ಮನೆ ರಾಜಕೀಯ ತ್ರಿಪುರದಲ್ಲಿ ಸರ್ಕಾರ ರಚಿಸಲು ಸಜ್ಜಾದ ಬಿಜೆಪಿ

ತ್ರಿಪುರದಲ್ಲಿ ಸರ್ಕಾರ ರಚಿಸಲು ಸಜ್ಜಾದ ಬಿಜೆಪಿ

0

ಅಗರ್ತಲಾ: ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌’ಡಿಯ ಮೈತ್ರಿಕೂಟ ಮತ್ತೊಮ್ಮೆ ಸರ್ಕಾರ ರಚಿಸಲು ಸಜ್ಜಾಗಿದೆ.

60 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 54 ಕಡೆ ಹಾಗೂ ಅದರ ಮಿತ್ರ ಪಕ್ಷದ ಇಂಡಿಜೀನಿಯಸ್‌ ಪೀಪಲ್ಸ್‌ ಪ್ರಂಟ್‌ ಆಫ್‌ ತ್ರಿಪುರಾ (ಐಪಿಎಫ್‌’ಟಿ) 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಸದ್ಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿ 32 ಕಡೆ ಜಯ ಕಂಡಿದ್ದು, ಐಪಿಎಫ್‌’ಟಿ 1 ಕ್ಷೇತ್ರ ಜಯಿಸಿದೆ. ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಹೊಸ ಪಕ್ಷ ತಿಪ್ರ ಮೋಥಾ ಪಾರ್ಟಿ 13 ಸ್ಥಾನಗಳನ್ನು ಗೆದ್ದುಕೊಂಡಿದೆ.

ಉಳಿದಂತೆ ಕಮ್ಯುನಿಸ್ಟ್‌ ಪಾರ್ಟಿ (ಸಿಪಿಐ) 11 ಮತ್ತು ಕಾಂಗ್ರೆಸ್‌ 3 ಸ್ಥಾನಗಳನ್ನು ಜಯಿಸಿವೆ.

ಮುಖ್ಯಮಂತ್ರಿ ಮಾಣಿಕ್‌ ಸಾಹಾ ಅವರು ಕಾಂಗ್ರೆಸ್‌ ಅಭ್ಯರ್ಥಿ ಆಶಿಷ್‌ ಕುಮಾರ್‌ ಸಾಹಾ ವಿರುದ್ಧ ಬರ್ದೋವಾಲಿ ಪಟ್ಟಣ ಕ್ಷೇತ್ರದಲ್ಲಿ 1,257 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಬಿಪ್ಲವ್‌ ದೇವ್‌ ಅವರು 2022ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸಾಹಾ ಆ ಸ್ಥಾನಕ್ಕೆ ಆಯ್ಕೆಯಾಗಿದ್ದರು.

ತ್ರಿಪುರಾ ವಿಧಾನಸಭೆ ಗೆಲುವಿನ ಬಳಿಕ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಧನ್ಯವಾದ ತ್ರಿಪುರಾ! ಈ ಮತ ಪ್ರಗತಿ ಮತ್ತು ಸ್ಥಿರತೆಗಾಗಿ. ಬಿಜೆಪಿಯು ರಾಜ್ಯದ ಅಭಿವೃದ್ಧಿಯ ಪಥಕ್ಕೆ ಉತ್ತೇಜನ ನೀಡಲಿದೆ. ತ್ರಿಪುರಾದಲ್ಲಿ ಬೇರು ಮಟ್ಟದಿಂದ ಅದ್ಬುತವಾಗಿ ಶ್ರಮಿಸಿದ ಬಿಜೆಪಿಯ ಎಲ್ಲ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.