ಸೂಚನೆ : ೨೭ ನಕ್ಷತ್ರಗಳಿಗೆ ೨೭ ಆರಾಧ್ಯ ವೃಕ್ಷಗಳಿವೆ. ಆಯಾ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಆರಾಧ್ಯ ವೃಕ್ಷದ ಸಸಿಯನ್ನು ಹಚ್ಚಿ, ನೀರು ಹಾಕಿ ಬೆಳೆಸಬೇಕು. ಈ ನಕ್ಷತ್ರದವರು ತಮ್ಮ ಆರಾಧ್ಯ ವೃಕ್ಷವನ್ನು ಯಾವ ಕಾಲಕ್ಕೂ ಕಡಿಯಬಾರದು. ಪೂಜಿಸಬೇಕು. ಅಂದರೆ, ಸರ್ವ ವಿಧದಿಂದಲೂ ಸುಖವಾಗುವದು. ದೋಷಗಳು ನಿವಾರಣೆಯಾಗುವವು. ವಂಶವೃದ್ಧಿಯಾಗುವದೆಂದು ತಿಳಿಯಿರಿ.
ಕಾರ್ಯದಲ್ಲಿ ತತ್ವರಾಗಿ ದುಡಿಯುವನು ಬುದ್ಧಿವಂತನು ಸುಖಭೋಗಿಯು ಆಗಿರುವನು. ಆದರೆ, ಈ ಚರಣದಲ್ಲಿ ಮೊದಲ 8 ಗಳಿಗೆಯೊಳಗಾಗಿ ಶಿಶು ಜನಿಸಿ ಮಾತ್ರ ತಾಯಿಗೆ ಮಾತ್ರ ತಾಯಿಗೆ ಪೀಡಾಕರಕವು. ಕಾರಣ ಈ ದೋಷ ನಿವಾರಣಾರ್ಥವಾಗಿ ಹಳದಿ ವಸ್ತ್ರವನ್ನೂ, ಹಿತ್ತಾಳೆಯ ಪಾತ್ರೆಗಳನ್ನೂ ಪೂಜ್ಯರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯ ಬೇಕು.
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹುಟ್ಟಿದ ೧೫ ದಿನದೊಳಗಾಗಿ ಅಪಮೃತ್ಯು ಭಯವಿದೆ. ೩ ನೇ ತಿಂಗಳಲ್ಲಿ ಜ್ವರಭಯ, ೧ ಅಥವಾ ೨ ನೇ ವರ್ಷದಲ್ಲಿ ಮಹಾ ವ್ಯಾಧಿಯು ೧೫ ಸೇ ವರ್ಷದಲ್ಲಿ ಚೋರ ಭಯ ಇಲ್ಲವೆ ಅಗ್ನಿಭಯ ಅಥವಾ ಶತ್ಯುಭಯವಿದೆ. ೧೮ ನೇ ವರ್ಷದಲ್ಲಿ ವೈರಿಗಳಿಂದ ಪ್ರಾಣಭಯ. ೨೧ ನೇ ವರ್ಷದಲ್ಲಿ ಅಪಮೃತ್ಯು ಭಯ. ೩೦ ಹಾಗೂ ೪೦ ನೇ ವರ್ಷದಲ್ಲಿ ರೋಗಭಯ ಈ ಎಲ್ಲ ಕಂಟಕಾದಿಗಳನ್ನು ಜಯಿಸಿ ದಾಟಿದರೆ ಈ ಜಾತಕನಿಗೆ ರವಿ ವರ್ಷ ಆಯುಷ್ಯವು,
ವಿಶೇಷ : ಈ ನಕ್ಷತ್ರವು ಶ್ವಾನಯೋನಿ, ಮನುಷ್ಯಗಣ, ಅದಿನಾಡಿ, ದಾರುಣ ಸಂಜ್ಞೆ, ಮಧ್ಯಲೋಚನವುಳ್ಳದ್ದು ಈ ನಕ್ಷತ್ರದ ಆರಾಧ್ಯವೃಕ್ಷ ಕೆಂಪು ಚಂದನೆ ಗಿಡ.
೬. ಪುನರ್ವಸು ನಕ್ಷತ್ರದಲ್ಲಿ ಜನಿಸಿದವನು ವಿಶೇಷ ಸ್ನೇಹಿತರುಳ್ಳವನು. ಶಾಸ್ತ್ರ ಪುರಾಣಾದಿಗಳಲ್ಲಿ ಆಸಕ್ತಿಯುಳ್ಳವನು. ಶ್ರೇಷ್ಠ ಜಾತಿಯ ರತ್ನ ಖಚಿತ ಬಂಗಾರದ ಆಭರಣಗಳನ್ನು ವಿಶೇಷವಾಗಿ ಧರಿಸಲು ಇಚ್ಛೆಪಡತಕ್ಕವನು. ದಾನಶೂರನೂ, ಉತ್ತಮ ಜಮೀನುಗಳನ್ನು ಹೊಂದಿದವನೂ, ಕೀರ್ತಿಶಾಲಿ ಧನವಂತನೂ, ಆಗುತ್ತಾನೆ.
ಚರಣ ಫಲ : ಈ ನಕ್ಷತ್ರದ ೧ ನೇ ಚರಣದಲ್ಲಿ ಹುಟ್ಟಿದವನು ಉಗ್ರ ಸ್ವಭಾವ ದೃಷ್ಟಿಯುಳ್ಳವನು, ಚಂಚಲ ಮನಸ್ಸಿನವನಾಗಿದ್ದು, ರೋಗ ಪೀಡಿತನೂ, ಕಳ್ಳಗುಣ ಸ್ವಭಾವದವನೂ, ಮೋಸಗಾರನೂ, ಸುಳ್ಳು ನುಡಿಯುವವನೂ ಆಗುತ್ತಾನೆ. ೨ ನೇ ಚರಣದಲ್ಲಿ ಜನಿಸಿದವನು ಯಾವಾಗಲೂ ಪರೋಪಕಾರದ ಕೆಲಸಗಳನ್ನು ಮಾಡುವದರಲ್ಲಿ ಆಸಕ್ತನೂ, ಗುರುಹಿರಿಯರಲ್ಲಿ ದೇವರಲ್ಲಿ ಭಯ ಭಕ್ತಿಯುಳ್ಳವನೂ, ಕೀರ್ತಿವಂತನೂ, ಬುದ್ಧಿವಿಕಾಸವುಳ್ಳವನೂ, ಬಂಧು ಬಾಂಧವರಲ್ಲಿ ಸ್ನೇಹವನ್ನು ಹೊಂದಿರತಕ್ಕವನೂ, ಧರ್ಮ ಗುಣದವನೂ ಆಗುತ್ತಾನೆ. ೩ ನೇ ಚರಣದಲ್ಲಿ ಜನಿಸಿದವನು ವಂಚಕ ಬುದ್ದಿಯುಳ್ಳವನೂ, ಕೃಪಣ ಸ್ವಭಾವದವನೂ, ಮಂದಬುದ್ದಿಯುಳ್ಳವನೂ ಆಗಿರುತ್ತಾನೆ. ಆದರೆ ಧೈರ್ಯವಂತನು. ತನ್ನ ಉದ್ಯೋಗದಲ್ಲಿ ಕೀರ್ತಿಯನ್ನು ಗಳಿಸುವನು. ೪ ನೇ ಚರಣದಲ್ಲಿ ಜನಿಸಿದವನು ವಿದ್ವಾಂಸನೂ ಗುಣಾಡ್ಯನೂ, ಕೀರ್ತಿವಂತನೂ, ಧನಶಾಲಿಯೂ, ಸರ್ವಸುಖಭೋಗಿಯೂ, ಒಳ್ಳೇ ದಾನಶೂರನೂ ದಯಾಶೀಲನೂ, ಸದ್ಗುಣವಂತನೂ ಆಗುತ್ತಾನೆ.
ಕಂಟಕಾದಿಗಳು : ಜನಿಸಿದ ೧ ನೇ ವರ್ಷದಲ್ಲಿ ಉದರ ಶೂಲೆ ಅಥವಾ ಜ್ವರದ ಭಯವು. ೨-೩ ನೇ ವರ್ಷದಲ್ಲಿ ವಿಷಮಜ್ವರ ಇಲ್ಲವೆ ಶೀತ ವಾತಾದಿ ರೋಗ ಭಯ ಇಲ್ಲವೆ ವಿರೋಧಿಗಳಿಂದ ವಿಷಾದಿಪ್ರಯೋಗದ ಭಯವುಂಟು. ೫ ನೇ ವರ್ಷದಲ್ಲಿ ಎಡವಿ ಬೀಳುವದರಿಂದ ಇಲ್ಲವೆ ಎತ್ತರದ ಮೇಲಿನಿಂದ ಜಾರಿ ಬೀಳುವ ಪ್ರಾಣ ಭಯವು ಇದೆ.1೨ ನೇ ವರ್ಷದಲ್ಲಿ ನೀರಿನ ಕಂಟಕವಿದೆ. ಇಲ್ಲವೆ ಪರುವಾಹನದ ನೀತಿಯು ೧೬ ನೇ ವರ್ಷದಲ್ಲಿ ಅಪಮೃತ್ಯು ಭಯವು. ೨೦ ನೇ ವರ್ಷದಲ್ಲಿ ಕಳ್ಳರಿಂದ ಪ್ರಾಣಕ್ಕೆ ಭಯವು. ಇಲ್ಲವೆ ದುಷ್ಟ್ರರೊಡನೆ ದೇಶಾಂತರ ತಿರುಗುವ ಭಯ ೩೨ ನೇ ವರ್ಷದಲ್ಲಿ ನೀರಿನ ಗಂಡಾಂತರವು. 35 ನೇ ವರ್ಷದಲ್ಲಿ ದೊಡ್ಡ ವ್ಯಾಧಿಯು ೪೮ ನೇ ವರ್ಷದಲ್ಲಿ ತನ್ನವರಿಂದಲೇ ಸಂಕಟ ಸಮಾನ ಭಯವು ೫೨ ನೇ ವರ್ಷದಲ್ಲಿ ಹೆಂಡತಿ ಮಕ್ಕಳ ದಸೆಯಿಂದ ಹೆಚ್ಚಿನ ಹಾನಿಯು ಈ ಜಾತಕನಿಗೆ ತನ್ನ ೬೧ ಮತ್ತು ೮೦ ನೇ ವರ್ಷದಲ್ಲಿ ದೊಡ್ಡ ಗಂಡಾಂತರವೊಂದಿದೆ. ಇದರಿಂದ ಪಾರಾದರೆ ಈತನಿಗೆ ೯೬ ವರ್ಷವು
ವಿಶೇಷ : ಈ ನಕ್ಷತ್ರವು ಬೆಕ್ಕು ಯೋನಿಯು, ದೇವಗಣ ಆದಿನಾಡಿ, ಚರ ಸಂಜ್ಞೆ, ಸುಲೋಚನವುಳ್ಳದ್ದು: ಇದರ ಆರಾಧ್ಯವೃಕ್ಷ ಬಿದಿರು ಮೆಳೆ.
೮. ಪುಷ್ಯ ನಕ್ಷತ್ರದಲ್ಲಿ ಜನಿಸಿದವನು ಸುಂದರ ದೇಹವುಳ್ಳವನು, ದೃಢಕಾಯನು ಸ್ವಧರ್ಮದಲ್ಲಿ ನಂಬಿಕೆ ಅಭಿಮಾನವುಳ್ಳವನು. ತನ್ನ ತಂದೆ ತಾಯಿಗಳನ್ನು ಅದರ ಭಕ್ತಿಯಿಂದ ಜೋಪಾನ ಮಾಡುವನು. ಶ್ರೀಮಂತನೂ, ಬೆಲೆಯುಳ್ಳ ವಸ್ತು ವಾಹನಾದಿಗಳನ್ನು ಹೊಂದಿದವನೂ, ಆದರಣೀಯನೂ ಆಗುತ್ತಾನೆ.
ಚರಣ ಫಲ : ೧ ನೇ ಚರಣದಲ್ಲಿ ಜನಿಸಿದ ಈ ಶಿಶುವಿನ ಸೋದರ ಮಾವನಿಗೆ ಮಾತ್ರ ಅರಿಷ್ಟವು ಕಾರಣ, ಈ ದೋಷ ನಿವಾರಣಾರ್ಥವಾಗಿ ಶ್ರೀಗಂಧದ ಕಟ್ಟಿಗೆಯನ್ನು ಪೂಜ್ಯರಿಗೆ ದಾನ ಕೊಡಬೇಕು. ಈ ಚರಣದಲ್ಲಿ ಜನಿಸಿದವನು ಕ್ರೂರ ಮನಸ್ಸಿನವನೂ, ರೋಗಿಯೂ, ದುಃಖಿತನೂ, ಪರಸ್ಥಳಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತ ಕಾಲ ಕಳೆಯುವವನೂ ಆಗುತ್ತಾನೆ. ೨ ನೇ ಚರಣದಲ್ಲಿ ಶಿಶುವು ಹಗಲಿನಲ್ಲಿ ಜನಿಸಿದರೆ ತಂದೆಗೆ ಅರಿಷ್ಟವು ರಾತ್ರಿಯಲ್ಲಿ ಜನಿಸಿದರೆ ಶಿಶುವಿನ ತಾಯಿಗೆ ಅರಿಷ್ಟವು ೨ ನೇ ಚರಣದ ಮಧ್ಯಕಾಲದಲ್ಲಿ ಜನಿಸಿದರೆ ತಂದೆ- ತಾಯಿಗಳಿಬ್ಬರಿಗೂ ಅರಿಷ್ಟವು ಕಾರಣ. ಈ ದೋಷ ನಿವಾರಣಾರ್ಥವಾಗಿ ಶಿಶುವಿನ ತಂದೆಯು ೩ ತಿಂಗಳುಗಳವರೆಗೆ ಶಿಶುವಿನ ಮುಖ ನೋಡಬಾರದು. ೩ ತಿಂಗಳುಗಳ ನಂತರ ಕರು ಸಹಿತವಾಗಿರುವ ಹಾಲು ಹಿಂಡುವ ಒಳ್ಳೆ ಆಕಳನ್ನು ಪೂಜ್ಯರಿಗೆ ದಾನಕೊಟ್ಟು ನಂತರ ಮುಖ ನೋಡಬಹುದು. ಈ ಚರಣದಲ್ಲಿ ಜನಿಸಿದಾತನು ಜ್ಞಾನಿಯೂ, ಇಂದ್ರಿಯ ನಿಗ್ರಹವುಳ್ಳವನೂ, ಸಮಾಧಾನ ಚಿತ್ತವುಳ್ಳವನೂ ಆಗುವನೆಂದಿದೆ. ಆದರೆ ಕೆಲವು ಗ್ರಂಥಗಳಲ್ಲಿ ಈ ೨ ನೇ ಚರಣದಲ್ಲಿ ಜನಿಸಿದವನು ಪುರುಷತ್ವಹೀನನೂ, ಪರ ದ್ರವ್ಯಕ್ಕೆ ಆಶೆ ಮಾಡುವವನೂ, ದುಃಖಿಯೂ, ಕಷ್ಟ ಜೀವಿಯೂ, ಅಪಕಾರಿಯೂ ಆಗುವನು ಎಂದಿದೆ. ೩ ನೇ ಚರಣದಲ್ಲಿ ಜನಿಸಿದವನು ಶೂರನೂ, ಧೀರನೂ, ಪ್ರಸನ್ನ ಚಿತ್ರನೂ, ಒಳ್ಳೇ ಮಾತುಗಾರನೂ, ಪುಣ್ಯಶಾಲಿಯೂ, ಸುಖ ಭೋಗಭಾಗ್ಯಶಾಲಿಯೂ ಆಗುತ್ತಾನೆ. ೪ ನೇ ಚರಣದಲ್ಲಿ ಜನಿಸಿದಾತನು ದರಿದ್ರನೂ, ಕಪಟಿಯೂ, ಕಳ್ಳನೂ ಜನವಿರೋಧಿಯೂ ಉಪಕಾರಗೇಡಿಯೂ ಆಗುವನು. ಈತನು ಮಕ್ಕಳೊಂದಿಗನು
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದವನಿಗೆ ಜನಿಸಿದ ೮ ನೇ ತಿಂಗಳಲ್ಲಿ ಜ್ವರ ಅಥವಾ ಬಾಲಗ್ರಹದ ಸಂಬಂಧಿ ರೋಗವು ೩ ನೇ ವರ್ಷದಲ್ಲಿ ಅಪಮೃತ್ಯು ಭಯ ೫ ಮತ್ತು೧೨ ನೇ ವರ್ಷದಲ್ಲಿ ನೀರಿನ ಗಂಡಾಂತರವು ೧೭ ನೇ ವರ್ಷದಲ್ಲಿ ಕಳ್ಳರ ಇಲ್ಲವೇ ದ್ವೇಷವುಳ್ಳ ಜನರಿಂದ ಶಸ್ತ್ರ ಭಯವು ೨೦ ನೇ ವರ್ಷದಲ್ಲಿ ಒಡಹುಟ್ಟಿದವರಿಂದಾಗಲಿ ಅಪ್ತೇಷ್ಟ ರಿಂದಾಗಲಿ ವಿಪತ್ತು ಒದಗುವದು. ೩೭ ನೇ ವರ್ಷದಲ್ಲಿ ಅಗ್ನಿ ಅಥವಾ ಆಯುಧ ಭಯವು ೬೪ ರಲ್ಲಿ ಅಪಮೃತ್ಯು ಯೋಗವು ಈ ಎಲ್ಲ ಕಂಟಕಗಳನ್ನು ಕಳೆದರೆ ಈ ಜಾತಕನಿಗೆ ೯೦ ವರ್ಷ ಆಯುಷ್ಯವು.
ವಿಶೇಷ : ಈ ನಕ್ಷತ್ರವು ಮೇಷಯೋನಿ, ದೇವಗಣ, ಮಧ್ಯನಾಡಿ, ಕ್ಷಿಪ್ರ ಸಂಜ್ಞೆ, ಅಂಧಲೋಚನವುಳ್ಳದ್ದು, ಈ ನಕ್ಷತ್ರದ ಆರಾಧ್ಯ ವೃಕ್ಷ ಅರಳೀಮರ,














