ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಉಪಾಧ್ಯಕ್ಷರಾಗಿದ್ದ ಭಾಸ್ಕರ್ ರಾವ್ ಬುಧವಾರ ಬಿಜೆಪಿ ಸೇರಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಉಪಸ್ಥಿತಿ ಯಲ್ಲಿ, ಬಿಜೆಪಿ ಸೇರಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು, ಬಿಜೆಪಿ ಯುವ ಜನತೆಯ ಆಶಾ ಕಿರಣವಾಗಿದೆ ಎಂದರು.
ಈ ಹಿಂದೆ ಆಮ್ ಆದ್ಮಿ ಪಕ್ಷ ಸೇರಿದಾಗ ಬಿಜೆಪಿಯ ಆರೋಪ ಮಾಡಿದ ಕುರಿತು ಪ್ರಶ್ನಿಸಿದಾಗ, ಪಿಎಸ್’ಐ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಿ, ಯುವ ಜನತೆ ಮತ್ತೊಮ್ಮೆ ಅವಕಾಶ ನೀಡಬೇಕು. ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ ಎಂದರು.
ಆಮ್ ಆದ್ಮಿ ಪಕ್ಷವನ್ನು ಬಹಳ ನಿರೀಕ್ಷೆ ಇಟ್ಟುಕೊಂಡು ಸೇರಿದ್ದೆ. ಆದರೆ, ಯಾವ ರೀತಿಯಲ್ಲಿ ಬೆಳೆಯಬೇಕೋ ಆ ರೀತಿಯಲ್ಲಿ ಬೆಳವಣಿಗೆ ಆಗುತ್ತಿಲ್ಲ. ಆ ಪಕ್ಷದ ಕಾರ್ಯ ವೈಖರಿಯೂ ಭಿನ್ನವಾಗಿದೆ ಎಂದರು.
Saval TV on YouTube