ಮನೆ ರಾಜ್ಯ ಬಿಜೆಪಿಯವರು ಧಮ್ಕಿ ಹಾಕಿರಬಹುದು, ಅದಕ್ಕೆ ಮಾಣಿಪ್ಪಾಡಿ ಉಲ್ಟಾ ಹೊಡೆದಿರಬಹುದು: ಜಿ. ಪರಮೇಶ್ವರ್

ಬಿಜೆಪಿಯವರು ಧಮ್ಕಿ ಹಾಕಿರಬಹುದು, ಅದಕ್ಕೆ ಮಾಣಿಪ್ಪಾಡಿ ಉಲ್ಟಾ ಹೊಡೆದಿರಬಹುದು: ಜಿ. ಪರಮೇಶ್ವರ್

0

ಬೆಳಗಾವಿ: “ಬಿಜೆಪಿಯವರು ಧಮ್ಕಿ ಹಾಕಿರಬಹುದು. ಅದಕ್ಕೆ ಅನ್ವರ್​​ ಮಾಣಿಪ್ಪಾಡಿ ಉಲ್ಟಾ ಹೊಡೆದಿರಬಹುದು” ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

Join Our Whatsapp Group

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಮಾಣಿಪ್ಪಾಡಿ ಅವರ ಕಾಂಗ್ರೆಸ್ ನಾಯಕರು ಆಮಿಷ ಒಡ್ಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, ವಕ್ಫ್ ಆಸ್ತಿ ವಿವಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಮಾಣಿಪ್ಪಾಡಿ, 150 ಕೋಟಿ ರೂ. ಆಫರ್ ಎಂದು ಹೇಳಿದ್ದರು. ಅದು ಪಬ್ಲಿಕ್ ಡೊಮೈನ್​ ನಲ್ಲೂ ಇದೆ. ಮಾಧ್ಯಮಗಳ ಮುಂದೆ ಅವರೇ ಹೇಳಿದ್ದಾರೆ. ಆ ವಿಡಿಯೋ ನಾವ್ಯಾರು ಪೋಸ್ಟ್ ಮಾಡಿದ್ದಲ್ಲ ಎಂದರು.

“ಬಿಜೆಪಿಯವರು ಮಾಣಿಪ್ಪಾಡಿಗೆ ಧಮ್ಕಿ ಹಾಕಿರಬಹುದು. ಅದಕ್ಕೆ ಅವರು ಉಲ್ಟಾ ಹೇಳಿರಬಹುದು. ತನಿಖೆಗೆ ಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ. ವಕ್ಫ್​ ವಿವಾದ ಮುಚ್ಚಿ ಹಾಕಲು ಆಮಿಷ ಒಡ್ಡಿರುವ ಆರೋಪದಲ್ಲಿ ಕಾಂಗ್ರೆಸ್ ನಾಯಕರಿದ್ದರೂ ತನಿಖೆ ಮಾಡೋಣ. ಪರ, ವಿರೋಧ ಟೀಕೆ ಟಿಪ್ಪಣಿ ಬರುತ್ತವೆ. ನಾವು ಸರ್ಕಾರದಲ್ಲಿ ಚರ್ಚೆ ಮಾಡುತ್ತೇವೆ. ಯಾರಿದ್ದಾರೆ ಇರಲಿ ತನಿಖೆ ಮಾಡೋಣ. ಯಾರದ್ದು ತಪ್ಪಿರುತ್ತೆ ಹೊರಬರುತ್ತದೆ” ಎಂದರು.