ಮನೆ ರಾಜಕೀಯ ಜನರ ಸುಲಿಗೆಗೆ ಮುಂದಾದ ಬಿಜೆಪಿ ಸರ್ಕಾರ: ಎಂ.ಲಕ್ಷ್ಮಣ್

ಜನರ ಸುಲಿಗೆಗೆ ಮುಂದಾದ ಬಿಜೆಪಿ ಸರ್ಕಾರ: ಎಂ.ಲಕ್ಷ್ಮಣ್

0

ಮೈಸೂರು: ಚುನಾವಣೆ ಬಳಿಕ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಟೋಲ್ ಶುಲ್ಕ ಬದಲಾಗಲಿದ್ದು, ಜನರ ಸುಲಿಗೆಗೆ ಬಿಜೆಪಿ ಸರ್ಕಾರಕ್ಕೆ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನಿಂದ ಟೋಲ್ ಸಂಗ್ರಹ ಆಗಬೇಕಿತ್ತು. ನಿನ್ನೆ ರಾತ್ರಿ ಸಡನ್ ಆಗಿ ಆ ಆದೇಶವನ್ನು ವಾಪಸ್ ಪಡೆದಿದ್ದಾರೆ. ಎಕ್ಸ್ ಪ್ರೆಸ್ ಹೈವೇ, ನ್ಯಾಷನಲ್ ಹೈವೇ, ಸ್ಟೇಟ್ ಹೈವೇಗೆ ಬೇರೆ ಬೇರೆ ಟೋಲ್ ಇರತ್ತೆ. ಈಗ ಅವರು ಮಾಡಿರುವ ಟೋಲ್ ಶುಲ್ಕ 165 ರೂಪಾಯಿ, ಇದು ತಾತ್ಕಾಲಿಕ. ಜುಲೈ ತಿಂಗಳಿನಿಂದ ಒಂದು ಕಡೆಯಿಂದ 465ರೂ ಎರಡು ಕಡೆಯಿಂದ 900 ರೂಪಾಯಿ ಅಷ್ಟು ಟೋಲ್ ಶುಲ್ಕ ನಿಗಧಿಯಾಗಲಿದೆ ಎಂದು ಆರೋಪಿಸಿದರು.

ನಮ್ಮ ಜನರನ್ನು ಸುಲಿಗೆ ಮಾಡಲು ಬಿಜೆಪಿ ಸರ್ಕಾರಕ್ಕೆ ಹೊರಟಿದೆ. ಎಕ್ಸ್ ಪ್ರೆಸ್ ವೇ ಉದ್ಘಾಟನೆ ಮಾಡಲು ಮೋದಿ ಬರ್ತಾರೆ. ಕಪ್ಪು ಬಟ್ಟೆ ತೋರಿಸುವ ಮೂಲಕ ನಾವು ನಮ್ಮ ಪ್ರತಿಭಟನೆ ಮಾಡುತ್ತೇವೆ ಎಂದರು.

ಎಕ್ಸ್ ಪ್ರೆಸ್ ಹೈವೆಗೆ ನಮ್ಮ ವಿರೋಧವಿಲ್ಲ. ಹೆಚ್ಚಿನ ರೀತಿಯ ಟೋಲ್ ಹಾಗೂ ಸರ್ವಿಸ್ ರಸ್ತೆ ಇಲ್ಲದಿರುವುದು ಮಂಡ್ಯ ರಾಮನಗರ ಚನ್ನಪಟ್ಟಣ ಜನರಿಗೆ ಅನ್ಯಾಯ ಮಾಡಿದ್ದೀರಿ.  ಅಂಡರ್ ಪಾಸ್ ಇಲ್ಲ, ಜಮೀನು ಕೊಟ್ಟ  ಜನರಿಗೆ ಅನ್ಯಾಯ ಮಾಡಿದ್ದೀರಿ. ಆದ್ದರಿಂದ ಟೋಲ್ ಸಂಗ್ರಹ ಯಾವ ಉದ್ದೇಶದಿಂದ ಮಾಡಿದ್ದೀರಿ ತಿಳಿಸಿ ಎಂದು  ಹರಿಹಾಯ್ದರು.

ಬಿಜೆಪಿಗರು ಮೈ ಮರೆತರೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಎಂ.ಲಕ್ಷ್ಮಣ್,  ಆರ್ ಎಸ್ಎಸ್ ನವರು ಕೋಮುಗಲಭೆ ಸೃಷ್ಟಿಸಿ ರಕ್ತಪಾತ ನೋಡಲು ಇಷ್ಟ ಪಡುತ್ತಾರೆ. ಆರ್ ಎಸ್ಎಸ್ ನವರಿಗೆ ರಾಷ್ಟ್ರಧ್ವಜ ಬೇಕಾಗಿಲ್ಲ. ಆರ್ ಎಸ್ಎಸ್ ಮತ್ತು ತಾಲಿಬಾನ್ ಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದರು.

ಹಿಂದಿನ ಲೇಖನಕರುನಾಡ ಕೊಲ್ಹಾಪುರ ದೊಡ್ಡ ಗದ್ದವಳ್ಳಿ
ಮುಂದಿನ ಲೇಖನವಿವಿಧ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ಮೈಸೂರಿನಲ್ಲಿ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನ