೨೫. ಪೂರ್ವಾಭಾದ್ರಪದ : ಈ ನಕ್ಷತ್ರದಲ್ಲಿ ಜನಿಸಿದವನು ಸಮಸ್ತ ಕಲೆಗಳನ್ನು ಬಲ್ಲವನೂ, ಚತುರನೂ, ವಿರೋಧಿಗಳ ಉಪಟಳಗಳನ್ನು ಇಲ್ಲದಾಗಿಸುವವನೂ, ಇಂದ್ರಿಯ ನಿಗ್ರಹವುಳ್ಳ ಸದಾಚಾರ ಸಂಪನ್ನನೂ, ಗುಣವಂತನೂ ಸಮಸ್ತ ಸುಖೋಪಭೋಗಗಳನ್ನು ಅನುಭವಿಸುವ ಸುದೈವಿಯೂ ಆಗುವನು.
ಚರಣ ಫಲ : ಈ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ಮಹಾಕಲಹ ಪ್ರೀಯನೂ, ಜಿಪುಣಾಗ್ರೇಸರನೂ, ಬಂಧು ಬಾಂಧವರ ವೈರತ್ವವನ್ನು ಕಟ್ಟಿಕೊಳ್ಳುವವನೂ, ಸೇಡಿನ ಬುದ್ದಿಯುಳ್ಳವನೂ, ಹಠವಾದಿಯೂ, ಪರರ ದ್ರವ್ಯವನ್ನು ಅಪಹರಿಸುವವನೂ, ಆಗಿದ್ದರೂ, ಬಹು ಪರಿಶ್ರಮಿ- ಸತತೋದ್ಯೋಗಿಯಾಗಿರುವನು. ೨ ನೇ ಚರಣದಲ್ಲಿ ಜನಿಸಿದವನು ಅತಿ ಸಾಹಸಿಯೂ, ಸುಖಭೋಗವನ್ನು ಅನುಭವಿಸುವವನೂ, ವಿದ್ಯಾಬುದ್ಧಿ ಗಳನ್ನು ಉಪಯೋಗಿಸಿ ಬಾಳುವೆ ನಡೆಸುವವನೂ ಆಗುತ್ತಾನೆ. ೩ ನೇ ಚರಣದಲ್ಲಿ ಜನಿಸಿದವನು ಶ್ರೀಮಂತ ಸುಖಭೋಗಿಯೂ, ಶಾಸ್ತ್ರ ಪುರಾಣ-ಪುಣ್ಯ ಕಥೆಗಳನ್ನು ಆಲಿಸುವವನೂ ಅದರಂತೆ ನಡೆ ನುಡಿಯುಳ್ಳವನೂ, ತೀಕ್ಷ್ಯ ಬುದ್ಧಿಯುಳ್ಳವನೂ, ಕಾರ್ಯದಲ್ಲಿ ದಕ್ಷತೆಯುಳ್ಳವನೂ, ಜನಪ್ರೀಯನೂ ಆಗುತ್ತಾನೆ. ೪ ನೇ ಚರಣದಲ್ಲಿ ಜನಿಸಿದವನು ಗಾಯನ ವಿದ್ಯೆಯಲ್ಲಿ ಬಲ್ಲಿದನೂ, ಸಂಗೀತ ಪ್ರೇಮಿಯೂ, ಸ್ತ್ರೀಯರೊಡನೆ ಪ್ರೇಮ ಸಂಬಂಧವುಳ್ಳವನೂ, ವಿಶೇಷ ವಸ್ತ್ರಾಭರಣಗಳನ್ನು ಧರಿಸುವವನೂ, ಜನಾನುರಾಗಿಯೂ ಆಗುತ್ತಾನೆ.
ಕಂಟಕಾದಿಗಳು : ಜನಿಸಿದ ೧ ತಿಂಗಳು ಇಲ್ಲವೆ ವರ್ಷದೊಳಗಾಗಿ ಈ ಜಾತಕನು ಶೀತ ಜ್ವರದಿಂದ ಬಳಲುವನು. ೨-೪-೬ ನೇ ವರ್ಷದಲ್ಲಿ ಅನೇಕ ರೀತಿಯಲ್ಲಿ ರೋಗೋಕು ದ್ರವ ಕಣ್ಣುಬೇನೆ, ಉದರಶೂಲೆ, ವೃಣಬಾಧೆ ಇತ್ಯಾದಿಗಳಿಂದ ಭಯಂಕರ ಪೀಡೆಯು. ೮ನೇ ವಯಸ್ಸಿನಲ್ಲಿ ಎತ್ತರದ ಮೇಲಿಂದ ಬಿದ್ದು ಪೆಟ್ಟು ತಗಲಿ ಬಹಳ ದಿನಗಳ ವರೆಗೆ ಹಾಸಿಗೆ ಹಿಡಿಯುವಿಕೆ. ೧೨ ನೇ ವರ್ಷದಲ್ಲಿ ಸನ್ನಿಪಾತದಂತಹ ರೋಗ ವಿಕಾರವು ೧೬ ನೇ ವರ್ಷದಲ್ಲಿ ನೀರಿನ ಗಂಡಾಂತರ ಭಯವು. ೨೦ ನೇ ವರ್ಷದಲ್ಲಿ ವಿಷಮಜ್ವರ ಬಾಧೆಯು ಇಲ್ಲವೆ ವಿರೋಧಿಗಳ ಉಪಟಳದಿಂದಾಗುವ ಮಾನಸಿಕ ವಿಕಾರಭಯವು ಇಲ್ಲವೆ ವಿಷಜಂತುಗಳ ಭಯವು ೨೪ ನೇ ವರ್ಷದಲ್ಲಿ ಮೇಲ್ಮಾಳಿಗೆಯ ಮೇಲಿಂದ ಬಿದ್ದು ಪ್ರಾಣಾಂತಿಕ ಅಪಾಯ ಸನ್ನಿಪಾತದಂತಹ ದುಷ್ಟರೋಗದ ಭಯವು. ೬o ನೇ ವರ್ಷದಲ್ಲಿ ಸರಕಾರದ ಆಡಳಿತದ ತೊಂದರೆ. ೬೭ ನೇ ವರ್ಷದಲ್ಲಿ ಉಬ್ಬುಸ ರೋಗಭಯವು ೬8 ನೇ ವರ್ಷದಲ್ಲಿ ಮರಣ ಸಮಾನವಾದ ದಮ್ಮು-ಕೆಮ್ಮು ಮೊದಲಾದ ವ್ಯಾಧಿಗಳಿಂದ ತೊಂದರೆಯಾಗುವದು. ಈ ಎಲ್ಲ ಕಂಟಕಗಳನ್ನು ಕಳೆದರೆ ಈ ಜಾತಕನಿಗೆ ೯೦ ವರ್ಷ ಆಯುಷ್ಯವು. ಭಯವು. ೩೬ ನೇ ವರ್ಷದಲ್ಲಿ ವಿರೋಧಿಗಳಿಂದ ಉಪಟಳವು.
ವಿಶೇಷ : ಈ ನಕ್ಷತ್ರವು ಸಿಂಹಯೋನಿ, ಮನುಷ್ಯಗಣ, ಅದಿನಾಡಿ, ಉಗ್ರ ಸಂಜ್ಞೆ,
ಮಧ್ಯಲೋಚನವುಳ್ಳದು. ಈ ನಕ್ಷತ್ರದ ಆರಾಧ್ಯ ವೃಕ್ಷ ಮಾವಿನ ಮರ.
೨೬. ಉತ್ತರಾಭಾದ್ರ : ಈ ನಕ್ಷತ್ರದಲ್ಲಿ ಜನಿಸಿದವನು ತನ್ನ ವಂಶಕ್ಕೇ ಕೀರ್ತಿತರುವವನೂ, ಸಾಧಾರಣವಾಗಿ ಎತ್ತರ ¡, ಶಾಂತ ಮನಸ್ಸಿನವನೂ, ಯಾವಾಗಲೂ ಉತ್ತಮ ಕಾರ್ಯ ಮಾಡುವವನೂ, ಮಾನ್ಯತೆಯನ್ನು ಪಡೆಯುವವನೂ ಆಗುತ್ತಾನೆ.
ಚರಣ ಫಲವು : ಈ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ಚಂಚಲ
ಮನಸ್ಸಿನವನಾಗಿದ್ದು, ಶೀಘ್ರ ಕೋಪವುಳ್ಳವನು, ಹೆಚ್ಚು ಭೋಜನ ಪ್ರಿಯನೂ, ತನ್ನ ವಂಶಕ್ಕೆಯೇ ಅಪಕೀರ್ತಿಯನ್ನು ತರುವವನೂ, ತೀಕ್ಷ್ಯ ಗುಣದವನೂ ಆಗಿದ್ದು ಸದಾ ದೇಶಾಂತರ ಮಾಡುತ್ತ ಉಪಜೀವನ ನಡೆಸುವನು. ಅಲ್ಲದೆ ಹೆಚ್ಚು ಕಾಮುಕನು. ೨ ನೇ ಚರಣದಲ್ಲಿ ಜನಿಸಿದವನು ವಿದ್ವಾಂಸನೂ, ವಿಶೇಷ ತಿಳುವಳಿಕೆಯುಳ್ಳವನೂ, ಸಮಾಧಾನ ಮನಸ್ಸಿನವನೂ, ಹಿಂದು ಮುಂದಿನದನ್ನು ತಿಳಿದು ವ್ಯವಹರಿಸುವವನೂ, ಸದ್ಗುಣ ಶ್ರೇಷ್ಠನೂ ಆಗುತ್ತಾನೆ. ೩ ನೇ ಚರಣದಲ್ಲಿ ಜನಿಸಿದವನು ಪರೋಪಕಾರಿ ಬುದ್ದಿಯುಳ್ಳವನೂ, ಸತ್ಯವಂತನೂ, ನೀತಿವಂತನೂ, ಸುಖ ಸಂತೋಷಗಳಿಂದ ಕಾಲ ಕಳೆಯುವವನೂ, ದಾನಿಯೂ, ಶೂರ- ಧೈರ್ಯವಂತನೂ, ಅನೇಕ ಶಾಸ್ತ್ರಗಳಲ್ಲಿ ನೈಪುಣ್ಯತೆಯನ್ನು ಹೊಂದಿದವನೂ ಆಗುತ್ತಾನೆ. ೪ ನೇ ಚರಣದಲ್ಲಿ ಜನಿಸಿದವನು ಪರರ ದ್ರವ್ಯವನ್ನು ಅಪಹರಿಸುವವನೂ, ನಿಷ್ಟುರವಾದಿಯಾಗಿದ್ದು ಪರರ ಕಾರ್ಯದಲ್ಲಿ ಕಂಟಕ ಪ್ರಾಯನಾಗುವನು. ಹೆಚ್ಚಾಗಿ ಪಾಪ ಬುದ್ದಿಯ ಕಾರ್ಯವನ್ನು ಮಾಡುವವನು. ಅದರಿಂದಾಗಿ ಜನರ ವಿರೋಧವನ್ನು ಎದುರಿಸಬೇಕಾಗುವದು. ಶೀಘ್ರಕೋಪಿಯೂ, ಜಗಳಗಂಟನೂ, ಮೂರ್ಖನು ಆಗುವನು.
ಕಂಟಕಾದಿಗಳು : ಈ ನಕ್ಷತ್ರದಲ್ಲಿ ಜನಿಸಿದವನಿಗೆ ಜನಿಸಿದ ೨ ನೇ ತಿಂಗಳು ಇಲ್ಲವೆ ೨
ನೇ ವರ್ಷದೊಳಗಾಗಿ ಶೀತ ಅಥವಾ ವಾತ ವಿಕಾರಗಳಿಂದ ಪ್ರಾಣಕ್ಕೆ ಭಯದ ಸೂಚನೆ ಕಾಣುವದಿದೆ. ೩ ಅಥವಾ ೫ ನೇ ವರ್ಷದಲ್ಲಿ ಜ್ವರದ ಉಪದ್ರವದಿಂದ ಬಳಲುವಿಕೆ ಇಲ್ಲವೆ ವೃಘಣಗಳ ಬಾಧೆಯಿಂದ ತೊಂದರೆಯಾಗುವದು. ೬ನೇ ತಿಂಗಳು ಅಥವಾ ೬ನೇ ವರ್ಷದಲ್ಲಿ ಅಪಮೃತ್ಯು ಕಂಟಕವಿದೆ. ೮ ಇಲ್ಲವೆ ೧೧ ನೇ ವರ್ಷದಲ್ಲಿ ವಿಷಮಜ್ವರದಿಂದ ದೇಹಕ್ಕೆ ಅಪಾಯ. ೧೨ ನೇ ವರ್ಷದಲ್ಲಿ ವಿಷ ಜಂತುಗಳಿಂದ ಅಪಾಯವು ೨೨ ನೇ ವರ್ಷದಲ್ಲಿ ಉದರ ರೋಗದ ತೊಂದರೆಯು, ೩೦ ನೇ ವರ್ಷದಲ್ಲಿ ದುಷ್ಟ ಮೃಗಗಳ ಅಥವಾ ದರೋಡೆಖೋರರಿಂದ ತೊಂದರೆ, ೩೬ ನೇ ವರ್ಷದಲ್ಲಿ ಸಾಂಸರ್ಗಿಕ ರೋಗಗಳಿಂದ ಭಯವು. ೪೮ ನೇ ವರ್ಷದಲ್ಲಿ ಕೆಮ್ಮು ದಮ್ಮು ಮುಂತಾದ ಕಫದ ರೋಗಗಳಿಂದ ಬಳಲುವಿಕೆ. 60 ನೇ ವರ್ಷದಲ್ಲಿ ದುಷ್ಟರೋಗಗಳ ಭಯವು ೭೮ ನೇ ವಯಸ್ಸಿನಲ್ಲಿ ಹೃದಯ ವಿಕಾರ ಭಯವು. ಈ ಎಲ್ಲ ಕಂಟಕಗಳನ್ನು ಕಳೆದರೆ ಈ ಜಾತಕನಿಗೆ ೯೦ ವರ್ಷಗಳಷ್ಟು ಆಯುಷ್ಯವು.
ವಿಶೇಷ : ಈ ನಕ್ಷತ್ರವು ಆಕಳು ಯೋನಿ, ಮನುಷ್ಯಗಣ, ಮಧ್ಯನಾಡಿ, ಸ್ಥಿರಸಂಜ್ಞೆ, ಸುಲೋಚನವುಳ್ಳದ್ದು ಈ ನಕ್ಷತ್ರದ ಆರಾಧ್ಯ ವೃಕ್ಷ ಬೇವಿನ ವೃಕ್ತ.
೨೭. ರೇವತಿ ನಕ್ಷತ್ರದಲ್ಲಿ ಜನಿಸಿದವನು ಸುಂದರ ಸದೃಢ ದೇಹವುಳ್ಳವನು, ಒಳ್ಳೇ ಸುಖೋಪಭೋಗವನ್ನು ಅನುಭವಿಸತಕ್ಕ ದೊಡ್ಡ ಶ್ರೀಮಂತನೂ, ಕೀರ್ತಿಯನ್ನು ಹೊಂದುವವನೂ, ಮಹಾಮೇಧಾವಿಯೂ ಆಗುವನು.
ಚರಣ ಫಲವು : ಈ ನಕ್ಷತ್ರದ ೧ ನೇ ಚರಣದಲ್ಲಿ ಜನಿಸಿದವನು ತತ್ವಜ್ಞಾನಿಯೂ,ಕರ್ತವ್ಯನಿಷ್ಠನೂ, ರೀತಿ ನಡತೆಗಳಲ್ಲಿ ಚತುರನಾದವನೂ, ಗುಣಶ್ರೇಷ್ಠನೂ, ಶಾಸ್ತ್ರಗಳನ್ನು ಬಲ್ಲವನೂ ಅದರಂತೆ ನಡೆಯತಕ್ಕವನೂ ಆಗುವನು. ೨ ನೇ ಚರಣದಲ್ಲಿ ಜನಿಸಿದವನು ಮಂದ ಬುದ್ದಿಯುಳ್ಳವನು, ಪಾಪದ ಕೆಲಸಗಳನ್ನು ಮಾಡಿ ಜೀವನ ಸಾಗಿಸುವವನೂ, ‘ಕುಟಿಲ ಬುದ್ಧಿಯುಳ್ಳವನೂ, ಮಹಾ ಅಭಿಮಾನಿಯೂ, ಶೀಘ್ರ ಕೋಪದ ಸ್ವಭಾವದವನೂ ಆಗುತ್ತಾನೆ. ೩ ನೇ ಚರಣದಲ್ಲಿ ಜನಿಸಿದವನು ಜೂಜುಖೋರನೂ, ದುಷ್ಟ ಕಾರ್ಯಗಳನ್ನು ಮಾಡುತ್ತ ಆನಂದಿಸತಕ್ಕವನು, ಉದ್ಧಟ ಸ್ವಭಾವಿಯಾದ ಈತನು ಎಲ್ಲರೊಡನೆ ವಿರೋಧ ಕಟ್ಟಿಕೊಳ್ಳುವವನೂ, ಕ್ರೋಧ ಮನಸ್ಸಿನವನೂ, ಬಂಧು ಬಾಂಧವರೊಡನೆಯೂ ದ್ವೇಷ ಸಾಧಿಸುವವನೂ, ಸದಾ ದುಃಖಿಯೂ ರೋಗಗ್ರಸ್ತನೂ ಆಗುತ್ತಾನೆ. ೪ ನೇ ಚರಣದಲ್ಲಿ ಜನಿಸಿದವನು ಒಳ್ಳೇ ಕಾರ್ಯಗಳಲ್ಲಿ ಆಸಕ್ತನೂ, ವಿದ್ವಾಂಸನೂ, ಏಕ ಪತ್ನಿವೃತಸ್ಥನೂ, ಇಂದ್ರಿಯ ನಿಗ್ರಹವುಳ್ಳವನೂ, ಧೈರ್ಯವಂತನೂ, ಕೈಕೊಂಡ ಕಾರ್ಯದಲ್ಲಿ ಧುರೀಣನಾಗಿ ಮಾಡಿ ಮುಗಿಸುವ ಚಾಣಾಕ್ಷನು, ಪಾರಮಾರ್ಥಿಕ-ಜ್ಞಾನದಲ್ಲಿ ಬಲ್ಲಿದನು, ಜನರಲ್ಲಿ ಪೂಜ್ಯನೂ, ಮುತ್ಸದ್ದಿಯೂ ಆಗುತ್ತಾನೆ.
ದೋಷ ವಿಚಾರವು : ಈ ನಕ್ಷತ್ರದ ೧ನೇ ಚರಣದಲ್ಲಿ ಶಿಶು ಜನಿಸಿದರೆ ಶುಭವು. ೨ ನೇ ಚರಣದಲ್ಲಿ ಜನಿಸಿದರೆ ಧನ ಹಾನಿಯು ೩ ನೇ ಚರಣದಲ್ಲಿ ಜನಿಸಿದರೆ ಕೂಸಿನ ತಾಯಿಗೆ ಅರಿಷ್ಟವು. ೪ ನೇ ಚರಣದಲ್ಲಿ ಹಗಲು ಗಂಡು ಕೂಸು ಜನಿಸಿದರೆ ತಂದೆಗೂ, ರಾತ್ರಿ ಹೆಣ್ಣು ಕೂಸು ಜನಿಸಿದರೆ ತಾಯಿಗೂ, ಹಗಲು-ರಾತ್ರಿ ಕಾಲಗಳ ಸಂಧಿ ಕಾಲದಲ್ಲಿ ಜನಿಸಿದರೆ ಹುಟ್ಟಿದೆ ಶಿಶುವಿಗೂ ದೋಷವು. ಈ ನಕ್ಷತ್ರದ ಕೊನೆಯ ೨ ಘಳಿಗೆಯಲ್ಲಿ ಕೂಸು ಜನಿಸಿದರಂತೂ ಮಹಾ ಅರಿಷ್ಟವು. ಆದ್ದರಿಂದ, ಈ ದೋಷ ನಿವಾರಣಾರ್ಥವಾಗಿ ಬಂಗಾರದ ತಗಡಿನಲ್ಲಿ ಶ್ರೀದೇವಿಯ ಮೂರ್ತಿಯನ್ನು ಮಾಡಿಸಿ ವಿಧಾನೋಕ್ತವಾಗಿ ಅದನ್ನು ಪೂಜಿಸಿ ಪೂಜ್ಯರಿಗೆ ಅದನ್ನು ದಾನ ಕೊಡಬೇಕು. ಈ ಶಾಂತಿಯನ್ನು ಶಿಶು ಜನಿಸಿದ ೩ ತಿಂಗಳೊಳಗಾಗಿ ಅವಶ್ಯ ಮಾಡಬೇಕು.
ವಿಶೇಷ : ಈ ನಕ್ಷತ್ರವು ಗಜಯೋನಿ, ದೇವಗಣ, ಅಂತ್ಯನಾಡಿ, ಮೃದು ಸಂಜ್ಞೆ, ಅಂಧಲೋಚನವುಳ್ಳದ್ದು, ಈ ನಕ್ಷತ್ರದ ಆರಾಧ್ಯ ವೃಕ್ಷ ಇಷ್ಟೇ ಮರವು.
ವಿಶೇಷ ಸೂಚನೆ : ಮಾನವನು ಮಾಡುವ ಪುಣ್ಯದ ಬಲದಿಂದ ಆಯುಷ್ಯವೃದ್ಧಿಯೂ,
ಸುಖ ಜೀವನವೂ ಲಭಿಸುವದು. ಪಾಪದ ಬಲದಿಂದ ಪರಮಾಯುಷ್ಯವೆಂದು ಹೇಳಿದ್ದರೂ ಆಯುಷ್ಯವು ಕ್ಷೀಣಿಸುವದು; ಸುಖವು ದುಃಖವಾಗಿ ಮಾರ್ಪಡುವದು. ಇದಲ್ಲದೆ, ಗ್ರಹಗಳ ಉಚ್ಚ-ನೀಚ ಸ್ಥಾನಗಳ ಮೇಲಿಂದಲೂ ಈ ಹಿಂದೆ ಹೇಳಿದ ನಕ್ಷತ್ರ ಫಲಗಳಲ್ಲಿ ಹೆಚ್ಚು-ಕಡಿಮೆ ಯಾಗಬಹುದಾಗಿದೆ. ಜ್ಯೋತಿಷ್ಯರು ಈ ಬಗ್ಗೆ ವಿಶೇಷ ತಿಳಿದು, ಜಾಗ್ರತೆ ವಹಿಸಿ ಜಾತಕ ಫಲವನ್ನು ನಿರ್ಣಯಿಸಬೇಕು.
ನಮ್ಮ ಪುರಾತನ ಜ್ಯೋತಿಷ್ಯ ಪಂಡಿತರು ಸುಮಾರು ೧೦೧ ಮೃತ್ಯು (ಕಂಟಕ) ಗಳನ್ನು ಹೇಳಿದ್ದಾರೆ. ಆದರೆ ಅವುಗಳಲ್ಲಿ ಕಾಲಮೃತ್ಯು ಮಾತ್ರ ನಿಶ್ಚಯವು ಎಂದು ತಿಳಿಯಬೇಕು. ಉಳಿದ ಕಂಟಕಗಳು ನಮಗೆ ಅರಿವಿಲ್ಲದೇ, ಗೋಚರಿಸದೇ ನಡೆಯಬಹುದು.