ಮನೆ ಜ್ಯೋತಿಷ್ಯ ತಿಥಿಗಳ ಜನನ ಫಲ ವಿಚಾರ

ತಿಥಿಗಳ ಜನನ ಫಲ ವಿಚಾರ

0

೧) ಪ್ರತಿಪದ (ಪಾಡ್ಯ) ತಿಥಿಯಲ್ಲಿ ಹುಟ್ಟಿದವನು ಸರಕಾರದಲ್ಲಿ ದೊಡ್ಡ ಪದವಿಯನ್ನು ಪಡೆದು ಮನ್ನಣೆ ಹೊಂದುವನು. ವಿದ್ವಾಂಸನೂ, ತಿಳುವಳಿಕೆಯುಳ್ಳವನೂ ಒಳ್ಳೆ ನಡೆ ನುಡಿಯುಳ್ಳವನೂ, ಬಂಧು ಬಾಂಧವರಿಂದ ಮನ್ನಣೆ ಗುಣಗಾನ ಪಡೆಯುವವನಾಗುತ್ತಾನೆ. ರಾಜಮನ್ನಣೆಯನ್ನು ಹೊಂದಿ ದ್ರವ್ಯ, ಧನವನ್ನೂ ಪಡೆಯುವನು. ಆದರೆ ವ್ಯಸನಿಯಾದ ಈತ ಪ್ರಸಂಗ ಬಂದಲ್ಲಿ ಉಗ್ರ ಸ್ವರೂಪನೂ ಆಗುತ್ತಾನೆ.

Join Our Whatsapp Group

೨) ದ್ವಿತೀಯ (ಬಿದಿಗಿ) ತಿಥಿಯಲ್ಲಿ ಜನಿಸಿದಾತನು ವಿವೇಕ ಶೀಲನೂ ಯಾವಾಗಲೂ ಆಚಾರ-ವಿಚಾರ ಶೀಲನಾಗಿ ನಡೆದು ಜನರ ಮನ್ನಣೆ ಗಳಿಸುವವನೂ, ಕೊಡುಗೈ ದೊರೆಯೂ, ಅಂತಃಕರಣವುಳ್ಳವನೂ, ಗುಣವಂತರನ್ನು ಪ್ರೀತಿಸುವವನೂ, ಧನ ಧಾನ್ಯ ಸಂಗ್ರಹವನ್ನು ಸಂಪದಭಿವೃದ್ಧಿಯನ್ನು ಹೊಂದುವವನೂ ಆಗುತ್ತಾನೆ. ಆದರೂ, ಕೆಲವೊಂದು ಪ್ರಸಂಗಗಳಲ್ಲಿ ಈತನು ಆಚಾರ-ವಿಚಾರ ಶೂನ್ಯನಾಗಿ ಕುಟಿಲನೂ, ಪರದ್ರವ್ಯಾಪಹರಣನೂ, ಮೋಸಗಾರನೂ ಆಗಬಹುದಾಗಿದೆ.

೩) ತೃತೀಯ (ತದಿಗಿ ) ತಿಥಿಯಲ್ಲಿ ಜನಿಸಿದವನು ವಿಶೇಷವಾಗಿ ಕಾಮಾಸಕ್ತನು ಆಗುತ್ತಾನೆ. ಆದರೂ, ಈತನು ಮಾತುಕತೆಗಳನ್ನಾಡುವದರಲ್ಲಿ ವಿಶೇಷ ಪರಿಣತನೂ, ನಿಜವಾದ ವಿದ್ಯಾವಂತನೂ, ಬಲವಂತನೂ ಧೈರ್ಯವಂತನೂ, ಸರಕಾರದಲ್ಲಿ ತನ್ನ ಪ್ರಭಾವದಿಂದ ಧನ ಪ್ರಾಪ್ತಿ ಮಾಡುವವನಾಗುತ್ತಾನೆ, ಸದಾ ಸಂಚಾರಿಯಾಗಿರುವ ಈತನು ವಿಲಾಸಿಯೂ, ಚತುರನೂ ಅಭಿಮಾನ ಸ್ವಭಾವದವನೂ ಸ್ವಧರ್ಮದಲ್ಲಿ ಮಾತ್ರ ಆಸಕ್ತಿಯುಳ್ಳವನೂ ಆಗುತ್ತಾನೆ.

೪) ಚುತರ್ಥಿ (ಚೌತಿ ) ತಿಥಿಯಲ್ಲಿ ಹುಟ್ಟಿದವನು ಚಂಚಲ ಸ್ವಭಾವಿಯೂ,ಕಾರಣವಿಲ್ಲದೇ ವಾದ ಮಾಡುವವನೂ, ಯಾವಾಗಲೂ ಸಾಲದ ಶೂಲದಿಂದ ಬಳಲುವವನೂ, ಹುಸಿಯನ್ನು ನುಡಿದು ಜನತೆಯನ್ನು ವಂಚಿಸುವವನೂ ಆಗುತ್ತಾನೆ. ಜಗಳ ಗಂಟನು ಬಡೆದಾಟ, ಹೊಡೆದಾಟಗಳಲ್ಲಿ ಪ್ರವೀಣನು ಪುಢಾರಿಯೂ, ಸಾಹಸಿಯೂ, ಧೈರ್ಯವಂತನೂ ಆಗುವನು.

೫) ಪಂಚಮಿ ತಿಥಿಯಲ್ಲಿ ಜನಿಸಿದಾತನು ತಂದೆ ತಾಯಿಗಳಲ್ಲಿ ವಾತ್ಸಲ್ಯ ಪ್ರೇಮವುಳ್ಳವನೂ, ಬಂಧು ಬಳಗದಲ್ಲಿ ಶಾಂತ ದಯಾ ಭರಿತ ಸ್ವಭಾವವನ್ನು ಬೆಳೆಸಿ ಕೊಂಡವನೂ, ಅನೂಕೂಲೆಯಾದ ಹೆಂಡತಿ, ಆಜ್ಞಾಧಾರಕರಾದ ಮಕ್ಕಳನ್ನು ಸಹಾಯ, ಸಹಕಾರ ಪ್ರೇಮಗುಣವನ್ನುಳ್ಳ ಸ್ನೇಹಿತರನ್ನು ಹೊಂದಿದವನು ಆಗಿರುತ್ತಾನೆ. ಸರಕಾರದಲ್ಲೂ, ಸಮಾಜದಲ್ಲೂ ಗೌರವವನ್ನು ಹೊಂದಿರುವವನು. ವ್ಯವಹಾರದಲ್ಲಿ ಜಾಣ್ಣೆಯುಳ್ಳವನು, ಜ್ಞಾನವಂತನಾಗಿದ್ದು, ವಿದ್ವಾಂಸನಾಗಿದ್ದು, ಶ್ರೀಮಂತ ಭೋಗ ಭಾಗ್ಯಗಳಲ್ಲಿ ಬೆಳೆಯುತ್ತಾನೆ.

೬) ಷಷ್ಟಿ ತಿಥಿಯೊಳಗೆ ಜನಿಸಿದವನು ಧನ ಧಾನ್ಯ ಸಮೃದ್ಧಿಯುಳ್ಳವನು ಒಳ್ಳೇ ಹೆಂಡತಿ ಮಕ್ಕಳನ್ನು ಹೊಂದಿ ಸುಖಜೀವನ ನಡೆಸುವವನು. ಸಮಾಜದಲ್ಲಿ ವಿಶೇಷ ಮನ್ನಣೆ ಕೀರ್ತಿಯನ್ನು ಹೊಂದಿದವನು. ಸತ್ಯವಂತನೂ, ಸತ್ಯಪ್ರೇಮಿಯೂ ಆಗಿದ್ದು ದೊಡ್ಡ ಕೀರ್ತಿ ಶಾಲಿಯೂ ಸುಂದರ ಬಂಧುರ ದೇಹವುಳ್ಳವನೂ ಚೆನ್ನಿಗನೂ ಚತುರನೂ ಪರಾಕ್ರಮಿಯೂ ಆಗುತ್ತಾನೆಂದು ದೈವಜ್ಞ ವಿಲಾಸ ಮತ್ತು ಜಾತಕಾಭರಣ ಎಂಬ ಗ್ರಂಥಗಳಲ್ಲಿ ಹೇಳಿದ್ದರೂ ಯವನೇಶ್ವರಿ ಎಂಬ ಜ್ಯೋತಿಷ್ಯ ಗ್ರಂಥದಲ್ಲಿ ಈತನು ದುರ್ನಡತೆಯಿಂದ ಭಾಗ್ಯಹೀನನನಾಗು ವನಲ್ಲದೇ, ಹಠವಾದಿ ಮೂರ್ಖನೂ ಆಗುವನು ಎಂದಿದೆ !

೭) ಸಪ್ತಮಿ ತಿಥಿಯಲ್ಲಿ ಜನಿಸಿದವನು ಜ್ಞಾನಿಯೂ ಗುಣವಂತನೂ ಮಾನವ ಶ್ರೇಷ್ಠನೂ, ಅಧಿಕ ಸ್ತ್ರೀ ಸಂತತಿಯುಳ್ಳವನೂ, ಗುರು ಹಿರಿಯರಲ್ಲಿ ಶೃದ್ದೆ ನಿಷ್ಟೆಯುಳ್ಳವನೂ, ಗುರುದೇವತಾ ಪೂಜಾದಿಗಳನ್ನು ಮಾಡುವದರಲ್ಲಿ ವಿಶೇಷ ಆಸಕ್ತನೂ ಆಗಿರುತ್ತಾನೆ. ಮರ್ಯಾದೆಯಿಂದ ಧನ ಸಂಪಾದನೆ ಮಾಡುವ ಗುಣವುಳ್ಳ ಈತನು ತನ್ನ ಹಿತೈಷಿಗಳನ್ನು ಆದರಿಸುವವನೂ, ಶತೃಗಳನ್ನು ದಮನ ಮಾಡುವವನೂ ಆಗುತ್ತಾನೆ. ಆದರೂ ತನ್ನ ಬಂಧುಗಳಿಗೋಸ್ಕರವೇ ಈತನು ವಿಶೇಷ ಹಣ ಕಳೆದುಕೊಳ್ಳುವನು.

೮) ಅಷ್ಟಮಿ ತಿಥಿಯಲ್ಲಿ ಜನಿಸಿದವನು ವಿಶೇಷ ಸಂಪತ್‌ ಶಾಲಿಯು, ಸತ್ಪುತ್ರ- ಪುತ್ರಿಯರನ್ನು ಹೊಂದಿ ಸೌಖ್ಯ ಜೀವನವನ್ನು ಸಂತೋಷದಿಂದ ಕಳೆಯುವವನು. ಸಂಪತ್-ಸಮೃದ್ಧಿಯನ್ನು ಹೊಂದಿದ ಈತನು ದಯಾ ದಾಕ್ಷಿಣ್ಯವಂತನೂ ಆಗುವನು.ಸರಕಾರದಲ್ಲಿ ವಿದ್ಯಾಧಿಕಾರಿಯಾಗಿಯೂ ಆಗುವನು. ಆದರೆ, ಚಂಚಲ ಚಿತ್ತನು. ಸ್ತ್ರೀ ಸುಖ ಲೋಲನು, ಕೈಕೊಂಡ ಕಾರ್ಯಗಳಲ್ಲಿ ಕುಶಲತೆಯನ್ನು ಪ್ರದರ್ಶಿಸುವವನು.

೯) *ನವಮಿ ತಿಥಿಯಲ್ಲಿ ಜನಿಸಿದಾತನು ಗುರುದೇವತಾ ಭಕ್ತಿ ಭಾವನೆಯುಳ್ಳವನ್ನು ವಿದ್ಯಾವಂತನು, ಬಂಧು ಬಳಗದವರಲ್ಲಿ ಸುಪ್ರಸಿದ್ದನ್ನು ಧೈರ್ಯಶಾಲಿಯೂ ದನ ಧಾನ್ಯ ಸಮೃದ್ಧಿಯುಳ್ಳವನು, ಸ್ತ್ರೀ ಲೋಲನು. ಆದರೆ, ದುಷ್ಟ ಸತಿ ಸುತರಿಂದ ಕೊನೆಗಾಲದಲ್ಲಿ ದುಃಖಿತ ಜೀವನ ಸಾಗಿಸುವವನು.

೧೦) ದಶಮಿ ತಿಥಿಯಲ್ಲಿ ಜನಿಸಿದಾತನು ಧರ್ಮದಿಂದ ನಡೆಯತಕ್ಕವನ್ನೂ ವೈಭವದ ಜೀವನ ನಡೆಯಿಸತಕ್ಕವನೂ, ಅನೇಕ ಶಾಸ್ತ್ರಗಳನ್ನು ಬಲ್ಲಿದವನೂ, ಉದಾರ ಹೃದಯಿಯೂ, ನೀತಿವಂತನೂ, ವಿದ್ಯಾವಂತನೂ, ಗುರುದೇವತಾ ಕಾರ್ಯದಲ್ಲಿ ಸದಾನಿರತನೂ, ಮಾತಾಪಿತೃಗಳಲ್ಲಿ ಭಕ್ತಿ ನಿಷ್ಟೆಯುಳ್ಳವನೂ, ಪ್ರಯತ್ನಶೀಲನೂ ಸತತೋದ್ಯೋಗಿಯೂ ಆಗಿದ್ದು, ಬಂಧು ಬಾಂಧವರು ಮಿತ್ರ ಪುತ್ರರಿಂದ ಮನ್ನಣೆ ಹೊಂದಿದವನೂ ಸುಖಿಯೂ ಆಗುವನು.

೧೧) ಏಕಾದಶಿ ತಿಥಿಯಲ್ಲಿ ಜನಿಸಿದವನು ಪರೋಪಕಾರಿಯೂ, ಅನ್ನದಾನಿಯೂ, ಕಾರ್ಯತತ್ಸರನೂ, ಜನಾನುರಾಗಿಯೂ ಗುರುದೇವತಾ ಕಾರ್ಯದಲ್ಲಿ ನಿಷ್ಟೆಯವನೂ, ಉದ್ಯೋಗ ನಿರತನೂ ಧನಾಡ್ಯನೂ ದಯಾಪರನೂ ಕೀರ್ತಿವಂತನೂ ಆಗುತ್ತಾನೆ.

೧೨) ದ್ವಾದಶಿ ತಿಥಿಯಲ್ಲಿ ಜನಿಸಿದವನು ದೇಶ ಸಂಚಾರದಲ್ಲಿ ಆಸಕ್ತವುಳ್ಳವನು. ಅನೇಕ ಸ್ತ್ರೀಯರ ಪ್ರೇಮಿಯೂ ವಿಲಾಸಿಯೂ ಚಪಲನೂ ಧೈರ್ಯಶಾಲಿಯೂ, ಬಲವಂತ- ಧೈರ್ಯವಂತನೂ ಆಗುತ್ತಾನೆ. ಸತತ ಉದ್ಯೋಗಿಯಾದ ಈತನು ಕ್ರಿಯಾಶೀಲನಾಗಿದ್ದು ಶಾಂತನೂ ಸೌಖ್ಯವಂತನೂ ಆಗುತ್ತಾನೆ.

೧೩) ತ್ರಯೋದಶಿ ತಿಥಿಯಲ್ಲಿ ಜನಿಸಿದವನು ಧನಧಾನ್ಯ ಸಂಪತ್ತನ್ನು ಹೊಂದಿದವ ನಾಗುತ್ತಾನೆ. ಧೈರ್ಯಶಾಲಿಯೂ ವಿದ್ಯಾವಂತನೂ ಬುದ್ಧಿವಂತನೂ ಸುಖಭೋಗಿಯೂ, ಪರೋಪಕಾರಿಯೂ ಶಾಂತ ಸ್ವಭಾದವನೂ ಆಗುವನು. ಆದರೆ, ಸ್ತ್ರೀಯ ಸಹವಾಸದಿಂದ ಧನ ಧಾನ್ಯ ಕಳೆದುಕೊಳ್ಳುವನು. ಕೋಪದ ಭರದಲ್ಲಿ ವಿಲಾಸಪ್ರಿಯ ದುಶ್ಚಟಗಳ ಗುಲಾಮನಾಗಬಹುದಾಗಿದೆ.

೧೪) ಶುಕ್ಲಪಕ್ಷದ ಚತುರ್ದಶಿ ತಿಥಿಯಲ್ಲಿ ಜನಿಸಿದವನು ಕೋಪಿಯೂ ಕ್ರೂರ ಸ್ವಭಾದವನೂ, ಉಪಕಾರಗೇಡಿಯೂ, ಶೀಘ್ರ ಕೋಪಿಯೂ ನಿಷ್ಟುರದ ನುಡಿಗಳನ್ನು ಆಡುವವನೂ ದ್ರವ್ಯ ಸಂಪಾದನೆಗೆ ಏನನ್ನಾದರೂ ಮಾಡುವ ಸ್ವಭಾವದವನೂ, ಜನರಲ್ಲಿ ಸಮಾಜದಲ್ಲಿ ಕೀಳು ಸ್ವಭಾವದವನೂ ಆಗುವವನೆಂದು ದೈವಜ್ಞ ವಿಲಾಸ- ಜಾತಕಾಭರಣ ಯವನೇಶ್ವರ ಜಾತಕ ಎಂಬ ಪುರಾತನ ಜ್ಯೋತಿಷ್ಯ ಗ್ರಂಥಗಳಲ್ಲಿ ಹೇಳಲ್ಪಟ್ಟಿದ್ದರೂ ಮಾನಸಸಾಗರ ಎಂಬ ಜ್ಯೋತಿಷ್ಯ ಗ್ರಂಥದಲ್ಲಿ ಮಾತ್ರ ಈತನು ಧನಾಡ್ಯನೂ; ಕರ್ಮವಂತನೂ, ದಯಾವಂತನೂ ರಾಜ ಮನ್ನಣೆ ಗಳಿಸುವವನ್ನೂ ಯಶಸ್ವೀ ಜೀವನ ನಡೆಸುವವನೂ ಆಗುವನೆಂದು ಹೇಳಿದೆ.