ಮನೆ ರಾಜಕೀಯ ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋರಾಡುವ ನಿರ್ಧಾರ: ಎಚ್.ಡಿ ಕುಮಾರಸ್ವಾಮಿ

ಸರ್ಕಾರದ ವಿರುದ್ಧ ಬಿಜೆಪಿ, ಜೆಡಿಎಸ್ ಒಟ್ಟಾಗಿ ಹೋರಾಡುವ ನಿರ್ಧಾರ: ಎಚ್.ಡಿ ಕುಮಾರಸ್ವಾಮಿ

0

ಬೆಂಗಳೂರು: ಬಿಜೆಪಿಯೂ ವಿರೋಧ ಪಕ್ಷ, ಜೆಡಿಎಸ್ ಸಹ ವಿರೋಧ ಪಕ್ಷ. ಸರ್ಕಾರದ ವಿರುದ್ಧ ನಾವಿಬ್ಬರು ಒಟ್ಟಾಗಿ ಕೆಲಸ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.

Join Our Whatsapp Group

ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಜತೆಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಮತ್ತು ಜೆಡಿಎಸ್‌ ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಮಾಡಿದ್ದೇವೆ ಎಂದರು.

ಎಲ್ಲರ ಅಭಿಪ್ರಾಯ ಪಡೆದು ಪಕ್ಷದ ಸಂಘಟನೆಗೆ 10 ಜನರ ತಂಡ ರಚನೆ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಸರ್ಕಾರದ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಧ್ವನಿ ಎತ್ತುವಂತೆ ದೇವಗೌಡರು ಸಂದೇಶ ನೀಡಿದ್ದಾರೆ. ದೇವೇಗೌಡರ ಮಾರ್ಗದರ್ಶನ, ಪಕ್ಷ ಸಂಘಟನೆ ಮೂಲಕ ಯುವಕರ ತಂಡ ರಚನೆ ಮಾಡಲಾಗುತ್ತದೆ ಎಂದು ಹೇಳಿದರು.

ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೈಸ್, ನೀಸ್ ಎನೋ ಇದೆಯಲ್ಲ. ಮಾಧುಸ್ವಾಮಿಯವರು 5 ಲಕ್ಷ ಫೈನ್ ಹಾಕಿಕೊಂಡರು. ದೇವೇಗೌಡರ ಮೇಲೆ ಮಾತು ಆಡದಂತೆ ಕೇಸ್ ಹಾಕಿದ್ದರು. ಬೊಮ್ಮಾಯಿಯವರು ನಿರಂತರವಾಗಿ ಕೋರ್ಟ್‌ ನಲ್ಲಿ ಗೆದ್ದುಕೊಂಡು ಬಂದಿದ್ದರು. ಸರ್ಕಾರದ ಪರವಾಗಿ ಕೋರ್ಟ್ ಆದೇಶ ಬರುವಂತೆ ವಾದ ಮಾಡಿ ಕೊಡುಗೆ ನೀಡುವ ಕೆಲಸ ಬೊಮ್ಮಾಯಿ ಮಾಡಿದ್ದಾರೆ ಎಂದು ಎಚ್ ಡಿಕೆ ಹೇಳಿದರು.

10 ಬಿಜೆಪಿ ಶಾಸಕರನ್ನು ಸದನದಿಂದ ಉಚ್ಚಾಟನೆ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ಸದನದಲ್ಲಿ ಸದಸ್ಯರು ಪ್ರಸ್ತಾಪ ಮಾಡಿದರು. ಹಲವು ಸಭಾಧ್ಯಕ್ಷರು ಕ್ಲಿಷ್ಟಕರ ಸಂದರ್ಭದಲ್ಲಿ ಸುಗಮ ಕಲಾಪ ನಡೆಸಿದ್ದಾರೆ. ಆದರೆ ಇವತ್ತಿನ ಸ್ಪೀಕರ್, ಸದಸ್ಯರಿಗೆ ಊಟಕ್ಕೆ ಬಿಡದೆ ಹೋದರೆ ಹೇಗೆ? ಸಭಾಧ್ಯಕ್ಷರು ಮತ್ತೆ ಕರೆದು ತಿಳಿಗೊಳಿಸಬೇಕಿತ್ತು. ಧರ್ಮೇಗೌಡರಿಗೆ ಹಲ್ಲೆ ಮಾಡಿದವರ ವಿರುದ್ಧ ಹಿಂದೆ ಕ್ರಮ ಆಗಿತ್ತಾ? ಎಂದು ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ಬೆಂಗಳೂರು – ಮೈಸೂರು ನಡುವೆ ಅಭಿವೃದ್ಧಿ ಮಾಡಬೇಕು ಎಂದು ಫ್ರೇಮ್ ವರ್ಕ್ ಆಗಿತ್ತು. ಹೆಚ್ಚುವರಿಯಾಗಿ ಜಾಗ ಇದೆ ಎಂದು ಗೊತ್ತಾಯಿತು. ಹೆಚ್ಚುವರಿ ಜಾಗವನ್ನು ಸರ್ಕಾರ ವಾಪಸ್ ಪಡೆದುಕೊಳ್ಳಬೇಕು. ಬೆಂಗಳೂರು ಮೈಸೂರು‌ ರಸ್ತೆಯ ಪಕ್ಕದಲ್ಲಿ ಜಾಗ ಖರೀದಿ ಮಾಡುತ್ತೇವೆ ಎಂದು ರೈತರಿಗೆ ನೋಟಿಸ್ ನೀಡಿದರು. ಹಿಂದೆ ಮಾಧುಸ್ವಾಮಿ ನೇತೃತ್ವದಲ್ಲಿ ಹೆಚ್ಚುವರಿ ಜಾಗವನ್ನು ವಾಪಸ್ ಪಡೆಯಬೇಕು ಎಂದು ತೀರ್ಮಾನ ಮಾಡಿದ್ದೆವು. ಹೆಚ್ಚುವರಿಯಾಗಿ ಒತ್ರುವರಿಯಾಗಿರುವ ಜಾಗವನ್ನು ವಶಕ್ಕೆ ಪಡೆದುಕೊಳ್ಳಬೇಕು. ಕ್ಯಾಬಿನೆಟ್ ಸಬ್‌ ಕಮಿಟಿ, ಸುಪ್ರೀಂ ಕೋರ್ಟ್ ವರದಿ ಆಧಾರಿಸಿ ಜಾಗ ವಶಕ್ಕೆ ಪಡೆಯಬೇಕು. ಟೋಲ್ ಆಡಿಟ್ ಆಗಬೇಕು, ಹೆಚ್ಚುವರಿ ಜಾಗ ವಶಕ್ಕೆ ಪಡೆಯಬೇಕು,ಹೆಚ್ಚಿನ ಪ್ರಕ್ರಿಯೆಗೆ ಅವಕಾಶ ನೀಡಬಾರದು ಎಂದು ನಮ್ಮ ಒತ್ತಾಯ ಎಂದರು.

ಹಿಂದಿನ ಲೇಖನಮಲ್ಲೇಶ್ವರ ವೆಸ್ಟ್ ಪಾರ್ಕ್ ಗಣಪತಿ ದೇವಾಲಯ
ಮುಂದಿನ ಲೇಖನಗೊಡಚಿನಮಲ್ಕಿ ಜಲಪಾತ