಫಲಕಾಲದಲ್ಲಿ ಬಿಟ್ಟು ನಿಷ್ಠುರ ಕಟ್ಟಿಕೊಳ್ಳುತ್ತಾನೆ.
ಭರಣಿ ನಕ್ಷತ್ರದಲ್ಲಿ ಜನಿಸಿಗದ ವರಿಗೆ ಜನ್ಮಕಾಲದಲ್ಲಿ ಶುಕ್ರ ದೆಶಾ 20 ವರ್ಷಗಳ ಕಾಲ ಪೈಕಿ ನಕ್ಷತ್ರಗಳಿಗೆ ಶೇಷ ಇರುವ ತಕ್ಕ ಪ್ರಮಾಣ ಉಳಿದಿರುತ್ತದೆ. ಉಳಿದಿರುತ್ತದೆ.ಒಂದನೇ ವಾಸದಲ್ಲಿ ಅಪಮೃತ್ಯು 70 ರಲ್ಲಿ ಶತ್ರು 76 ರಲ್ಲಿ ಮೃಗಭಯ, 90ರಲ್ಲಿ ಮೃತ್ಯು ಈ ದಿನ ಈ ತಿಂಗಳು ಈ ವರ್ಷಗಳಲ್ಲಿ ಕ್ರೂರವಾಗಿರುತ್ತದೆ. ಈ ಫಲಗಳು ಸಹಜವಾಗಿ ನಡೆಯುತ್ತಿವೆ. ಶುಭಗ್ರಹದ ಬಲವಿದ್ದರೆ ನಿರ್ವಹಣೆಯಾಗಿ ಹೋಗುತ್ತವೆ ಅನ್ಯಥಾ ಕಷ್ಟತಪ್ಪದು. ಈ ನಕ್ಷತ್ರ ತುಂಬ ಅಶುಭವಾದಂಥದು ಇದರಲ್ಲಿ ಶುಭವಾಗುವುದು ತುಂಬಾ ಖಚಿತ.