ರಾಮನಗರ: ಅಪಘಾತ ತಡೆಗಟ್ಟುವ ಸಲುವಾಗಿ ಆಗಸ್ಟ್ ಒಂದರಿಂದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಬೈಕ್, ಆಟೋ, ಟ್ರಾಕ್ಟರ್ ಸಂಚಾರಕ್ಕೆ ನಿಷೇಧಿಸಲಾಗಿದ್ದು, ಈ ಬಗ್ಗೆ ಪ್ರಾಧಿಕಾರ ತಯಾರಿ ನಡೆಸುತ್ತಿದೆ.
ಹೆದ್ದಾರಿ ಮೇಲೆ ಅಪಘಾತ ನಿಗ್ರಹಕ್ಕೆ ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಇಲಾಖೆ ಹೊಸ ನಿಯಮ ತಂದಿದ್ದು, ಹೆದ್ದಾರಿ ಮೇಲೆ ಸಂಚಾರಕ್ಕೆ ಅರ್ಹ ಅಲ್ಲದ ವಾಹನಗಳಿಗೆ ನಿರ್ಬಂಧ ಮಾಡಿದೆ. ಹೀಗಾಗಿ ಟೋಲ್ ಕಟ್ಟಿಯೂ ಹೆದ್ದಾರಿ ಬಳಸುವಂತಿಲ್ಲ.
ಆಗಸ್ಟ್ 1 ರಿಂದ ಕ್ರಮ ಜಾರಿ ಬರಲಿದ್ದು, ನಿಯಮ ಮೀರಿ ಹೆದ್ದಾರಿ ಬಳಸಿದರೆ 500 ರೂ ದಂಡ ಕಟ್ಟಬೇಕಾಗುತ್ತದೆ. ಹೆದ್ದಾರಿಯ ಆರಂಭ ಮತ್ತು ಅಂತ್ಯ ಭಾಗದಲ್ಲಿ ಪೊಲೀಸರು ತಪಾಸಣೆ ಮಾಡಲಿದ್ದು, ಒಟ್ಟು 9 ಕಡೆಗಳಲ್ಲಿ ಪೊಲೀಸರಿಂದ ಚೆಕಿಂಗ್ ನಡೆಯಲಿದೆ.