Saval TV on YouTube
ಮೈಸೂರು(Mysuru): ಜಿಲ್ಲಾಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಮೈಸೂರಿನ ಭಾರತೀಯ ವಿದ್ಯಾ ಭವನ ಶಾಲೆಯ ತಂಡ ರಾಜ್ಯಮಟ್ಟಕ್ಕೆ ಆಯ್ಕಯಾಗಿದೆ.
ದೈಹಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಂಡ್ಯದ ಆದಿಚುಂಚನಗಿರಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹ್ಯಾಂಡ್ಬಾಲ್ ಸ್ಪರ್ಧೆಯಲ್ಲಿ ಭಾರತೀಯ ವಿದ್ಯಾ ಭವನ ಶಾಲೆಯ ಪಡೆದುಕೊಂಡಿದ್ದರು.
ಈ ಸ್ಪರ್ಧೆಯಲ್ಲಿ ಜಯಗಳಿಸಿದ ಬಳಿಕ ಭಾರತೀಯ ವಿದ್ಯಾ ಭವನದ ಶಾಲೆಯ ಹ್ಯಾಂಡ್ ಬಾಲ್ ತಂಡದ 10ನೇ ತರಗತಿ ವಿದ್ಯಾರ್ಥಿಗಳಾದ ದೀಕ್ಷಿತ್ .ಕೆ.ಆರ್., ವೈಭವ್ ಎಸ್.ಗೌಡ, ವಿಕಾಸ್.ಎಸ್.ಶೆಟ್ಟಿ, ಗಗನ್ ಎಸ್. ರೋಹನ್ ಜಿ. ಹಾಗೂ9ನೇ ತರಗತಿಯ ವಿಶೃತ್ ಎಚ್.ಎಂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನವೆಂಬರ್ 19, 20 ಹಾಗೂ 21 ರಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ನಡೆಯಲಿದೆ.















