ಮನೆ ರಾಜಕೀಯ 1.64 ಕೋಟಿ ಮೌಲ್ಯದ ತಮ್ಮ ಆಸ್ತಿಯನ್ನು ಸಾರ್ವಜನಿಕಗೊಳಿಸಿದ ಬಿಹಾರದ ಸಿಎಂ ನಿತೀಶ್ ಕುಮಾರ್

1.64 ಕೋಟಿ ಮೌಲ್ಯದ ತಮ್ಮ ಆಸ್ತಿಯನ್ನು ಸಾರ್ವಜನಿಕಗೊಳಿಸಿದ ಬಿಹಾರದ ಸಿಎಂ ನಿತೀಶ್ ಕುಮಾರ್

0

ಪಾಟ್ನಾ: ಇತ್ತೀಚಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಆಸ್ತಿಯನ್ನು ಸಾರ್ವಜನಿಕಗೊಳಿಸಿದ್ದು, 1.64 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಭಾನುವಾರ ಸಂಜೆ ಸಂಪುಟ ಸಚಿವಾಲಯದ ವೆಬ್‌ಸೈಟ್‌ನಲ್ಲಿ ದಾಖಲಿಸಲಾದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ನಿತೀಶ್ ಕುಮಾರ್ ಅವರ ಬಳಿ 22,552 ರೂ. ನಗದು ಮತ್ತು ವಿವಿಧ ಬ್ಯಾಂಕ್ ಖಾತೆಗಳಲ್ಲಿ 49,202 ರೂ. ಠೇವಣಿ ಹೊಂದಿದ್ದಾರೆ.

ಇದರೊಂದಿಗೆ ಅವರ ಬಳಿ 11.32 ಲಕ್ಷ ರೂ. ಮೌಲ್ಯದ ಫೋರ್ಡ್ ಇಕೋಸ್ಪೋರ್ಟ್ ಕಾರು, 1.28 ಲಕ್ಷ ರೂ. ಮೌಲ್ಯದ ಎರಡು ಚಿನ್ನದ ಉಂಗುರ ಮತ್ತು ಬೆಳ್ಳಿಯ ಉಂಗುರ ಹಾಗೂ 1.45 ಲಕ್ಷ ರೂ. ಮೌಲ್ಯದ 13 ಹಸುಗಳು ಮತ್ತು 10 ಕರುಗಳು, ಟ್ರೆಡ್‌ಮಿಲ್, ವ್ಯಾಯಾಮ ಸೈಕಲ್ ಮತ್ತು ಮೈಕ್ರೋವೇವ್ ಓವನ್ ಸೇರಿದಂತೆ ಇತರ ಚರಾಸ್ತಿಗಳನ್ನು ಹೊಂದಿದ್ದಾರೆ.

ದೆಹಲಿಯ ದ್ವಾರಕಾದಲ್ಲಿರುವ ಅಪಾರ್ಟ್‌ಮೆಂಟ್‌ ಮೌಲ್ಯ 2004ರಲ್ಲಿ 13.78 ಲಕ್ಷ ರೂ. ಇತ್ತು, ಈಗ 1.48 ಕೋಟಿ ರೂ.ಗೆ ಬೆಲೆಬಾಳುತ್ತದೆ. ಕಳೆದ ವರ್ಷ ನಿತೀಶ್ ಕುಮಾರ್ ಅವರು ತಮ್ಮ ಒಟ್ಟು ಆಸ್ತಿ 75.53 ಲಕ್ಷ ರೂ. ಎಂದು ಘೋಷಿಸಿದ್ದರು.

ಕಳೆದ ಬಾರಿಗಿಂತ ಈ ಬಾರಿ ಆಸ್ತಿ ಮೌಲ್ಯದಲ್ಲಿನ ಜಿಗಿತವು ಅವರು ದೆಹಲಿಯಲ್ಲಿನ ಅಪಾರ್ಟ್‌ಮೆಂಟ್ ಮೌಲ್ಯದ ಏರಿಕೆಯಿಂದಾಗಿ ಎಂದು ತಿಳಿದುಬಂದಿದೆ.

ನಿತೀಶ್ ಕುಮಾರ್ ಅವರ ಸರ್ಕಾರವು ಪ್ರತಿ ವರ್ಷದ ಕೊನೆಯ ದಿನದಂದು ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ತಮ್ಮ ಆಸ್ತಿ ಘೋಷಿಸುವುದನ್ನು ಕಡ್ಡಾಯಗೊಳಿಸಿದೆ.

ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಅವರು 2022-23ನೇ ಹಣಕಾಸು ವರ್ಷದಲ್ಲಿ ಒಟ್ಟು 4.74 ಲಕ್ಷ ರೂ. ಮೌಲ್ಯದ ಆದಾಯವನ್ನು ಹೊಂದಿದ್ದಾರೆ. ರಾಜ್ಯ ಸರ್ಕಾರದಲ್ಲಿ ಸಚಿವರೂ ಆಗಿರುವ ಅವರ ಹಿರಿಯ ಸಹೋದರ ತೇಜ್ ಪ್ರತಾಪ್ ಅವರ ಆಸ್ತಿ 3.58 ಕೋಟಿ ರೂ. ಎಂದು ಘೋಷಿಸಲಾಗಿದೆ.