ಬೆಂಗಳೂರು : ಮುಜರಾಯಿ ಇಲಾಖೆ ಬಿಗ್ ಆಪರೇಷನ್‌ವೊಂದನ್ನು ಶುರುಮಾಡಿದ್ದು, 40 ವರ್ಷಗಳಿಂದ ಬೆಂಗಳೂರಿನಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳನ್ನು ಜಪ್ತಿ ಮಾಡಿದೆ. ಮುಜರಾಯಿಯ ಅಡಿಯಲ್ಲಿ ಬರುವ ದೇವಸ್ಥಾನದ ಜಾಗದಲ್ಲಿರುವ ಅನಧಿಕೃತ ಅಂಗಡಿ, ಮೆಡಿಕಲ್ ಶಾಪ್‌ಗಳಿಗೆ ಇಲಾಖೆ ಬಿಗ್‌ಶಾಕ್ ನೀಡಿದೆ.
ಇದೀಗ ಮೈಸೂರು ರಸ್ತೆಯ ಕರೆಕಲ್ಲು ಆಂಜನೇಯ ದೇವಾಲಯದ ಜಾಗದಲ್ಲಿ 40 ವರ್ಷಗಳಿಂದ ಅನಧಿಕೃತವಾಗಿದ್ದ ಕೆಲವು ಅಂಗಡಿಗಳಿಗೆ ಬೀಗ ಹಾಕಿ, ಜಪ್ತಿ ಮಾಡಿದ್ದು, ವಾಸಕ್ಕೆ ಯೋಗ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.














