ಹವಳ,ಆನೆ ದಂತದ ಕಡಗ ದರಣಿ :
ಪೌಷ್ಣಾಧ್ರುವಾ ಶ್ವಿಕರಪಂಚಕವಸವೇಜ್ಯಾದಿತ್ಯೇ ಪ್ರವಾಲರದಶರಂಗಸುವರ್ಣ ವಸ್ತ್ರಮ್|
ದಾರ್ಯಂ ವಿರಿಕ್ತ ಶನಿ ಚಂದ್ರ ಕುಜೀಚಿಹ್ನ ರಕ್ತಂ ಭೌಮೇ ಧ್ರುವಾದಿತಿಯುಗೇ ಶುಭಗಾ ನ ದಧ್ಯಾತ್||
ರೇವತಿ, ಧ್ರುವಸಂಜ್ಞಕ- ಉತ್ತರಾ ಫಾಲ್ಗುಣಿ,ಉತ್ತರಾಷಾಡ, ಉತ್ತರಾ ಭಾದ್ರಪದಾ, ಅಶ್ವಿನಿ,ಹಸ್ತಾದಿಂದ 5 ನಕ್ಷತ್ರ ಹಸ್ತಾ, ಚಿತ್ತಾ,ಸ್ವಾತಿ, ವಿಶಾಖಾ, ಅನುರಾಧ, ವಾಸವ- ಧನಿಷ್ಠ ಇಜ್ಯ-ಪುಷ್ಯ ಅದಿತ್ಯ- ಪುನರ್ವಸು – ಈ ನಕ್ಷತ್ರಗಳಲ್ಲಿ ರಿಕ್ತಾ- ಚತುರ್ಥಿ, ನವಮಿ, ಚತುರ್ದರ್ಶಿನಿಯನ್ನು ಹೊರತುಪಡಿಸಿ ಅನ್ಯ ತಿಥಿಗಳು, ಸೋಮವಾರ, ಮಂಗಳವಾರ, ಮತ್ತು ಶನಿವಾರಗಳನ್ನು ಹೊರತುಪಡಿಸಿ.ಅನ್ಯವಾರಗಳಲ್ಲಿ ಹವಳ, ಆನೆಯ ದಂತ ಬಳೆ ಕಡಗ, ಬಂಗಾರ, ಶ್ವೇತವಸ್ತ್ರಗಳನ್ನು ಧರಿಸಬೇಕು. ಮಂಗಳವಾರದಂದು ಕೆಂಪು ವರ್ಣದ ವಸ್ತ್ರಧರಿಸಬೇಕು. ಧ್ರುವಸಂಜ್ಞಕ ಹಾಗೂ ಪುನರ್ವಸು ಮತ್ತು ಪುಷ್ಯ ನಕ್ಷತ್ರದಲ್ಲಿ ಸೌಭಾಗ್ಯವತಿ ಸ್ತ್ರೀಯರು ನವೀನ ವಸ್ತ್ರಾದಿಗಳನ್ನು ಧರಿಸಬೇಕು.
ದುಷ್ಟಯೋಗಗಳಲ್ಲಿ ವಸ್ತ್ರ ಧಾರಣೆ :
ವಿಪ್ರಾಜ್ಞಯಾ ಯಥೋವಾಹೇ ರಾಜಾ ಪ್ರೀತ್ಯಾರ್ಪಿತಂಚ ಯತ್| ನಿಂದ್ಯೇಪಿ ಧಿಷ್ಣ್ಯೇವಾರಾದೌ ವಸ್ತ್ರಂಧಾಯ್ಯ್ರಂ ಜುಗುರ್ಬುಧಾಃ ||
ನಿಂದಿತ ನಕ್ಷತ್ರ ವಾರ, ತಿಥಿ ವೃತ್ತಿ ಪಾತ ಮತ್ತು ಭದ್ರಾದಿ ದುಷ್ಟಯೋಗಗಳಲ್ಲಿ ಕೂಡ, ಬ್ರಾಹ್ಮಣನ ಆಜ್ಞೆಯಿಂದ ಹಾಗೂ ವಿವಾಹದಲ್ಲಿ ಪ್ರಸನ್ನಪೂರ್ವಕ ರಾಜನಿಂದ ನೀಡಲಾದ ವಸ್ತ್ರವನ್ನು ಧಾರಣೆ ಮಾಡಬೇಕು ;ಹೀಗೆ ಆಚಾರ್ಯವನ್ನು ವಚನವಿದೆ.