ಕೆಲವು ಮುಖ್ಯ ಕಾರಣಗಳಿಂದ ಸ್ಟಾರ್‌ಗಳು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳೋದನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಾಲಿ ಧನಂಜಯ್ ಕೂಡ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳದಿರಲು ನಿರ್ಧರಿಸಿ, ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿ ಕಾರಣವನ್ನು ನಟ ಧನಂಜಯ್ ತಿಳಿಸಿದ್ದಾರೆ.
ಆಗಸ್ಟ್ 23ಕ್ಕೆ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಆದರೆ ಈ ಬಾರಿ ಧನಂಜಯ್ ಅಭಿಮಾನಿಗಳೊಂದು ಆಚರಿಸಿಕೊಳ್ತಿಲ್ಲ. ಕೆಲಸದ ನಿಮಿತ್ತ ಹೊರಗಡೆ ಹೋಗುವ ಕಾರಣಕ್ಕೆ ಸಂಭ್ರಮಾಚರಣೆಯನ್ನ ನಿಮ್ಮೊಂದಿಗೆ ಮಾಡುತ್ತಿಲ್ಲ ಎಂದಿದ್ದಾರೆ. ಅಂದಹಾಗೆ ಇದೀಗ ಧನಂಜಯ್ ಐತಿಹಾಸಿಕ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ಇನ್ನು ಸಿನಿಮಾದಲ್ಲಿ ಶೂಟಿಂಗ್ ನಿಮಿತ್ತ ಬೇರೆ ಊರಿನಲ್ಲಿ ಇರುವ ಸಾಧ್ಯತೆಯಿದ್ದು, ಹೀಗಾಗಿ ಧನಂಜಯ್ ಈ ಬಾರಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ. ಈ ಬಾರಿ ಬಹುತೇಕ ಸ್ಟಾರ್‌ಗಳು ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಅವರ ಸಾಲಿಗೆ ಡಾಲಿ ಧನಂಜಯ್ ಕೂಡ ಸೇರಿದ್ದಾರೆ ಎಂದು ಹೇಳಲಾಗಿದೆ.















