ಮನೆ ರಾಜ್ಯ ಬೀದರ್​​: ಎಟಿಎಂ ಮಶೀನ್ ಮುರಿದು 6.50 ಲಕ್ಷ ರೂ. ಕಳ್ಳತನ

ಬೀದರ್​​: ಎಟಿಎಂ ಮಶೀನ್ ಮುರಿದು 6.50 ಲಕ್ಷ ರೂ. ಕಳ್ಳತನ

0

ಬೀದರ್​​: ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಹರ್ಷಾ ಕಾಂಪ್ಲೆಕ್ಸ್ ಬಳಿಯ ಎಟಿಎಂ ಮಶೀನ್ ಮುರಿದು 6.50 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಖದೀಮರ ಕೈ ಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಂದು ಬೆಳಗಿನ ಜಾವ ಕರ್ನಾಟಕ ಬ್ಯಾಂಕ್ ​ನ ಎಟಿಎಂಗೆ ನುಗ್ಗಿದ ಖದೀಮರು ಗ್ಯಾಸ್ ಕಟರ್ ಬಳಸಿ ಎಟಿಎಂ ಮುರಿದು ಕಳ್ಳತನ ಮಾಡಿದ್ದಾರೆ. 10 ನಿಮಿಷದಲ್ಲಿ ಎಟಿಎಂನಲ್ಲಿದ್ದ ಹಣ ಕದ್ದು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.