ಭರಣಿ ನಕ್ಷತ್ರದ ಜಾತಕರ ವಿವಾಹಕ್ಕೆ ಹೊಂದುವ ನಕ್ಷತ್ರಗಳು
ಭರಣಿ ನಕ್ಷತ್ರದ ಕನ್ಯೆಗೆ
ಅಶ್ವಿನಿ, ರೋಹಿಣಿ, ಮೃಗಶಿರಾ, ಪುನರ್ವಸು, ಆಶ್ಲೇಷಾ ಮಘಾ
ಉತ್ತರಾಫಾಲ್ಗುಣಿ,ಉತ್ತರಾ, ಹಸ್ತ, ಚಿತ್ತಾ,
ಸ್ವಾತಿ, ವಿಶಾಖ, ಅನುರಾಧ,ಜೇಷ್ಠಾ,
ಮೂಲಾ, ಪೂರ್ವಾಷಾಢಾ,
ಉತ್ತರಾಷಾಢ, ಪೂರ್ವ ಭಾದ್ರಪದಾ,
ಉತ್ತರಭಾದ್ರಪದಾ ರೇವತಿ.
ಭರಣಿ ನಕ್ಷತ್ರದ ವರನಿಗೆ
ಕೃತಿಕಾ ನಾಲ್ಕನೇ ಚರಣ, ರೋಹಿಣಿ, ಮೃಗಶಿರಾ,
ಆರ್ದ್ರಾ,ಪುನರ್ವಸು 4ನೇ ಚರಣ,ಸ್ವಾತಿ,
ವಿಶಾಖಾ, ಅನುರಾಧಾ, ಜೇಷ್ಠಾ, ಮೂಲಾ,
ಪೂರ್ವಾಷಾಢಾ, ಉತ್ತರಾಷಾಢಾ, ಶ್ರಾವಣ,
ಪೂರ್ವಭಾದ್ರಪದ ನಾಲ್ಕನೇ ಚರಣ,
ಉತ್ತರಾಭಾದ್ರಪದಾ, ರೇವತಿ.
ಭರಣಿ ನಕ್ಷತ್ರದವರ ಜನನಕ್ಕೆ ಶಾಂತಿ :
*ಯಮತ್ಯಾಂ ಗಿರಸ್ವತೇ ಪಿತೃಮತೇ ಸ್ವಾಹಾ ಸ್ವಾಹಾ |
ಫರ್ಮಾಯ ಸ್ವಾಹಾ ಫರ್ಮಃ ಪಿತ್ರೇ ||
ತಾಯಿ ತಂದೆಯರು ತಮಗೆ ಬರಲಿ ನಕ್ಷತ್ರದಲ್ಲಿ ಸಂತಾನ ಪ್ರಾಪ್ತಿಯಾದಾಗ ಈ ಮಂತ್ರವನ್ನು ಒಂದು ಮಾಲೆಯಷ್ಟು ಪಠಿಸಿ,ಅಕ್ಕಿ, ಬೆಲ್ಲ, ತೊಗರಿಬೇಳೆಯನ್ನು ಯಥಾ, ಸಾಮರ್ಥ್ಯ ದಾನ ನೀಡಬೇಕು. ಇದರಿಂದ ನಕ್ಷತ್ರದ ದೋಷ ನಿವಾರಣೆಯಾಗುತ್ತದೆ.
ಯಂತ್ರ :
ಈ ಯಂತ್ರವನ್ನು ಸುವರ್ಣ ಪತ್ರದ ಮೇಲೆ ಉತ್ಕೀರ್ಣಗೊಳಿಸಿ, ಮೃತ್ಯುಂಜಯ ಮಂತ್ರವನ್ನು ಒಂದು ಸಾವಿರ ಸಲ ಜಪಮಾಡಿ, ಮುತ್ತುಗದ ಕಾಷ್ಠ, ತುಪ್ಪ, ಜೇನುತುಪ್ಪದ,ಹವಿಸ್ಸುಗಳಿಂದ ಹೋಮ ಮಾಡಿ, ಮಗ್ದನ್ನದ ಬಲಿ ನೀಡಬೇಕು. ಇದರಿಂದ ಸಮಸ್ತ ಕಂಟಕಾದಿಂದ ದೋಷಗಳು ನಿವಾರಣೆಯಾಗುತ್ತವೆ.
ಓಂ ಹೌಂ ಜೂಂ ಸಃ ಮೃತ್ಯುಂಜಯಾಯ ನಮಃ