ಪಟ್ನಾ: ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಜತೆ ರಾಜಭವನಕ್ಕೆ ತೆರಳಿದ ಇಂದು ಸಂಜೆ ರಾಜೀನಾಮೆ ನೀಡಿದ್ದಾರೆ.
ಬಳಿಕ ಮಾಧ್ಯಮದವರ ಜತೆ ಮಾತನಾಡಿ, ಎನ್‌ಡಿಎ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಘೋಷಿಸಿದರು.
ಇದರೊಂದಿಗೆ, ಬಿಜೆಪಿ ಜತೆಗಿನ ಮೈತ್ರಿ ಕೊನೆಗೊಳಿಸಿರುವ ಬಗ್ಗೆ ಜೆಡಿ(ಯು) ಅಧಿಕೃತವಾಗಿ ಘೋಷಣೆ ಮಾಡಿದಂತಾಗಿದೆ. ಎಲ್ಲ ಸಂಸದರು, ಶಾಸಕರು ಒಮ್ಮತಕ್ಕೆ ಬಂದ ಬಳಿಕವೇ ಎನ್‌ಡಿಎ ಮೈತ್ರಿಕೂಟ ತೊರೆಯುವ ನಿರ್ಧಾರಕ್ಕೆ ಬರಲಾಗಿದೆ. ಇದಾದ ಬಳಿಕವೇ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದೆ ಎಂದು ನಿತೀಶ್ ಕುಮಾರ್ ಹೇಳಿದರು.
ಬಳಿಕ ಅವರು ಪಟ್ನಾದಲ್ಲಿರುವ ರಾಬ್ರಿ ದೇವಿ (ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ ಯಾದವ್ ಅವರ ಪತ್ನಿ) ಅವರ ನಿವಾಸಕ್ಕೆ ತೆರಳಿದರು.














