ಮನೆ ಜ್ಯೋತಿಷ್ಯ ಜನ್ಮ ನಕ್ಷತ್ರ ಜಾತಕ ಫಲ: ವಿಶೇಷ

ಜನ್ಮ ನಕ್ಷತ್ರ ಜಾತಕ ಫಲ: ವಿಶೇಷ

0

 

      ಸೂರ್ಯನ ರಾಶಿ ಹಾಗೂ ಸೂರ್ಯನ ನಕ್ಷತ್ರದಲ್ಲಿಯೇ  ಜನಿಸಿದ ಇಂತಹ ಜಾತಕರು ಸ್ವಯಂ ಬಲಯುಕ್ತ ಮತ್ತು ಉದಾರ ವಿಚಾರವಂತರಾಗಿರುತ್ತಾರೆ.ಸಂಕೀರ್ಣತೆ ಮತ್ತು ಅನೈತಿಕ ಕಾರ್ಯಗಳ ಕುರಿತು ಇವರಲ್ಲಿ ಸ್ವಾಭಾವಿಕ ಹೀನ ಭಾವನೆಯಿರುತ್ತದೆ.

Join Our Whatsapp Group

ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಇವರು ಧನ ಸಂಪಾದನೆಯಲ್ಲಿ ಪ್ರವೀಣರಾಗುತ್ತಾರೆ. ಸಹಕಾರ ಮತ್ತು ಹುಚ್ಚ ವರ್ಗದಿಂದ ಇವರಿಗೆ ವಿಶೇಷ ಸನ್ಮಾನ ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಈ ನಕ್ಷತ್ರದ ಬಾಗ ಯಾವುದೇ ಅಶುಭ ಗ್ರಹದಿಂದ ಪೀಡಿತವಾಗಿದ್ದರೆ,ಇಂಥ ಜಾತಕರು ಸಾರ್ವಜನಿಕ ಖ್ಯಾತಿಯನ್ನು ಪ್ರಾಪ್ತಿ ಹೊಂದುತ್ತಾರೆ ಪ್ರಿಯವಾದ ಮಾತನಾಡುವವರು, ಕಾರ್ಯಕುಶಲರಾದ ಇವರು ಧನ ಸಂಚಯ  ಮಾಡುವುದರಲ್ಲಿ ಜಾಗೃತರಾಗಿರುವುದಿಲ್ಲ. ಮಿತ್ರ ಮತ್ತು ಸಂಬಂಧಿಗಳೊಡನೆ ಇವರಿಗೆ ಸ್ನೇಹವಿರುತ್ತದೆ ಮತ್ತು ಇವರು ಸದಾ ಸತ್ಯವಾಗಿ ಜನರ ಹಿತವನ್ನು ಮಾಡುತ್ತಾರೆ. ಇವರ ಸ್ಮರಣ ಶಕ್ತಿ ತುಂಬ ತೀವ್ರವಾಗಿರುತ್ತದೆ,ಭೋಜನ ವಿಶೇಷದ ಇಚ್ಛೆಯಿರುವ ಇವರು ಅಲ್ಪ ಭೋಜನವನ್ನೇ ಸ್ವೀಕರಿಸುತ್ತಾರೆ. ಸಂತಾನ ಅಲ್ಪವಿರುತ್ತದೆ.ಹೆಜ್ಜೆಂದರೆ ಒಂದು ಪುತ್ರ ಅಥವಾ ಒಂದು ಕನ್ಯಾ ಸಂತಾನವಾಗುತ್ತದೆ.

        ಸೂರ್ಯ ನು ಈ ನಕ್ಷತ್ರದ ಮೇಲೆ ಪ್ರತಿವರ್ಷ ಭಾದ್ರಪದ ಮಾಸದ ಅತ್ಯಂತದಲ್ಲಿ ಮೂರೂವರೆ  ದಿನ ವಿದ್ಯಾಮಾನನಾಗಿರುತ್ತಾನೆ. ಚಂದ್ರ ಪ್ರತಿ ಇಪ್ಪಳನೆಯತ್ತೇಳನೆಯ ದಿನ 6 ಗಂಟೆಯ ಅವಧಿ ಈ ನಕ್ಷತ್ರದ ಮೇಲೆ ಭ್ರಮಣ ಮಾಡುತ್ತಾನೆ. ಸೂರ್ಯ ಅಥವಾ ಚಂದ್ರ ಈ ನಕ್ಷತ್ರದ ಪ್ರಥಮ ಚರಣದ ಭಾಗದಿಂದ ಮಣಭ್ರ ಮಾಡಿದರೆ, ಮೂಲ ಕುಂಡಲಿಯಲ್ಲಿ ಈ ಗ್ರಹಗಳ ಕಾರತತ್ವದ ಕಾರಕತತ್ವದ ಪ್ರಾಕಾರ ಜಾತಕನಿಗೆ ಫಲಗಳು ಪ್ರಾಪ್ತಿಯಾಗುತ್ತವೆ.

 ಚರಣದ ಸ್ವಾಮಿ ಫಲ :

 ★ಪ್ರಥಮ ಚರಣದ ಸ್ವಾಮಿ ಸೂರ್ಯನ ಗುರು ಸ್ವಾಭಾವಿಕ ಪ್ರವೃತ್ತಿಗಳೊಡನೆ ಜಾತಕದಲ್ಲಿ ಸ್ವಚ್ಛಂದತೆಯ ಭಾವವನ್ನು ತುಂಬುತ್ತಾರೆ.

        ★ದ್ವಿತೀಯ ಚರಣದ ಸ್ವಾಮಿ ಸೂರ್ಯ ಶನಿ ಜಾತಕನಲ್ಲಿ ತನ್ನ ವೃತ್ತಿಯ ಕುರಿತು ಅಧಿಕ ಮಹತಾಕಾಂಕ್ಷೆಯನ್ನು ಉಂಟುಮಾಡುತ್ತಾರೆ.

      ★ತೃತೀಯ ಚರಣದ ಸ್ವಾಮಿ ಸೂರ್ಯ ಶನಿ ಜಾತಕನಲ್ಲಿ ಅಸ್ಥಿರತೆಯನ್ನು ಉಂಟು ಮಾಡುತ್ತಾರೆ.

      ★ಚತುರ್ಥ ಚರಣದ ಸ್ವಾಮಿ ಸೂರ್ಯ ಗುರು ಜಾತಕಾನ ಭಾವನಾತ್ಮಕ ಪಕ್ಷವನ್ನು ಪೇರಿತಗೊಳಿಸಿ, ಆತನನ್ನು ಉತ್ಸಾಹದತ್ತ ಉನ್ಮುಖನ್ನಾಗಿ ಮಾಡುತ್ತಾರೆ ಅಥವಾ ಸಂಶೋಧನೆಯಲ್ಲಿ ಪ್ರವೃತ್ತಿಗೊಳಿಸುತ್ತಾರೆ.

      ಉತ್ತರ ಪಾಲ್ಗುಣಿ ನಕ್ಷತ್ರದ ಈ ಚರಣಗಳ ಕ್ಷೇತ್ರ ವ್ಯಾಪ್ತಿ ಶೂನ್ಯ ಅಂಶ ಕನ್ಯಾರಾಶಿಯಿಂದ 10 ಅಂಶ ಕನ್ಯಾ ರಾಶಿಯವರಿಗೆ,ರಾಶಿ ಸ್ವಾಮಿ ಬುಧ, ನಕ್ಷತ್ರ ಸ್ವಾಮಿ ಸೂರ್ಯ,ನಕ್ಷತ್ರ ದೇವತೆ ಆರ್ಯಮಾ, ನಕ್ಷತ್ರ ಸಮೂಹ ಎರಡು ಆಕಾಶಭಾಗ, ಉತ್ತರ ಅದ್ಯನಾಡಿ ಗೋಯೋನಿ ಮನುಷ್ಯಗಣ, ನಾಮಾಕ್ಷರ, ಟಾ,ಟಿ,ಟು, ಈ  ನಕ್ಷತ್ರದ ಎರಡು ಮೂರು ನಾಲ್ಕನೇ ಚರಣ ಪ್ರತಿನಿಧಿಸುವ ಜಾತಕನ ಶರೀರ ಭಾಗ ದೊಡ್ಡಕರುಳು ಸಣ್ಣಕರುಳು ಉದರ ಯಕೃತ್.

 ★ಉತ್ತರ ಪಾಲ್ಗುಣಿಯ ನಕ್ಷತ್ರ ಎರಡನೇ ಮೂರನೇ ನಾಲ್ಕನೇ ಚರಣ :

 ★ಉತ್ತರ ಪಾಲ್ಗುಣಿ ಜಾತಕನ ಸ್ವರೂಪ :

      ಸೂಕ್ತ ನಿರ್ಣಯ ತೆಗೆದುಕೊಳ್ಳುವವ, ಮುಂದಾಗುವುದನ್ನು ತಿಳಿಯುವ ಸಾಮರ್ಥ್ಯಯುಕ್ತ. ವಿದ್ವಾಂಸ, ಚತುರ ವ್ಯಾಪಾರ ಬುದ್ಧಿಯವ, ಅಧ್ಯಯನ ಶೀಲ, ಉದ್ಯಮಿ, ಗಣಿತದಲ್ಲಿ ನಿಪುಣ, ಅಭಿಯಂತ,ಖಗೋಳಶಾಸ್ತ್ರಜ್ಞ  ಜ್ಯೋತಿಷಿ, ಲೆಕ್ಕ ಪುಸ್ತಕ, ವಿಮರ್ಶಾತ್ಮಕ ಪ್ರವೃತ್ತಿ ದಕ್ಷತೆಯನ್ನು ಪ್ರಾಪ್ತಿ ಹೊಂದುವವ, ನಿಪುಣ, ಕೂಟನೀತಿಜ್ಞ, ವಾಗ್ಮಿ, ವಾಕ್ಪ,ಶಿಕ್ಷಿತ, ಜೀವವಿಜ್ಞಾನ ಅಥವಾ ಸ್ವಚ್ಛತೆ ಅಭಿಯಂತ, ಸತ್ಯವಂತ, ನಿಷ್ಕಪಟಿ, ಸರಳ ಮನಸ್ಸಿನವ ಸರಳ ಪ್ರವೃತ್ತಿ ಬುದ್ಧಿಜೀವಿ,ಲೇಖನ,ವ್ಯಾಪಾರ ಕುಶಾಗ್ರಬುದ್ಧಿ.