ಬೆಂಗಳೂರು : ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ವರ್ಷ ಗುರುವಾರದಂದು (ಜ.15) ಸಂಕ್ರಾಂತಿ ಬಂದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಗವಿಗಂಗಾಧರ ದೇವಾಲಯ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ.
ಸಂಕ್ರಾತಿಯಂದು ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ಶುಭಘಳಿಗೆ. ಈ ವೇಳೆ ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವನ ಮೂರ್ತಿಯನ್ನು ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ. ಇದನ್ನು ಶಿವನಿಗೆ ಸೂರ್ಯದೇವ ಸಲ್ಲಿಸೋ ಪೂಜೆ ಅಂತಾ ನಂಬಿಕೆಯಿದ್ದು, ಈ ಬಾರಿ ಸಂಜೆ 5:02 ರಿಂದ 5:04ರವರೆಗೆ ಅಂದರೆ, ಎರಡು ನಿಮಿಷಗಳ ಕಾಲ ಶಿವನಿಗೆ ಭಾಸ್ಕರ ನಮಿಸಲಿದ್ದಾನೆ.
ಈ ಬಗ್ಗೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ಲಿಂಗಭಾಗದಲ್ಲಿ ಸೂರ್ಯರಶ್ಮಿ ಎರಡು ನಿಮಿಷಗಳ ಕಾಲ ಇದ್ರೇ ಶುಭ. ಸೂರ್ಯ ಪೂಜೆ ಬೇಗವಾದರೆ ಅದರ ಹಿಂದೆ ತೊಂದರೆಗಳಾಗುತ್ತವೆ ಎಂದರು. ಭಕ್ತಾಧಿಗಳು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಲ್ಲಿ ಎಲ್ಇಡಿ ವ್ಯವಸ್ಥೆ ಮಾಡಲಾಗಿದೆ. 2 ಎಲ್ಇಡಿ ಹಾಗೂ 5 ಟಿವಿಗಳ ವ್ಯವಸ್ಥೆ ಇರಲಿದೆ. ಗುರುವಾರ ರಾತ್ರಿ 10-11 ಗಂಟೆವರೆಗೂ ದೇವಾಲಯದ ಬಾಗಿಲು ತೆರಯಲಿದೆ ಎಂದರು.














