ಮನೆ ರಾಜ್ಯ ಕೈ ಮುಗಿದು ಕೇಳಿದರೂ ಬಿಡಲಿಲ್ಲ: ಸಿಎಂ ಎದುರು ಅಳುತ್ತ ಉಗ್ರರ ಕ್ರೌರ್ಯ ಬಿಚ್ಚಿಟ್ಟ ಭರತ್ ಭೂಷಣ್...

ಕೈ ಮುಗಿದು ಕೇಳಿದರೂ ಬಿಡಲಿಲ್ಲ: ಸಿಎಂ ಎದುರು ಅಳುತ್ತ ಉಗ್ರರ ಕ್ರೌರ್ಯ ಬಿಚ್ಚಿಟ್ಟ ಭರತ್ ಭೂಷಣ್ ಪತ್ನಿ

0

ಬೆಂಗಳೂರು : ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಪ್ರಾಣ ಕಳೆದುಕೊಂಡರು. ಮಗು ಇದೆ ಅಂದ್ರೂ ಶೂಟ್ ಮಾಡಿದ್ರು , ಕೈ ಮುಗಿದು ಕೇಳಿದರೂ ಬಿಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಎದುರು ಭರತ್ ಭೂಷಣ್ ಪತ್ನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇಂದು ಬೆಳಗ್ಗೆ ಭರತ್ ಭೂಷಣ್ ಪಾರ್ಥಿವ ಶರೀರ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಗೆ ಆಗಮಿಸಿತು. ಮನೆಗೆ ಬಂದ ಸುಜಾತಾ ಅವರು ಸಿಎಂ ಸಿದ್ದರಾಮಯ್ಯ ಎದುರು ಉಗ್ರರ ಕ್ರೌರ್ಯವನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಉಗ್ರರು ತನ್ನ ಪತಿಯ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ನಾನು ತಲೆ ಎತ್ತಲಿಲ್ಲ. ನನ್ನ 3 ವರ್ಷದ ಮಗುವನ್ನು ಉಳಿಸಿಕೊಳ್ಳಬೇಕಾಗಿದ್ದರಿಂದ ನಾನು ಓಡಿದೆ. ಅಲ್ಲಿ ಹೆಣ್ಣದ ರಾಶಿ ಬಿದ್ದಿತ್ತು. ಕೊನೆಗೆ ಕುದುರೆ ಸಹಾಯದಿಂದ ಬಂದು ಸಿಆರ್ ಪಿಎಫ್ ಮೆಸ್ ಗೆ ಬಂದೆ ಎಂದಿದ್ದಾರೆ. ಮೊದಲು ನಾವು ಪಟಾಕಿ ಶಬ್ದವಿರಬಹುದು ಎಂದು ಸುಮ್ಮನಿದ್ದೆವು. ಆದರೆ ಹತ್ತಿರದಲ್ಲೇ ಏನೋ ದಾಳಿ ನಡೆಯುತ್ತಿದೆ ಎಂದು ಗೊತ್ತಾಗಿತ್ತು ಎಂದಿದ್ದಾರೆ.

ನಾವು ಪಹಲ್ಗಾಮ್‌ನಲ್ಲಿದ್ದೇವೆ ಮತ್ತು ನನ್ನ ಪತಿ ನನ್ನ ಕಣ್ಣೆದುರೇ ನಿಧನರಾದರು. ನನಗೆ ಅಳಲು ಅಥವಾ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ – ಏನಾಯಿತು ಎಂದು ನನಗೆ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ.