ಮನೆ ರಾಜ್ಯ ಭೀಮ ನಾಪತ್ತೆ – ರಾತ್ರಿಯಿಡಿ ಹುಡುಕಿದ್ರೂ ಸುಳಿವಿಲ್ಲ..!

ಭೀಮ ನಾಪತ್ತೆ – ರಾತ್ರಿಯಿಡಿ ಹುಡುಕಿದ್ರೂ ಸುಳಿವಿಲ್ಲ..!

0

ಹಾಸನ : ಕಾಡಾನೆ ಭೀಮ ಹಾಗೂ ಕ್ಯಾಪ್ಟನ್ ನಡುವೆ ನಡೆದ ಕಾದಾಟದಲ್ಲಿ ದಂತ ಮುರಿದುಕೊಂಡ ಭೀಮ ಯಾರ ಕಣ್ಣಿಗೂ ಕಾಣದಂತೆ ನಾಪತ್ತೆಯಾಗಿದ್ದಾನೆ. ಭಾನುವಾರ (ನ.9) ಸಂಜೆ 6:30ರ ಸುಮಾರಿಗೆ ಹಳೆ ಬಿಕ್ಕೋಡು ಬಳಿ ಭೀಮ ಕಾಣಿಸಿಕೊಂಡಿದ್ದ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಮರೆಯಾಗಿದ್ದಾನೆ.

ದಂತ ಮುರಿದುಕೊಂಡ ಬಳಿಕ ಭೀಮನ ಆರೋಗ್ಯದ ಸ್ಥಿತಿ ಬಗ್ಗೆ ತಿಳಿಯಲು ಭೀಮನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ ರಾತ್ರಿಯಿಡಿ ಶೋಧ ನಡೆಸಿದರೂ ಸಹ ಭೀಮನ ಸುಳಿವು ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಬೇಲೂರು ತಾಲೂಕಿನ ಜಗಬೋರನಹಳ್ಳಿ ಗ್ರಾಮದಲ್ಲಿ ಭೀಮ ಹಾಗೂ ಕ್ಯಾಪ್ಟನ್ ನಡುವೆ ಕಾಳಗ ನಡೆದಿತ್ತು. ಗಲಾಟೆ ಬಳಿಕ ಕ್ಯಾಪ್ಟನ್ ಗುಂಪು ಸೇರಿಕೊಂಡಿದ್ದಾನೆ. ಭೀಮ ಮಾತ್ರ ದಂತ ಮುರಿದುಕೊಂಡು ನರಳಾಡುತ್ತಾ ಕಾಡಿನಲ್ಲಿ ಮರೆಯಾಗಿದ್ದಾನೆ ಎನ್ನಲಾಗಿದೆ.