ಹಿಂದಿ ಭಾಷೆಯ ಭ್ರಮರ್ ನಿಂದ ಭ್ರಾಮರಿ ಪದ ಹುಟ್ಟಿಕೊಂಡಿದೆ. ಭ್ರಮರ್ ಎಂದರೆ ಜೇನು ನೊಣ. ಇದು ಉಸಿರಾಟದ ನಿಯಂತ್ರಣ ಮಾಡುವ ಕ್ರಮವಾಗಿದೆ. ಇಲ್ಲಿ ಉಸಿರನ್ನು ಹೊರಗೆ ಬಿಡುವಾಗ ಜೇನು ನೊಣದಂತೆ ಶಬ್ದ ಮಾಡುವುದು ಮುಖ್ಯವಾಗಿದೆ.
ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಮನಸ್ಸಿನ ಸುಸ್ತನ್ನು ಹೋಗಲಾಡಿಸಿ, ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಬಹಳ ಸರಳವಾದ ಒಂದು ಪ್ರಾಣಾಯಾಮವಾಗಿದೆ. ನೆಲದ ಮೇಲೆ ಕುಳಿತುಕೊಂಡು ಉಸಿರನ್ನು ಒಳಗೆ ತೆಗೆದುಕೊಂಡು ಒಂದೆರಡು ಸೆಕೆಂಡುಗಳ ಕಾಲ ಹಾಗೆಯೇ ಹಿಡಿದಿಟ್ಟು ನಂತರ ಉಸಿರನ್ನು ಬಿಡುವಾಗ ಜೇನು ನೊಣದಂತೆ ಸದ್ದನ್ನು ಮಾಡಿ ಉಸಿರನ್ನು ಹೊರಬಿಡಬೇಕಾಗುತ್ತದೆ.
ಇದನ್ನು ಹತ್ತರಿಂದ ಹದಿನೈದು ನಿಮಷ ಮಾಡಿದ್ದಲ್ಲಿ ಮನಸ್ಸು ಶಾಂತವಾಗಿರುವುದು ಮತ್ತು ಒತ್ತಡ ಕಡಿಮೆ ಆಗಿರುವುದನ್ನು ನಾವು ಆ ಕೂಡಲೇ ಗಮನಿಸಬಹುದು. ಗರ್ಭಿಣೀ ಸ್ತ್ರೀಯರು, ಮುಟ್ಟಿನ ಅವಧಿಯಲ್ಲಿರುವ ಮಹಿಳೆಯರು, ರಕ್ತದೊತ್ತಡ ಅಪಸ್ಮಾರ ಮತ್ತು ಎದೆನೋವು ಇರುವವರಿಗೆ ಈ ಪ್ರಾಣಾಯಾಮವನ್ನು ಸೂಚಿಸಲಾಗುವುದಿಲ್ಲ.